Advertisement
ಸಮ್ಮೇಳನದಲ್ಲಿ ಏನೇನಾಯಿತು?ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ಮೆರವಣಿಗೆ
ಗಮನ ಸೆಳೆದ ಕನ್ನಡ ನಾಡಿನ ಸಂಸ್ಕೃತಿ ಬಿಂಬಿಸುವ ಕಲಾ ತಂಡಗಳು
ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷ ಗೊರುಚ, ಸಿಎಂರಿಂದ ಚಾಲನೆ
ನಾಡು ನುಡಿಗೆ ಶ್ರಮಿಸಿದ 45 ಸಾಧಕರಿಗೆ ಸಮ್ಮೇಳನದಲ್ಲಿ ಸಮ್ಮಾನ
ವಿಚಾರಗೋಷ್ಠಿಗಳು, ಕವಿಗೋಷ್ಠಿಗಳಲ್ಲಿ ವಿಚಾರ ಪ್ರಚೋದನೆ
ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜ ಮಹರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ (ಮಂಡ್ಯ): ಇನ್ನು ಮುಂದೆ ನಮ್ಮ ಸಚಿವಾಲಯದ ಎಲ್ಲ ಟಿಪ್ಪಣಿ, ವಿಧಾನಸೌಧದಲ್ಲಿ ಮುಂದೆ ಬರುವ ಎಲ್ಲ ಮಸೂದೆಗಳು ಕನ್ನಡದಲ್ಲಿ ಇರುವಂತೆ ನೋಡಿ ಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
Related Articles
Advertisement
ಕನ್ನಡ ಉಳಿಯ ಬೇಕಾದರೆ ಸಮಗ್ರ ಶಿಕ್ಷಣ ಪದ್ಧತಿ ಬದಲಾಗಬೇಕಿದೆ. ನಮ್ಮ ಹೃದಯ ಮತ್ತು ಮನಸ್ಸನ್ನು ಕ್ರಿಯಾತ್ಮಕಗೊಳಿಸುವ ಪದ್ಧತಿ ನಮಗೆ ಬೇಕು. ಇದಕ್ಕಾಗಿ ಹೆಡ್, ಹಾರ್ಟ್ ಮತ್ತು ಹ್ಯಾಂಡ್ ಎಂಬ 3 “ಎಚ್’ ಸೂತ್ರಬೇಕು ಎಂದು ಸಿಎಂ ಪ್ರತಿಪಾದಿಸಿದರು. ಒಒಡಿ ಹಾಜರಾತಿಗಾಗಿ ಪರದಾಟ
ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಒಒಡಿ ಸಹಿತ ರಜೆ ನೀಡಲಾಗಿತ್ತು. ಕಡ್ಡಾಯವಾಗಿ ಭಾಗವಹಿಸಿ ಹಾಜರಾತಿ ಪಡೆಯಬೇಕು ಎಂದು ಸೂಚಿಸಲಾಗಿತ್ತು. ಆದರೆ, ಹಾಜರಾತಿ ಪಡೆಯಲು ಪರದಾಡಬೇಕಾಯಿತು. ಸಮ್ಮೇಳನದ ಸಹಾಯವಾಣಿ ಬಳಿ ಅಲೆದು ನೌಕರರು ಸುಸ್ತಾದರು. ಹಾಜರಾತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೆಸರೇಳದ ನೌಕರರೊಬ್ಬರು ಅಳಲು ತೋಡಿಕೊಂಡರು. ತಮಿಳು ಚಿತ್ರ ಪ್ರದರ್ಶನ: ಆಕ್ರೋಶ
ಮಂಡ್ಯದಲ್ಲಿ 30 ವರ್ಷಗಳ ನಂತರ 87ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂಭ್ರಮಕ್ಕೆ ಕಾರಣವಾ ಗಿದ್ದು, ಇಡೀ ನಗರ ಸಂಪೂರ್ಣ ಕನ್ನಡಮಯ ವಾಗಿದೆ. ಆದರೆ, ಮಂಡ್ಯ ಕೆಲವು ಚಿತ್ರಮಂದಿರ ಗಳಲ್ಲಿ ತಮಿಳು ಸಿನಿಮಾ ವಿಡುತಲೈ ಪ್ರದರ್ಶನ ವಾಗುತ್ತಿತ್ತು. ಇದಕ್ಕೆ ಕನ್ನಡಾಭಿಮಾನಿಗಳು, ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಹಿತಿ ಕೊರತೆಯಿಂದ ಶೌಚಕ್ಕೆ ಗದ್ದೆ ಬಯಲು
ಸಮ್ಮೇಳನದಲ್ಲಿ ಯಾವ ಕಡೆ ಶೌಚಾಲಯವಿದೆ ಎಂಬ ಅರಿವಿಲ್ಲದ ಪರಿಣಾಮ ಸಾರ್ವಜನಿ ಕರು ಸುತ್ತಮುತ್ತ ಗದ್ದೆ, ಬಯಲು ಪ್ರದೇಶ ವನ್ನೇ ಶೌಚಾಲಯವನ್ನಾಗಿ ಬಳಸುತ್ತಿದ್ದ ದೃಶ್ಯ ಕಂಡು ಬಂದಿತು. ಕೆಲವು ಸಾರ್ವಜನಿಕರು ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ದಳಪತಿಗಳು, ಬಿಜೆಪಿ ನಾಯಕರು ಗೈರು
ಸಮ್ಮೇಳನಕ್ಕೆ ಜೆಡಿಎಸ್ ಹಾಗೂ ಬಿಜೆಪಿ ನಾಯ ಕರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಸ್ವಾಗತ ಸಮಿತಿಯಲ್ಲಿ ಎಲ್ಲ ಮೈತ್ರಿ ಪಕ್ಷಗಳ ಮಾಜಿ ಶಾಸಕರು, ಮಾಜಿ ಸಚಿವರು ಇದ್ದರೂ ಯಾರೂ ಸಹ ಸಮ್ಮೇಳನದತ್ತ ತಿರುಗಿಯೂ ನೋಡಿಲ್ಲ. ಸು.ನಾ.ನಂದಕುಮಾರ್