Advertisement
ಅಫ್ಘಾನಿಸ್ಥಾನದಂತೆ ಭಾರತಕ್ಕೂ ಇದು ಸೇಡಿನ ಪಂದ್ಯ. ಕಳೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಅನುಭವಿಸಿದ ತವರಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಸುವರ್ಣಾವ ಕಾಶವೊಂದು ರೋಹಿತ್ ಪಡೆಗೆ ಎದುರಾಗಿದೆ. ಯಾವ ಕಾರಣಕ್ಕೂ ಇದನ್ನು ಕಳೆದುಕೊಳ್ಳಬಾರದು. ಇಲ್ಲಿ ಆಸ್ಟ್ರೇಲಿಯ ಸೋತರೆ, ಅನಂತರದ ಮುಖಾಮುಖೀಯಲ್ಲಿ ಅಫ್ಘಾನಿಸ್ಥಾನ ಬಾಂಗ್ಲಾದೇಶವನ್ನು ಮಣಿಸಿದರೆ ಆಗ ಒಂದನೇ ಗ್ರೂಪ್‌ನಿಂದ ಸೆಮಿಫೈನಲ್ ಪ್ರವೇಶಿಸುವ ಚಾನ್ಸ್ ರಶೀದ್ ಖಾನ್ ಬಳಗದ್ದಾಗಲಿದೆ. ಆಸ್ಟ್ರೇಲಿಯ ಮನೆಗೆ ಗಂಟುಮೂಟೆ ಕಟ್ಟಲಿದೆ!
ಅಫ್ಘಾನಿಸ್ಥಾನ ಮತ್ತು ಬಾಂಗ್ಲಾ ದೇಶವನ್ನು ಮಣಿಸಿ ಈಗಾಗಲೇ ಸೆಮಿ ಫೈನಲ್‌ಗೆ ಒಂದು ಹೆಜ್ಜೆ ಇಟ್ಟಿ ರುವ ಭಾರತ, ಯಾವುದೇ ಒತ್ತಡ ವಿಲ್ಲದೆ ಆಸ್ಟ್ರೇಲಿಯವನ್ನು ಎದುರಿಸ ಬಹುದು. ಆದರೆ ಸುದೀರ್ಘ ಪ್ರಯಾಣದಿಂದ ಟೀಮ್ ಇಂಡಿಯಾ ಆಟಗಾರರು ಅಭ್ಯಾಸದಲ್ಲಿ ಪಾಲ್ಗೊಂಡಿಲ್ಲ. ಇದು “ಡ್ಯಾರನ್ ಸಮ್ಮಿ ಸ್ಟೇಡಿ ಯಂ’ನಲ್ಲಿ ನಡೆಯುವ ಕೇವಲ 2ನೇ ಹಗಲು ಪಂದ್ಯ. ಇಲ್ಲಿನ ಡೇ-ನೈಟ್ ಪಂದ್ಯದಲ್ಲಿ ಧಾರಾಳ ರನ್ ಹರಿದು ಬಂದಿದೆ. ಆದರೆ ಏಕೈಕ ಹಗಲು ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್‌ಗೆ 164 ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಅರ್ಥಾತ್, ಮೊದಲು ಬ್ಯಾಟಿಂಗ್ ನಡೆಸಿ ದೊಡ್ಡ ಮೊತ್ತ ಪೇರಿಸಿದರೆ ಹೆಚ್ಚು ಸೇಫ್.
Related Articles
Advertisement
ಪ್ರಯೋಗ ಅನುಮಾನಭಾರತ ಈ ಪಂದ್ಯದಲ್ಲಿ ಪ್ರಯೋ ಗಕ್ಕೆ ಇಳಿಯುವ ಸಾಧ್ಯತೆ ಕಡಿಮೆ. ಮೀಸಲು ಸಾಮರ್ಥ್ಯವನ್ನು ಇಷ್ಟ ರಲ್ಲೇ ಪ್ರದರ್ಶಿಸಬೇಕಿದ್ದ ಭಾರತ, ಆಸೀಸ್ ವಿರುದ್ಧ ಆಡುವ ಬಳಗ ದಲ್ಲಿ ಬದಲಾವಣೆ ಮಾಡಿಕೊ ಳ್ಳುವ ಯೋಜನೆಯಲ್ಲಿಲ್ಲ. ಹೀಗಾಗಿ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಕಾಯುವವರ ಯಾದಿಯಲ್ಲೇ ಇರಬೇಕಾಗಬಹುದು. ಇತ್ತ ಆಸ್ಟ್ರೇಲಿಯ ತಂಡದಲ್ಲಿ ಮಿಚೆಲ್ ಸ್ಟಾರ್ಕ್ ಮರಳಿ ಕಾಣಿಸಿ ಕೊಳ್ಳುವುದು ನಿಶ್ಚಿತ. ಅಫ್ಘಾನಿಸ್ಥಾನ ವಿರುದ್ಧ ಹೆಚ್ಚುವರಿ ಸ್ಪಿನ್ನರ್ ಆ್ಯಶrನ್ ಅಗರ್ ಅವರಿಗಾಗಿ ಸ್ಟಾರ್ಕ್ ಅವ ರನ್ನು ಹೊರಗಿರಿಸಲಾಗಿತ್ತು. ಭಾರತ 3-2 ಮುನ್ನಡೆ
ಟಿ20 ವಿಶ್ವಕಪ್‌ನಲ್ಲಿ ಭಾರತ- ಆಸ್ಟ್ರೇಲಿಯ 5 ಪಂದ್ಯಗಳಲ್ಲಿ ಮುಖಾ ಮುಖೀ ಆಗಿವೆ. ಭಾರತ ಮೂರನ್ನು ಗೆದ್ದರೆ, ಉಳಿದೆರಡನ್ನು ಆಸ್ಟ್ರೇಲಿಯ ಜಯಿಸಿದೆ. ಆಸ್ಟ್ರೇಲಿಯ ಕೊನೆಯ ಸಲ ಭಾರತವನ್ನು ಮಣಿಸಿದ್ದು 2012ರಲ್ಲಿ. ಅನಂತರದ 2014 ಮತ್ತು 2016ರ ಟೂರ್ನಿಯಲ್ಲಿ ಭಾರತ ಜಯ ಸಾಧಿಸಿದೆ. ಇದು 2016ರ ಬಳಿಕ ಇತ್ತಂಡಗಳ ನಡುವೆ ನಡೆಯಲಿರುವ ಮೊದಲ ಪಂದ್ಯ.