Advertisement
ಪ್ರತಿಷ್ಠೆ, ಜಾತಿ, ಸಮುದಾಯದಲ್ಲಿ ಏಳಿಗೆ, ರಾಜಕೀಯ ಬಲಾಬಲಗಳ ನಡುವೆ ಜರುಗುತ್ತಿರುವ ಗ್ರಾಪಂ ಚುನಾವಣೆ ಜೋರಾಗಿದೆ. ಗ್ರಾಮಗಳಲ್ಲಿರುವ ಕಟ್ಟೆ, ದೇವಸ್ಥಾನ, ಮಂದಿರಗಳ ಆವರಣ, ಶಾಲೆ-ಕಾಲೇಜು ಮೈದಾನಗಳು, ಹೋಟೆಲ್‌ಗಳಲ್ಲಿ ಯಾರು ಯಾರು ಚುನಾವಣೆಗೆ ನಿಲ್ಲುತ್ತಿದ್ದಾರೆ, ಯಾವ ಪಕ್ಷ ಅವರಿಗೆ ಬೆಂಬಲ ಕೊಡುತ್ತಿದೆ, ಅವರ ಹಿಂದೆ ಯಾರಿದ್ದಾರೆ,ಅವರು ಗೆದ್ದರೆ ಅಥವಾ ಸೋತರೆ ಮುಂದೇನು ಹೀಗೆ ಹತ್ತು ಹಲವು ರೀತಿಯಲ್ಲಿ ಚರ್ಚೆಗಳು ಪ್ರಾರಂಭವಾಗಿವೆ.
Related Articles
Advertisement
ಕ್ಷೇತ್ರದಲ್ಲಿ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುವಂತಾಗಿದ್ದು, ತನ್ನ ಅಸಿತ್ವ ಕಂಡುಕೊಳ್ಳಲುಸಾಕಷ್ಟು ಪ್ರಯತ್ನ ಮಾಡುತ್ತಿದೆ. ಕಳೆದ ವಿಧಾನಸಭಾಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧೆಗಿಳಿದ್ದ ಅರಸೀಕೆರೆ ಎನ್. ಕೊಟ್ರೇಶ್ ಅವರು ಪಕ್ಷದ ಸಂಘಟನೆ ವಿಷಯದಲ್ಲಿ ತಟಸ್ಥರಾಗಿರುವುದರಿಂದ ಪಕ್ಷದ ಚೇತರಿಕೆ ಕಂಡು ಬರುತ್ತಿಲ್ಲ .
ಈಗಾಗಲೇ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಪ್ರತಿಯೊಂದು ಗ್ರಾಪಂಗೆ ಪ್ರಮುಖರು ಮತ್ತು ಸಹ ಪ್ರಮುಖರು ಎಂದು ನೇಮಕ ಮಾಡಿ ಅವರ ಮೇಲೆ ಉಸ್ತುವಾರಿ ನೇಮಕ ಮಾಡಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ದೇಶನ ನೀಡಲಾಗಿದೆ. ಬಿಜೆಪಿಯ ಜನಪ್ರಿಯ ಕೆಲಸಗಳನ್ನು ಮೆಚ್ಚಿಕೊಂಡಿರುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ. –ಸತ್ತೂರು ಹಾಲೇಶ್, ಬಿಜೆಪಿ ತಾಲ್ಲೂಕಾಧ್ಯಕ್ಷ
ಕಾಂಗ್ರೆಸ್‌ನಲ್ಲಿ ಎಷ್ಟೇ ಬಣಗಳಿದ್ದರೂ ಅವರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ. ನೇಮಕವಾಗಿರುವ ಉಸ್ತುವಾರಿ ನೇತೃತ್ವದಲ್ಲಿ ಶೀಘ್ರವೇ ಸಭೆ ನಡೆಸಿ ಗ್ರಾಪಂಗಳ ಆಯಾ ಮುಖಂಡರಿಗೆ ಜವಾಬ್ದಾರಿ ನೀಡುತ್ತೇವೆ. ಆಡಳಿತಪಕ್ಷದ ದುರಾಡಳಿತದಿಂದ ಬೇಸತ್ತಿರುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಮುನ್ನಡಿ ಬರೆಯಲಿದ್ದಾರೆ. – ಬೇಲೂರು ಅಂಜಪ್ಪ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ
ಪಕ್ಷ ಸಂಘಟನೆ ವಿಷಯದಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಹಿಂದೆ ಬಿದ್ದಿರುವುದು ನಿಜ. ಕೆಲವುಪಂಚಾಯ್ತಿಗಳಲ್ಲಿ ಮಾತ್ರ ನಮ್ಮವರು ನಾಮಪತ್ರ ಸಲ್ಲಿಕೆಮಾಡುತ್ತಿದ್ದಾರೆ. ಅವರಿಗೆ ಬೆಂಬಲ ನೀಡುತ್ತೇವೆ. ಈ ಸಂಬಂಧ ಯಾವುದೇ ಸಭೆ ಸಮಾರಂಭ ಮಾಡುವ ಬದಲಾಗಿ ದೂರವಾಣಿ ಮೂಲಕ ಅವರಿಗೆ ನೈತಿಕ ಬಲ ತುಂಬ ಕೆಲಸ ಮಾಡುತ್ತೇವೆ. – ಸಾಸ್ವಿಹಳ್ಳಿ ಚನ್ನಬಸವನಗೌಡ, ಜೆಡಿಎಸ್ ತಾಲ್ಲೂಧ್ಯಕ್ಷ
–ಎಸ್.ಎನ್. ಕುಮಾರ್ ಪುಣಬಗಟ್ಟಿ