Advertisement
ಗ್ರೀನ್ ಪೀಸ್ ಇಂಡಿಯಾ ಇತ್ತೀಚೆಗೆ ಬೆಂಗಳೂರಿನ ವಿವಿಧೆಡೆ ವಾಯು ಗುಣಮಟ್ಟದ ಕುರಿತು ಅಧ್ಯಯನ ನಡೆಸಿ ವರದಿಯೊಂದನ್ನು ಬಹಿರಂಗಪಡಿಸಿದೆ. ಬೆಂಗಳೂರಿನಲ್ಲಿ ವಾಹನಗಳ ಹೊಗೆಯಿಂದ ಉತ್ಪತ್ತಿ ಯಾಗುವ ವಿಷ ಅನಿಲ ನೈಟ್ರೋಜನ್ ಡೈ ಆಕ್ಸೈಡ್ ಮಿತಿ ಮೀರಿರುವ ಅಂಶವನ್ನು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಇದು ವಾಹನಗಳ ಹೊಗೆಯಿಂದ ವಾತಾವರಣಕ್ಕೆ ಸೇರುವ ಬರಿಗಣ್ಣಿಗೆ ಕಾಣದೇ ಇರುವ ವಿಷಕಾರಿ ವಸ್ತುಗಳಾಗಿವೆ. ಬೆಂಗಳೂರಿನ 13 ಆಂಬಿ ಯೆಂಟ್ ಏರ್ ಕ್ವಾಲಿಟಿ ಮಾನಿ ಟರಿಂಗ್ ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ವಿವಿಧ ಫಲಿತಾಂಶ ನೀಡಿವೆ. ನಗರದ ಸಿಟಿ ರೈಲ್ವೆ ನಿಲ್ದಾಣದಲ್ಲಿ ಅತ್ಯಧಿಕ ನೈಟ್ರೋ ಜನ್ ಡೈ ಆಕ್ಸೈಡ್ ಗಾಳಿಯಲ್ಲಿರುವುದು ಪತ್ತೆಯಾಗಿತ್ತು. ಇದು ವರ್ಷದ ಶೇ.80ಕ್ಕಿಂತ ಹೆಚ್ಚು ದಿನ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿಗಳನ್ನು ಮೀರಿದೆ. ಇದಲ್ಲದೆ, ಬಿಟಿಎಂ ಲೇಔಟ್ ಮತ್ತು ಸಿಲ್ಕ್ ಬೋರ್ಡ್ ರಸ್ತೆಯ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರ ದಲ್ಲೂ ಕಳಪೆ ವಾಯು ಗುಣಮಟ್ಟ ವರದಿಯಾಗಿದೆ. ಉತ್ತರ ಭಾರತ ಹೊರತುಪಡಿಸಿ ಬೆಂಗಳೂರು ಸೇರಿದಂತೆ ಭಾರತದ 7 ನಗರಗಳಲ್ಲಿ ಅತ್ಯಂತ ಕಲುಷಿತ ವಾತಾವರಣವಿರುವುದು ಪತ್ತೆಯಾಗಿದೆ.
Advertisement
Bengaluru: ನಗರದಲ್ಲಿ ಅಪಾಯಕಾರಿ ನೈಟ್ರೋಜನ್ ಡೈಆಕ್ಸೈಡ್!
02:51 PM Dec 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.