ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮಹಿಳೆಯರು ಸೇರಿ ಎಲ್ಲರಿಗೂ ಸುರಕ್ಷತಾ ಪ್ರದೇಶ. ಇಲ್ಲಿ ಮಹಿಳಾ ಸುರಕ್ಷತೆ ಕುರಿತು ಭರವಸೆ ನೀಡುವ ಅಗತ್ಯವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.
ಕನಕಪುರ ರಸ್ತೆಯಲ್ಲಿರುವ ಪ್ರಸ್ಟಿಜ್ ಶ್ರೀಹರಿ ಖೋಡೆ ಸೆಂಟರ್ ಆಫ್ ಪಫಾರ್ಮಿಂಗ್
ಆರ್ಟ್ಸ್ನಲ್ಲಿ ನಡೆದ ಸುರûಾ ಮಹಿಳಾ ಸುರಕ್ಷತೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆಲ ವಿದ್ಯಾರ್ಥಿನಿ ಯರು, ಬೆಂಗಳೂರು ಮಹಿಳೆಯರಿಗೆ ಸೇಫ್ ಸಿಟಿಯಾ? ಅದಕ್ಕೆ ಯಾವ ರೀತಿ ಭರವಸೆ ನೀಡುತ್ತಿರಾ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಆಯುಕ್ತರು, ಬೆಂಗಳೂರು ಮೊದಲಿನಿಂದಲೇ ಮಹಿಳೆಯರು ಸೇರಿ ಎಲ್ಲರಿಗೂ ಸೇಫ್ ಸಿಟಿ. ಇಲ್ಲಿ ಭರವಸೆ ಎಂಬುದಿಲ್ಲ. ಇನ್ನು ನಗರ ಪೊಲೀಸರು ಮಹಿಳಾ ಸುರಕ್ಷತೆಗೆ ಹೆಚ್ಚ ಆದ್ಯತೆ ನೀಡಿದ್ದಾರೆ. ಅದಕ್ಕಾಗಿ ಸಾಮಾನ್ಯ ಹೊಯ್ಸಳ ಮಾತ್ರವಲ್ಲ, ಪಿಕ್ ಹೊಯ್ಸಳಗಳು ಕಾರ್ಯಾಚರಣೆ ಮಾಡುತ್ತಿವೆ. ಕರೆ ಮಾಡಿದ 7-8 ನಿಮಿಷಗಳಲ್ಲೇ ಹೊಯ್ಸಳ ಪೊಲೀಸರು ಸ್ಥಳಕ್ಕೆ ಧಾವಿಸಲಿ ದ್ದಾರೆ. ಯಾರಾದರೂ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ದೂರು ನೀಡಬಹುದು. ಮಹಿಳೆಯರು ಸೇರಿ ಪ್ರತಿಯೊಬ್ಬರೂ ಸುರಕ್ಷಿತವಾಗಿದ್ದಾರೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಮಹಿಳಾ ಸುರಕ್ಷತೆಗಾಗಿ ನಗರ ಪೊಲೀಸರು ಜಾರಿಗೆ ತಂದಿರುವ ಸುರûಾ ಆ್ಯಪ್ ಹಾಗೂ ಇತರೆ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಅಲ್ಲದೆ, ಮಹಿಳಾ ಸುರಕ್ಷತೆ ಬಗ್ಗೆ ಸಂವಾದ ಕೂಡ ನಡೆಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಎಂ.ಜಗಲಸಾರ, ಇಂಡಿಯಾ ವೈಡ್ ಸಿಟಿಜನ್ ಅಭಿಯಾನಸಮೂಹ ಸಂಸ್ಥಾಪಕಿ ತಾರಾ ಕೃಷ್ಣಮೂರ್ತಿ, ಆಂಗ್ಲ ಪತ್ರಿಕೆಯ ಪತ್ರಕರ್ತೆ ನಿತ್ಯ ಮಂಧ್ಯಂ, ಮಕ್ಕಳ ತಜ್ಞೆ ಡಾ ಸುಪ್ರಜಾ ಮತ್ತಿತರರು ಉಪಸ್ಥಿತರಿದ್ದರು.