Advertisement

One Day Cricket: ಆಸ್ಟ್ರೇಲಿಯ ವನಿತೆಯರ ದಾಖಲೆ ಮೊತ್ತ; ಭಾರತಕ್ಕೆ 122 ರನ್‌ ಸೋಲು

01:27 AM Dec 09, 2024 | Team Udayavani |

ಬ್ರಿಸ್ಬೇನ್‌: ಭಾರತದೆದುರು ದಾಖಲೆ ಮೊತ್ತ ರಾಶಿ ಹಾಕಿದ ಆಸ್ಟ್ರೇಲಿ ಯದ ವನಿತೆಯರು ದ್ವಿತೀಯ ಏಕದಿನ ಪಂದ್ಯವನ್ನು 122 ರನ್ನುಗಳಿಂದ ಗೆದ್ದು ಸರಣಿ ವಶಪಡಿಸಿಕೊಂಡಿದ್ದಾರೆ.

Advertisement

ಬ್ರಿಸ್ಬೇನ್‌ನಲ್ಲಿ ರವಿವಾರ ನಡೆದ ಮುಖಾ ಮುಖೀಯಲ್ಲಿ ಬ್ಯಾಟಿಂಗ್‌ ಆಯ್ದು ಕೊಂಡ ಆಸ್ಟ್ರೇಲಿಯ, ಜಾರ್ಜಿಯಾ ವೋಲ್‌ ಮತ್ತು ಎಲ್ಲಿಸ್‌ ಪೆರ್ರಿ ಅವರ ಶತಕ ಸಾಹಸದಿಂದ 8 ವಿಕೆಟಿಗೆ 371 ರನ್‌ ಪೇರಿಸಿತು. ಜವಾಬಿತ್ತ ಭಾರತ 44.5 ಓವರ್‌ಗಳಲ್ಲಿ 249ಕ್ಕೆ ಆಲೌಟ್‌ ಆಯಿತು. ಇದು ಭಾರತದೆದುರು ತಂಡವೊಂದು ಗಳಿಸಿದ ಅತ್ಯಧಿಕ ಮೊತ್ತವಾಗಿದೆ. ಇದೇ ವರ್ಷ ವಾಂಖೇಡೆಯಲ್ಲಿ ಗಳಿಸಿದ 7ಕ್ಕೆ 338 ರನ್ನುಗಳ ತನ್ನದೇ ದಾಖಲೆಯನ್ನು ಮುರಿಯಿತು.

ಅವಳಿ ಶತಕವೀರರು
ಕೇವಲ 2ನೇ ಏಕದಿನ ಪಂದ್ಯ ಆಡಲಿಳಿದ ಆರಂಭಿಕ ಆಟಗಾರ್ತಿ ಜಾರ್ಜಿಯಾ ವೋಲ್‌ 101 ರನ್‌ (87 ಎಸೆತ, 12 ಬೌಂಡರಿ) ಮತ್ತು ಎಲ್ಲಿಸ್‌ ಪೆರ್ರಿ 105 ರನ್‌ (75 ಎಸೆತ, 7 ಬೌಂಡರಿ, 5 ಸಿಕ್ಸರ್‌) ಬಾರಿಸಿ ಭಾರತದ ಬೌಲರ್‌ಗಳಿಗೆ ಬೆವರಿಳಿಸಿದರು. ಮತ್ತೋರ್ವ ಓಪನರ್‌ ಫೋಬ್‌ ಲಿಚ್‌ಫೀಲ್ಡ್‌ 60 ರನ್‌ ಮಾಡಿದರು. ಮೊದಲ ವಿಕೆಟಿಗೆ 19.2 ಓವರ್‌ಗಳಲ್ಲಿ 130 ರನ್‌ ಹರಿದು ಬಂತು. ಬೆತ್‌ ಮೂನಿ 56 ರನ್‌ ಹೊಡೆದರು.

ಭಾರತದ ಚೇಸಿಂಗ್‌ ಅತ್ಯಂತ ನಿಧಾನ ಗತಿಯಿಂದ ಕೂಡಿತ್ತು, ಅಷ್ಟೇ ಆಘಾತಕಾರಿ ಆಗಿತ್ತು. 11 ಓವರ್‌ ಮುಗಿಯುವಷ್ಟರಲ್ಲಿ ಸ್ಮತಿ ಮಂಧನಾ (9), ಹಲೀìನ್‌ (12) ಪೆವಿಲಿಯನ್‌ ಸೇರಿ ಆಗಿತ್ತು. ಆಗ ಸ್ಕೋರ್‌ಬೋರ್ಡ್‌ ಕೇವಲ 45 ರನ್‌ ತೋರಿಸುತ್ತಿತ್ತು.

ಓಪನರ್‌ ರಿಚಾ ಘೋಷ್‌ 54, ಜೆಮಿಮಾ ರೋಡ್ರಿಗಸ್‌ 43, ಮಿನ್ನು ಮಣಿ ಔಟಾಗದೆ 46 ಹಾಗೂ ನಾಯಕಿ ಕೌರ್‌ 38 ರನ್‌ ಹೊಡೆದರು. 39ಕ್ಕೆ 4 ವಿಕೆಟ್‌ ಉರುಳಿಸಿದ ಅನ್ನಾಬೆಲ್‌ ಸದರ್ಲೆಂಡ್‌ ಆಸ್ಟ್ರೇಲಿಯದ ಯಶಸ್ವಿ ಬೌಲರ್‌. ಎಲ್ಲಿಸ್‌ ಪೆರ್ರಿ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಮೊದಲ ಪಂದ್ಯವನ್ನು ಆಸ್ಟ್ರೇಲಿಯ 5 ವಿಕೆಟ್‌ಗಳಿಂದ ಜಯಿಸಿತ್ತು. 3ನೇ ಮುಖಾಮುಖೀ ಬುಧವಾರ ಪರ್ತ್‌ನಲ್ಲಿ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next