Advertisement

Manipal MIT: ಅಂತಾರಾಷ್ಟ್ರೀಯ ಕಾರ್ಯಾಗಾರ

11:00 AM Dec 19, 2024 | Team Udayavani |

ಮಣಿಪಾಲ: ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ(ಎಂಐಟಿ)ಯ ಯಾಂತ್ರಿಕ, ಕೈಗಾರಿಕೆ ವಿಭಾಗ ಹಾಗೂ ಏರೊನಾಟಿಕಲ್‌ ಆ್ಯಂಡ್‌ ಅಟೋಮೊಬೈಲ್‌ ಎಂಜಿನಿಯರಿಂಗ್‌ ವತಿಯಿಂದ ಮೈಂಟೇನೆನ್ಸ್‌ ಆ್ಯಂಡ್‌ ಇಂಟೆಲಿಜೆಂಟ್‌ ಅಸೆಟ್‌ ಮ್ಯಾನೇಜ್ಮೆಂಟ್‌ ಮತ್ತು ಕಂಪ್ಯೂಟೇಷನಲ್‌ ಮೆಥಡ್ಸ್‌ ಇನ್‌ ಎಂಜಿನಿಯರಿಂಗ್‌ ಆ್ಯಂಡ್‌ ಹೆಲ್ತ್‌ ಸೈನ್ಸ್‌ ಬಗ್ಗೆ ಅಂತಾರಾಷ್ಟ್ರೀಯ ಕಾರ್ಯಾಗಾರ ಜರಗಿತು.

Advertisement

ಎಸಿಇ ಮೈಕ್ರೋಮ್ಯಾಟಿಕ್ಸ್‌ ಪ್ರೈ.ಲಿ.ಸಿಇಒ ಹರೀಶ್‌ ಬಿ. ಮಾತನಾಡಿ, ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಮೆಕ್ಯಾನಿಕಲ್‌ ಹಾಗೂ ಎಐ ತಂತ್ರಜ್ಞಾನದಿಂದಾಗಿ ಮತ್ತಷ್ಟು ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದರು.

ಮಾಹೆ ವಿವಿ ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್‌, ಎಂಐಟಿ ಜಂಟಿ ನಿರ್ದೇಶಕ ಡಾ|ಸೋಮಶೇಖರ ಭಟ್‌ ಶುಭ ಹಾರೈಸಿದರು.

ಆಸ್ಟ್ರೇಲಿಯಾದ ಫೆಡರೇಶನ್‌ ಯುನಿವರ್ಸಿಟಿ, ಅಸೆಟ್‌ ಮ್ಯಾನೇಜ್ಮೆಂಟ್‌ ಕೌನ್ಸಿಲ್‌, ಹುಡ್ಡರಿÕಫೈಲ್ಡ್‌ ವಿವಿ, ಭಾರತೀಯ ಆಸ್ತಿ ನಿರ್ವಹಣ ಸಂಸ್ಥೆ, ಸ್ವೀಡನ್‌ನ ಲೂಲೈ ಯುನಿವರ್ಸಿಟಿ ಆಫ್ ಟೆಕ್ನಾಲಜಿ, ದಕ್ಷಿಣ ಆಫ್ರಿಕಾದ ಜಾನ್ಸ್‌ಬರ್ಗ್‌ ವಿವಿ, ಬಿಎಂಎಲ್‌ ಮುಂಜಾಲ್‌ ವಿವಿಯ ಸ್ಕೂಲ್‌ ಆಫ್ ಮ್ಯಾನೇಜ್ಮೆಂಟ್‌, ಎಸಿಇ ಮೈಕ್ರೋಮ್ಯಾಟಿಕ್ಸ್‌ ಪ್ರೈ.ಲಿ., ಫ್ರಾನಿಯುಸ್‌ ಇಂಡಿಯಾ, ಮಲೇಷ್ಯಾದ ಪುತ್ರ ವಿವಿ, ಜಪಾನ್‌ನ ಕ್ಯೂಷೂ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ, ಯುಕೆಯ ಕ್ರ್ಯಾನ್‌ಫೀಲ್ಡ್‌ ವಿವಿ, ಸಹಯೋಗದಲ್ಲಿ ಫ್ರ್ಯಾಕ್ಟಲ್‌ ವರ್ಕ್ಸ್, ಪಿಲಿಪ್ಸ್‌ ಅಡಿಟಿವ್‌, ಕಾಸ್ಮೋಲ್‌ ಮತ್ತು ಎಂಐಟಿ ಹಳೆ ವಿದ್ಯಾರ್ಥಿಗಳ ಸಹಕಾರದಲ್ಲಿ ಆಯೋಜಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next