Advertisement

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

11:02 AM Dec 19, 2024 | Team Udayavani |

ಬಾಗಲಕೋಟೆ: ರಾಜ್ಯದ ಹಿಂದುಳಿದವರು, ದಲಿತರ‌ ಸಂಘಟನೆ ಹಾಗೂ‌ ರಾಷ್ಟ ಭಕ್ತರನ್ನು ತಯಾರಿಸುವ ಉದ್ದೇಶದಿಂದ ಕ್ರಾಂತಿವೀರ ಬ್ರಿಗೇಡ್ ಲೋಕಾರ್ಪಣೆ ಕಾರ್ಯಕ್ರಮ ಫೆ.4ರ‌ ರಥ ಸಪ್ತಮಿ ದಿನ ಬಸವಣ್ಣವನರ ಜನ್ಮ‌ಭೂಮಿ‌ ಬಸವನಬಾಗೇವಾಡಿಯಲ್ಲಿ ನಡೆಯಲಿದೆ ಎಂದು‌ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

Advertisement

ಗುರುವಾರ‌ (ಡಿ.19) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವನಬಾಗೇವಾಡಿಯಲ್ಲಿ 1008 ಸ್ವಾಮೀಜಿಗಳ ಪಾದಪೂಜೆ ಮಾಡುವ‌ ಮೂಲಕ ಈ ಬ್ರಿಗೇಡ ಅಧಿಕೃತವಾಗಿ ಚಾಲನೆಗೊಳ್ಳಲಿದೆ ಎಂದರು.

1 ಲಕ್ಷ ಜನರೊಂದಿಗೆ ಸಮಾವೇಶ

ಫೆ.4ರಂದು 1008 ಸ್ವಾಮೀಜಿಗಳ ನೇತೃತ್ವ ಹಾಗೂ 1 ಲಕ್ಷ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷದ ನಾಯಕರೂ ಬಂದರೂ ಸ್ವಾಗತವಿದೆ. ನಾವಾಗಿಯೇ ಯಾರನ್ನೂ ಆಹ್ವಾನಿಸಿಲ್ಲ. ಇನ್ನೂ ಸಾಕಷ್ಟು ಸಮಯವಿದೆ. ಯಾರು ಯಾರು ಬರಲಿದ್ದಾರೆ ನೋಡೋಣ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಗುಂಪುಗಾರಿಕೆಯಿದೆ. ಕಾಂಗ್ರೆಸ್ ಸಂಪೂರ್ಣ ಒಡೆದ ಮನೆಯಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಬಂಡೆಯಾಗಿರುವೆ ಎನ್ನುವುದು, ಸಿಎಂ ಸ್ಥಾನಕ್ಕೆ ಟವೆಲ್ ಹಾಕಿದ್ದಾರೆ. ಫೆ.4ರ ರಥ ಸಪ್ತಮಿ ಬಳಿಕ ರಾಜ್ಯದಲ್ಲಿ ರಾಜಕೀಯದಲ್ಲಿ ಬದಲಾವಣೆ ಆಗಬಹುದು. ಯಾವ ಪಕ್ಷ ಎಷ್ಟು ಹೋಳಾಗುತ್ತದೆ ಎಂಬುದು ಗೊತ್ತಿಲ್ಲ ಎಂದರು.

Advertisement

ಸ್ವಾಮೀಜಿಗಳ ಮಾರ್ಗದರ್ಶಕರ ಮಂಡಳಿ

ನೂತನ ಬ್ರಿಗೇಡ್ ಗೆ ರಾಜ್ಯ ವಕ್ತಾರರನ್ನಾಗಿ ಬಾಗಲಕೋಟೆಯ ವಕೀಲ ವೀರಣ್ಣ ಹಳೇಗೌಡರ ನೇಮಕ ಮಾಡಲಾಗಿದೆ. ಮುಖ್ಯವಾಗಿ ಬ್ರಿಗೇಡ್ ಯಾವ ರೀತಿ ಮುನ್ನಡೆಯಬೇಕು. ಸಂಘಟನೆಯ ಪದಾಧಿಕಾರಿಗಳು ಯಾರ್ಯಾರು ಆಗಬೇಕು ಎಂಬುದನ್ನು ಸ್ವಾಮೀಜಿಗಳೇ ನಿರ್ಧರಿಸಲಿದ್ದಾರೆ. ಇದಕ್ಕಾಗಿ ಸ್ವಾಮೀಜಿಗಳ ಮಾರ್ಗದರ್ಶಕರ ಮಂಡಳಿ ರಚಿಸಲಾಗಿದೆ ಎಂದರು.

ಈ ಮಂಡಳಿಗೆ ವಿಜಯಪುರ ಜಿಲ್ಲೆಯ ಮಖಣಾಪುರದ ಸೋಮಲಿಂಗೇಶ್ವರ ಶ್ರೀ ಅಧ್ಯಕ್ಷರಾಗಿದ್ದು, ಅಥಣಿ ತಾಲೂಕಿನ ಕವಲಗುಡ್ಡದ ಶ್ರೀ ಅಮರೇಶ್ವರ ಸ್ವಾಮೀಜಿ ಪ್ರಧಾನ ಕಾರ್ಯದರ್ಶಿ ಹಾಗೂ ಜಮಖಂಡಿ ತಾಲೂಕು ‌ಜಕನೂರಿನ ಮಾಧುಲಿಂಗ ಶ್ರೀ ಖಜಾಂಚಿಯಾಗಿದ್ದಾರೆ ಎಂದು ತಿಳಿಸಿದರು.

ವಕೀಲ ವೀರಣ್ಣ ಹಳೇಗೌಡರ, ಈ. ಕಾಂತೇಶ, ರಘು ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next