Advertisement

ಬಾರ್ಸಿಲೋನಾ ಕ್ಲಬ್‌ ತೊರೆಯುವ ಮೆಸ್ಸಿ

08:57 PM Aug 26, 2020 | mahesh |

ಬಾರ್ಸಿಲೋನಾ (ಸ್ಪೇನ್‌): ಇತ್ತೀಚೆಗಷ್ಟೇ ಬೇಯರ್ನ್ ಮ್ಯೂನಿಚ್‌ ಕೂಟ ಮುಗಿದಿದೆ. ಅಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬೇಯರ್ನ್ ಮ್ಯೂನಿಚ್‌ ಎದುರು ಲಿಯೋನೆಲ್‌ ಮೆಸ್ಸಿ ನಾಯಕತ್ವದ ಬಾರ್ಸಿಲೊನಾ 2-8ರಿಂದ ಹೀನಾಯವಾಗಿ ಸೋತಿತ್ತು. ಆ ಸಂಕಟದ ಬೆನ್ನಲ್ಲೇ ನಾಯಕ ಮೆಸ್ಸಿ ತಂಡವನ್ನು ತೊರೆಯುವುದಾಗಿ ಪ್ರಕಟಿಸಿದ್ದಾರೆ. ಅವರು ಈಗಾಗಲೇ ಮ್ಯಾಂಚೆಸ್ಟರ್‌ ಸಿಟಿ ತಂಡದೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Advertisement

ವಿಶ್ವದ ಫ‌ುಟ್‌ಬಾಲ್‌ ದಂತಕತೆ ಮೆಸ್ಸಿ ಒಂದು ಕಾಲದಲ್ಲಿ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಿಕೊಂಡು ಬರುತ್ತಿದ್ದರು. ಇತ್ತೀಚೆಗೆ ಆ ಶಕ್ತಿ ಕುಗ್ಗಿದೆ ಎನ್ನುವುದು ಹಲವು ಪಂದ್ಯಗಳಲ್ಲಿ ಸಾಬೀತಾಗಿದೆ. ಇದಕ್ಕೆ ಇತರ ಆಟಗಾರರ ಕಳಪೆ ಆಟವೂ ಕಾರಣವಿರಬಹುದು. 2018ರಿಂದ ಸತತವಾಗಿ ಸೋಲುಗಳೇ ಎದುರಾಗುತ್ತಿವೆ. 2020ರಲ್ಲಂತೂ ಪೂರ್ತಿಯಾಗಿ ಸೋಲೇ ಕಂಡುಬಂದಿದೆ. ಮೆಸ್ಸಿ ಬಾರ್ಸಿಲೋನಾ ತೊರೆಯಲು ಇದೇ ಕಾರಣ ಇರಬಹುದು.

Advertisement

Udayavani is now on Telegram. Click here to join our channel and stay updated with the latest news.

Next