Advertisement

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

12:52 PM Dec 22, 2024 | Team Udayavani |

ಕಲಬುರಗಿ: ನೂತನ ಜಯದೇವ ಹೃದ್ರೋಗ ಆಸ್ಪತ್ರೆಯ ಕಲಬುರಗಿ ಶಾಖೆ ಉದ್ಘಾಟನೆ ಸಮಾರಂಭದ ಮುಖ್ಯ ವೇದಿಕೆ ಹಾಗೂ ಜಾಹೀರಾತು ಫಲಕದಲ್ಲಿ  ಕಾಂಗ್ರೆಸ್ ಶಾಸಕ ಅಲ್ಲಮಪ್ರಭು ಪಾಟೀಲ್ ಫೋಟೋ ಇಲ್ಲ ಎನ್ನುವ ಕಾರಣಕ್ಕೆ  ಬೆಂಬಲಿಗ ಲಿಂಗರಾಜ ಕಣ್ಣಿ ನೇತೃತ್ವದಲ್ಲಿ ಅಭಿಮಾನಿಗಳು ಪ್ರತಿಭಟನೆ ಮಾಡಿ ಬೇಸರ ವ್ಯಕ್ತಪಡಿಸಿದ ಘಟನೆ ರವಿವಾರ (ಡಿ.22) ನಡೆಯಿತು.

Advertisement

ಸ್ಥಳೀಯ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರ ಭಾವಚಿತ್ರದ ಬ್ಯಾನರ್, ಕಟೌಟ್ ಅಳವಡಿಸಿಲ್ಲ ಎಂದು ತಗಾದೆ ತೆಗೆದು ಆಸ್ಪತ್ರೆ ಮುಖ್ಯ ದ್ವಾರ ಮುಂದೆ‌ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ದಿಡೀರ್ ಪ್ರತಿಭಟನೆಯಿಂದಾಗಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.

ಜಿಲ್ಲಾಡಳಿತದ ಚಾತುರ್ಯದಿಂದ ಈ ಘಟನೆ ನಡೆದಿದೆ ಸ್ಥಳೀಯ ಶಾಸಕರೇ ಅವರ ಹೆಸರೇ ಹಾಕದಿದ್ದರೆ ಹೇಗೆ ಎಂದು ಲಿಂಗರಾಜ್ ಕಣ್ಣಿಗೆ ಸೇರಿದಂತೆ ಇತರರು ಪ್ರಶ್ನಿಸಿದರು. ಅಲ್ಲದೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕೆಂದು ಘೋಷಣೆ ಕೂಗಿದರು.

ಸಿಎಂಗೆ ಮುತ್ತಿಗೆ ಯತ್ನ

Advertisement

ತೊಗರಿ ಬೆಳೆಗೆ ನ್ಯಾಯಯುತವಾದ ಬೆಂಬಲ ಬೆಲೆ ಕೊಡುವಲ್ಲಿ ಹಾಗೂ ಪ್ರೋತ್ಸಾಹ ಧನ ನೀಡುವಲ್ಲಿ ವಿಫಲವಾಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಈ ಶರಣಬಸಪ್ಪ ಮಮಶೆಟ್ಟಿ ಸೇರಿದಂತೆ 5ಕ್ಕೂ ಹೆಚ್ಚು ರೈತರನ್ನು ಪೊಲೀಸರು ರವಿವಾರ ಬೆಳಗ್ಗೆ ನೂತನ ಜಯದೇವ ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next