Advertisement

ನಿರ್ಮಲ ಪ್ರೇಮದ ಆಲಯದಲ್ಲಿ ದೇವರು ಉಳಿದುಕೊಂಡ…

03:36 PM May 10, 2021 | Team Udayavani |

ಒಬ್ಬ ರಾಜನಿಗೆ ದೇವಾಲಯವೊಂದನ್ನು ಕಟ್ಟಿಸಬೇಕೆಂಬ ಆಸೆಯಾಯಿತು. ಒಂದು ಶುಭಮುಹೂರ್ತದಲ್ಲಿ ಖ್ಯಾತ ಶಿಲ್ಪಿಗಳು ದೇಗುಲ ನಿರ್ಮಾಣದ ಕೆಲಸ ಆರಂಭಿಸಿದರು. ವರ್ಷದ ನಂತರ ಭವ್ಯ-ದಿವ್ಯ ಅನ್ನುವಂಥ ದೇಗುಲ ನಿರ್ಮಾಣವಾಯಿತು.

Advertisement

ದೇವಮೂರ್ತಿಯ ಪ್ರತಿಷ್ಠಾಪನೆಯೂ ಆಯಿತು. ಲಕ್ಷಾಂತರ ಜನರು ‌ ಅದನ್ನು ನೋಡಿ ಕಣ್ತುಂಬಿಕೊಂಡು, ಧನ್ಯತೆ ಪಡೆದರು. ಪಂಡಿತರು ದೇವಾಲಯದ ಚೆಂದವನ್ನು, ರಾಜನ ಘನಕಾರ್ಯವನ್ನು ಹಾಡಿ ಹೊಗಳಿದರು. ಭಗವಂತನಿಗೆ ಮಹಾಮನೆ ನಿರ್ಮಿಸಿದ ಹಮ್ಮಿನಲ್ಲಿ ರಾಜನೂ ಸಂಭ್ರಮಿ ಸಿದ.

ಅವತ್ತು ರಾತ್ರಿ ರಾಜನ ಕನಸಿನಲ್ಲಿ ಭಗವಂತ ಕಾಣಿಸಿಕೊಂಡ. ರಾಜ ಕೇಳಿದ: “”ಸ್ವಾಮೀ, ನಿನಗಾಗಿ ಭವ್ಯವಾದ ಆಲಯವನ್ನು ಕಟ್ಟಿಸಿದೆ. ಶಾಸ್ತ್ರೋಕ್ತವಾಗಿ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮಾಡಿಸಿದೆ. ನಿನಗೆ ಅದು ಹಿಡಿಸಿತು ತಾನೇ?”ಭಗವಂತ ಹೇಳಿದ: “”ದೊರೆಯೇ, ನೀನು ಕಟ್ಟಿಸಿದ ದೇಗುಲವನ್ನು ನಾನು ನೋಡಲೇ ಇಲ್ಲ. ಒಬ್ಬ ಭಕ್ತ ನನಗಾಗಿ ಮೇರೆಯೇ ಇರದಷ್ಟು ವಿಶಾಲವಾದ ಮಂದಿರವನ್ನು ಕಟ್ಟಿಸಿದ್ದ. ನನಗೆ ಅಲ್ಲಿಂದ ಹೊರಬರಲಾಗಲಿಲ್ಲ…”ಈ ಮಾತು ಕೇಳಿ ರಾಜನಿಗೆ ಬೆರಗಾಯಿತು.

ಆತ ಕುತೂಹಲ ದಿಂದ ಕೇಳಿದ. ‘ಭಗವಂತಾ,ಅಂಥದೊಂದು ದೇವಾಲಯದ ಬಗ್ಗೆ ನಾನು ಎಲ್ಲಿಯೂ ಕೇಳಿಲ್ಲವಲ್ಲ…ಎಲ್ಲಿದೆ ಆ ದೇಗುಲ?’ದೇವರು ಹೇಳಿದ: “”ದೊರೆಯೇ, ಅದು ಭಕ್ತನ ಹೃದಯದಲ್ಲಿದೆ. ಆತ ನಿರ್ಮಲ ಪ್ರೇಮವೆಂಬ ಗಾರೆಯಿಂದ ಅದನ್ನು ಕಟ್ಟಿದ್ದಾನೆ. ಅಲ್ಲಿ ತೋರಿಕೆಯಿಲ್ಲ. ಶ್ರೀಮಂತಿಕೆಯ ಪ್ರದರ್ಶನವಿಲ್ಲ. ಆ ದೇಗುಲಕ್ಕೆ ಗೋಡೆಗಳೂ ಇಲ್ಲ. ಅಂಥದೊಂದು ಮಂದಿರಕ್ಕಾಗಿ ನಾನು ಶತಮಾನಗಳಿಂದ ಕಾಯುತ್ತಿದ್ದೆ. ಗುಡಿಸಲಿನಲ್ಲಿರುವ ಭಕ್ತನೊಬ್ಬ ಅಂಥದೊಂದು ಆಲಯವನ್ನು ಮೊನ್ನೆಯಷ್ಟೇ ನಿರ್ಮಿಸಿದ. ನಾನು ಅಲ್ಲಿಗೆ ಹೋಗಿದ್ದು ಮಾತ್ರವಲ್ಲ, ಅಲ್ಲಿಯೇ ಉಳಿದುಬಿಟ್ಟೆ ನೀನು ನಿರ್ಮಿಸಿದ ಮಂದಿರಕ್ಕೆ ಬರಲು ಆಗಲಿಲ್ಲ. ಬಹುಶಃಮುಂದೆಯೂ ಆಗುವುದಿಲ್ಲ…”

Advertisement

Udayavani is now on Telegram. Click here to join our channel and stay updated with the latest news.

Next