Advertisement

ಎರಡು ದಿನಗಳಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿ

07:20 AM Jul 05, 2018 | |

ಮಡಿಕೇರಿ: ಮಾಕುಟ್ಟದಲ್ಲಿ ಭೂ ಕುಸಿತ ಉಂಟಾಗಿ ವಾಹನ ಸಂಚಾರ ಸ್ಥಗಿತಗೊಂಡಿರುವ ಕೊಡಗು- ಕೇರಳ ನಡುವಿನ ಅಂತಾರಾಜ್ಯ ಹೆದ್ದಾರಿ ಕಾಮಗಾರಿಯನ್ನು ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಪರಿಶೀಲಿಸಿದರು.

Advertisement

ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿದ ಅವರು ರಸ್ತೆ ಅವ್ಯವಸ್ಥೆ ಮತ್ತು ಕಾಮಗಾರಿಯ ಪ್ರಗತಿಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದರು. ಲೋಕೋಪಯೋಗಿ ಇಲಾಖೆ, ಮಡಿಕೇರಿಯ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ರಸ್ತೆ ಗುಣಮಟ್ಟದ ಧೃಢೀಕರಣದ ಆಧಾರದ ಮೇಲೆ 2  ದಿನಗಳ ಬಳಿಕ  ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದರು.

ಮಾಕುಟ್ಟ ರಸ್ತೆಯಲ್ಲಿ ಈಗಾಗಲೇ ಲಘು ವಾಹನ ಸಂಚಾರಕ್ಕೆ ಅಗ್ಯವಿರುವಷ್ಟು ಕಾಮಗಾರಿ ಪೂರ್ಣವಾಗಿದ್ದು, ರಸ್ತೆಗೆ ಕುಸಿದಿದ್ದ ಬರೆಯ ಮಣ್ಣು ತೆಗೆದು ರಸ್ತೆಯ ಮೇಲೆ ಬಿದ್ದಿದ್ದ ಮರಗಳನ್ನುಬದಿಗೆ ಸರಿಸಲಾಗಿದೆ. ಎರಡನೇ ಹಂತದ ರಸ್ತೆ ದುರಸ್ತಿಗಾಗಿ6 ಕೋಟಿ ವೆಚ್ಚದ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಶ್ರೀವಿದ್ಯಾ ತಿಳಿಸಿದರು.

ಮಾಕುಟ್ಟ ರಸ್ತೆ ವೀಕ್ಷಣೆ ಸಂದರ್ಭ ಜಿಲ್ಲಾಧಿಕಾರಿ ಜೊತೆಯಲ್ಲಿ ತಾಲೂಕು ತಹಶೀಲ್ದಾರ್‌ ಆರ್‌.ಗೋವಿಂದರಾಜ್‌, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕಅಭಿಯಂತರ ಪ್ರಭು, ಸಹಾಯಕ ಅಭಿಯಂತರ ಸುರೇಶ್‌, ಸರ್ಕಲ್‌ ಇನ್ಸ್‌ಪೆಕ್ಟರ್‌ ಕುಮಾರ್‌ ಆರಾಧ್ಯ, ಅರಣ್ಯ ವಿಭಾಗಾಧಿಕಾರಿ ಮರಿಯಾ ಕ್ರಿಸ್ತರಾಜು, ಕಂದಾಯ ಪರಿವೀಕ್ಷಕ ಪಳಂಗಪ್ಪ, ಠಾಣಾಧಿಕಾರಿ ಸುರೇಶ್‌ ಬೋಪಣ್ಣ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ಪೊಲೀಸರಿಗೆ ತರಾಟೆ
ಜಿಲ್ಲಾಧಿಕಾರಿ ಮಾಕು ಟ್ಟಕ್ಕೆ ತೆರಳಿದ  ಸಂದರ್ಭ ಪೆರುಂ ಬಾಡಿ ಚೆಕ್‌ಪೋಸ್ಟ್‌ನ ಲ್ಲಿದ್ದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಯಾರೂ ಹಣ ಪಡೆದು ಲಘು ವಾಹನ ಗಳನ್ನು ಮಾಕುಟ್ಟಕ್ಕೆ ಬಿಡು ವಂತಿಲ್ಲ ಎಂದು ಆದೇಶಿಸಿದರು. ಚೆಕ್‌ಪೋಸ್ಟ್‌ನ ಸಿಬಂದಿ ಶಿಸ್ತುಬದ್ಧ ವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು.

Advertisement

ಜನರ ಮನವಿ 
ರಸ್ತೆಯನ್ನು ಶೀಘ್ರ ಅಭಿ ವೃದ್ಧಿಪಡಿಸಿ ವಾಹನಗಳು ಸಂಚರಿಸಲು ಕ್ರಮ ಕೈಗೊಳ್ಳುವಂತೆ ಕೂಟು ಪೊಳೆ ಹಾಗೂ ಮಾಕುಟ್ಟ ನಿವಾಸಿ ಗಳು ಮನವಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next