ಹರಪನಹಳ್ಳಿ: ಸಾಲಭಾದೆ ತಾಳಲಾರದೆ ರೈತರೊಬ್ಬರು ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅರೇಮಜ್ಜಿಗೇರಿ ಗ್ರಾಮದಲ್ಲಿ ಡಿ.13ರ ಶುಕ್ರವಾರ ಮುಂಜಾನೆ ನಡೆದಿದೆ.
ಗ್ರಾಮದ ಎಚ್.ಮಂಜಪ್ಪ (55) ಮೃತ ದುರ್ದೈವಿ.
ಮೃತ ಮಂಜಪ್ಪ ತಮ್ಮ ಕೃಷಿ ಚಟುವಟಿಕೆಗಾಗಿ ನೀಲಗುಂದ ಸಹಕಾರ ಸಂಘದಲ್ಲಿ ಮತ್ತು ಖಾಸಗಿಯಾಗಿ ಸಾಲ ಪಡೆದಿದ್ದರು. ಜೊತೆಗೆ ಕೈಸಾಲವನ್ನೂ ಮಾಡಿಕೊಂಡಿದ್ದರು. ಸಾಲ ಮರುಪಾವತಿ ಮಾಡಲಾಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿ ತಮ್ಮ ಜಮೀನಿನಲ್ಲಿದ್ದ ಬೇವಿನ ಮರಕ್ಕೆ ಮುಂಜಾನೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.