Advertisement

ಪ್ರಜ್ಞಾ ಪೂರ್ವಕ ಸ್ತರಕ್ಕೆ ಎತ್ತರಿಸಿಕೊಂಡ ಬದುಕು

12:34 AM Nov 02, 2020 | mahesh |

ಪ್ರತಿಯೊಬ್ಬರೂ ಆಯ್ಕೆಗಳನ್ನು ಮಾಡಿಕೊಳ್ಳುತ್ತಾರೆ. ಊಟಕ್ಕೆ ಗಂಜಿಯೋ ಚಪಾತಿ ಪಲ್ಯವೋ ಎಂಬುದರಿಂದ ತೊಡಗಿ, ಸ್ನಾನಕ್ಕೆ ಬಿಸಿನೀರು ಅಥವಾ ತಣ್ಣೀರು, ಧರಿಸಲು ರೇಶಿಮೆ ವಸ್ತ್ರ ಅಥವಾ ಹತ್ತಿಯ ಬಟ್ಟೆ ಎಂಬಲ್ಲಿ ಯವರೆಗೆ ಜೀವನದಲ್ಲಿ ಪ್ರತೀ ಕ್ಷಣವೂ ಆಯ್ಕೆಗಳು ಎದುರಾ ಗುತ್ತವೆ. ನಾವು ಯಾವು ದಾದರೂ ಒಂದು ಆಯ್ದುಕೊಳ್ಳುತ್ತೇವೆ. ಈ ಆಯ್ಕೆ ಪ್ರಜ್ಞಾ ಪೂರ್ವಕವಾಗಿರುತ್ತದೆಯೋ ಅಥವಾ ಅನೈಚ್ಛಿಕ- ಅಪ್ರಜ್ಞಾ ಪೂರ್ವಕವಾಗಿ ನಡೆಯುತ್ತದೆಯೋ ಎಂಬುದು ಪ್ರಶ್ನೆ.

Advertisement

ಅಪ್ರಜ್ಞಾಪೂರ್ವಕವಾಗಿ, ಅನೈಚ್ಛಿಕವಾಗಿ ಮಾಡಿದ ಆಯ್ಕೆಗಳು ಒತ್ತಡ- ಒತ್ತಾಯ ಗಳಾಗುತ್ತವೆ ಎನ್ನುತ್ತಾರೆ ಸದ್ಗುರು ಜಗ್ಗಿ ವಾಸುದೇವ್‌. ನಮ್ಮ ಬೇಕು-ಬೇಡಗಳನ್ನು ಬಳಸಿಕೊಂಡು ಪ್ರಜ್ಞೆಯನ್ನು ಎತ್ತರಿಸಿಕೊಳ್ಳಬಹುದು, ಆಗ ಅದು ನಮ್ಮ ಬದುಕಿನೊಳಕ್ಕೆ ಹರಿದುಬರುತ್ತದೆ ಎನ್ನುತ್ತಾರೆ ಅವರು.

ಉದಾಹರಣೆಗೆ, ಮನೆಯಲ್ಲಿ ಮಗು ಏನೋ ತುಂಟತನ ಮಾಡಿತು ಎಂದು ಕೊಳ್ಳೋಣ. ಆ ಸನ್ನಿ ವೇಶವನ್ನು ನಿಭಾಯಿಸು ವುದಕ್ಕೆ ಸಿಟ್ಟಾಗುವುದೇ ಸರಿ ಎಂದುಕೊಳ್ಳುತ್ತೀರಿ; ಸಿಟ್ಟಾಗುತ್ತೀರಿ. ಅದು ಪ್ರಜ್ಞಾಪೂರ್ವಕ ವಾಗಿ ಮಾಡಿಕೊಂಡ ಆಯ್ಕೆ. ಮಗುವಿಗೆ ಮೆತ್ತಗೆ ಒಂದೇಟು ಕೊಡು ತ್ತೀರಿ, ಅದು ಅಳುತ್ತದೆ. ಬಳಿಕ ಅದನ್ನು ಎತ್ತಿಕೊಂಡು ಸಮಾ ಧಾನಪಡಿಸುತ್ತೀರಿ. ಅಂದರೆ ಕೋಪಗೊಳ್ಳುವುದನ್ನು ಪ್ರಜ್ಞಾ ಪೂರ್ವಕವಾಗಿ ಮಾಡಿದ ಸಂದರ್ಭದಲ್ಲಿ ಅದರ ಉಪ ಯೋಗ ಮುಗಿದ ತತ್‌ಕ್ಷಣ ಕೈಬಿಡುವುದಕ್ಕೂ ನಮಗೆ ಗೊತ್ತಿರುತ್ತದೆ.

ಬದುಕಿನಲ್ಲಿ ಎಲ್ಲವನ್ನೂ ಪ್ರಜ್ಞಾ ವಂತಿಕೆಯ ಸ್ತರಕ್ಕೆ ಎತ್ತರಿಸಿದರೆ ಬದುಕು ಬೇರೊಂದೇ ಸ್ತರದಲ್ಲಿ ಅರಳುವುದು ಸಾಧ್ಯ. ಬೆಳಗ್ಗೆ ಹಾಸಿಗೆಯಿಂದ ಎದ್ದೇಳು ವುದನ್ನು ತೆಗೆದುಕೊಳ್ಳಿ. ಮಲಗಿಯೇ ಇರುವುದನ್ನು ನಮ್ಮ ಮನಸ್ಸು ಅಪ್ರ ಜ್ಞಾಪೂರ್ವಕವಾಗಿ ಬಯಸುತ್ತಿರುತ್ತದೆ. ಮಲಗಿಯೇ ಇರುವುದನ್ನು ನಮ್ಮ ದೇಹ ಮತ್ತು ಮನಸ್ಸು ಅಪ್ರಜ್ಞಾ ಪೂರ್ವಕವಾಗಿ ಬಯಸುವುದಕ್ಕೆ ಇನ್ನೂ ಹಲವಾರು ಕಾರಣಗಳಿವೆ. ಬದುಕಿನ ಹಲವು ಆಯಾ ಮಗಳಲ್ಲಿ ನಮ್ಮ ಸೀಮಿತ ಜೀವನಾ ನುಭವದಿಂದಾಗಿ ಹೊಸ ದಿನವನ್ನು ಜೀವಿಸು ವುದು ಬೇಡ ಎಂದು ನಾವು ಬಯಸುತ್ತೇವೆ.

ಒಂದು ಉದಾಹರಣೆ. ನಾಳೆ ಬೆಳಗ್ಗೆ ಅತ್ಯಾಪ್ತ ಗೆಳೆಯನ ಮನೆಯಲ್ಲೊಂದು ಸಮಾರಂಭ ಇದೆ. ಅದಕ್ಕೆ ಬೆಳಗ್ಗೆ ಬೇಗನೆ ಎದ್ದು ಹೊರಡಬೇಕು. ಆಗ?

Advertisement

ಸೂರ್ಯ ಮೂಡುವುದಕ್ಕೆ ಮುನ್ನವೇ ಎದ್ದು ರೆಡಿಯಾಗುತ್ತೇವೆ. ಇಲ್ಲವಾಗಿದ್ದರೆ ಪ್ರತೀ ದಿನದ ಹಾಗೆಯೇ ಅಂದೂ ನಾವು ಮಲಗಿಕೊಂಡಿರುತ್ತಿದ್ದೆವು. ಆದರೆ ಈಗ ಬೇಗನೆ ಎದ್ದೇಳುವ ಪ್ರಜ್ಞಾಪೂರ್ವಕ ಆಯ್ಕೆ ಯನ್ನು ಮಾಡಿಕೊಂಡಿದ್ದೇವೆ. ಇನ್ನು, ನಮ್ಮ ಮನಸ್ಸು ಬಿಸಿಬಿಸಿಯಾದ ಚಹಾ ಬಯಸುತ್ತದೆ. ಈಗ “ಬೇಡ, ಮಿಂದು ಪೂಜೆ ಅಥವಾ ಧ್ಯಾನ ಮಾಡೋಣ’ ಎಂಬ ಇನ್ನೊಂದು ಪ್ರಜ್ಞಾಪೂರ್ವಕ ಆಯ್ಕೆಯನ್ನು ಮಾಡಿ ಕೊಳ್ಳೋಣ. ಹಸಿವಾದ ತತ್‌ಕ್ಷಣ ಉಣ್ಣುವುದು ಅಪ್ರಜ್ಞಾ ಪೂರ್ವಕ ಆಯ್ಕೆ. “ಈಗ ಬೇಡ, ಅರ್ಧ ತಾಸು ತಡೆದು ಮತ್ತೆ ಉಣ್ಣುತ್ತೇನೆ’ ಎನ್ನು ವುದು ಪ್ರಜ್ಞಾಪೂರ್ವಕವಾಗಿ ಮಾಡಿ ಕೊಳ್ಳುವಂಥದು.

ನಾವು ಏನನ್ನು ಬಯಸುತ್ತೇವೆಯೋ ಅದನ್ನು ಅಪ್ರಜ್ಞಾಪೂರ್ವಕವಾಗಿ ಮಾಡಿ ಬಿಡುತ್ತೇವೆ. ನಾವು ಯಾವುದನ್ನು ಮಾಡಲು, ಯಾವುದರಲ್ಲಿ ತೊಡಗಲು ಸಹಜವಾಗಿ ಬಯಸುವುದಿಲ್ಲವೋ ಆಗ ಪ್ರಜ್ಞಾಪೂರ್ವಕ ಆಯ್ಕೆಗಳನ್ನು ಮಾಡಿ ಕೊಳ್ಳಬೇಕಾಗುತ್ತದೆ.

ಮೊದಮೊದಲಿಗೆ ಹೀಗೆ ಪ್ರಜ್ಞಾ ಪೂರ್ವಕವಾಗಿ ಇರುವುದು ದಿನದಲ್ಲಿ ಒಂದರ್ಧ ತಾಸು ಸಾಧ್ಯವಾಗಬಹುದು. ಅದನ್ನು ಮುಂದುವರಿಸುತ್ತ, ವಿಸ್ತರಿಸುತ್ತ ಹೋದರೆ ಇಡೀ ಬದುಕನ್ನೇ ಪ್ರಜ್ಞಾ ಪೂರ್ವಕವಾಗಿ ನಡೆಯುವ ಸಂಗತಿಯನ್ನಾಗಿ ಬದಲಾಯಿಸಬಹುದು. ಅದು ನಮ್ಮ ಜೀವನದ ಗುಣಮಟ್ಟ ಮತ್ತು ಸ್ವರೂಪವನ್ನೇ ಬದಲಾಯಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next