Advertisement
ಈ ನಿಟ್ಟಿನಲ್ಲಿ ಕಾನೂನಿನ ಬಗ್ಗೆ ಸಾಮಾನ್ಯ ಜ್ಞಾನ ಎಲ್ಲರಿಗೂ ಇರಬೇಕಿದ್ದು, ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅರಿವು ಮೂಡಿಸಿ, ಸೇವೆ ನೀಡುವಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ ಕಾನೂನ್ಮುಖವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ತ್ಯಾಗರಾಜ್ ಎನ್.ಇನವಳ್ಳಿ ತಿಳಿಸಿದರು.
Related Articles
Advertisement
ನೆರವು ನೀಡಲು ಪ್ರಾಧಿಕಾರ ಸಿದ್ಧ: ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎ. ಹರೀಶ್ ಮಾತನಾಡಿ, ಈ ದೇಶದ ಕಾನೂನು ನಾವು ಪರಿಪಾಲನೆ ಮಾಡಲೇಬೇಕು. ಇಲ್ಲದಿದ್ದರೆ ನಮ್ಮ ಹಕ್ಕುಗಳಿಂದ ವಂಚಿತರಾಗಬೇಕಾಗು ತ್ತದೆ. ಕಾನೂನು ನಮ್ಮ ವಿರುದ್ಧವಾಗಿ ಅಲ್ಲ ನಮ್ಮ ರಕ್ಷಣೆ ಗಾಗಿಯೇ ಇವೆ. ದೇಶದ ಜನರಿಗೆ ಮೂಲ ಹಕ್ಕುಗಳಿಗೆ ಚ್ಯುತಿಯಾಗದಂತೆ ಕಾನೂನಿನ ನೆರವು ನೀಡಲು ಕಾನೂನು ಸೇವೆಗಳ ಪ್ರಾಧಿಕಾರ ಸಿದ್ಧವಾಗಿದೆ ಎಂದರು.
ಇದನ್ನೂ ಓದಿ:- “ಎಣ್ಣೆಗೂ ಹೆಣ್ಣಿಗೂ…’ ಹೆಣ್ಣು ಮಕ್ಕಳಿಗೊಂದು ಬ್ರೇಕಪ್ ಸಾಂಗ್
ಹಿರಿಯ ಸಿವಿಲ್ ನ್ಯಾಯಾಧೀಶ ಸಂದೀಪ್ ಸಾಲಿಯಾನ್ ಮಾತನಾಡಿ, ಎಲ್ಲ ರಾಜ್ಯದ ಜಿಲ್ಲೆಗಳೂ ಆಯಾ ತಾಲೂಕುಗಳು ಜನಸಾಮಾನ್ಯರಿಗೆ ಉಚಿತ ಕಾನೂನಿನ ಅರಿವು-ನೆರವು ಕಾರ್ಯಕ್ರವನ್ನು ಹಮ್ಮಿಕೊಂಡು ಅರಿವು ಮೂಡಿಸಬೇಕೇಂದು ರಾಷ್ಟ್ರೀಯ ಕಾನೂನು ಪ್ರಾಧಿಕಾರದಿಂದ ನಿರ್ದೇಶನ ನೀಡಲಾಗಿದೆ. ಉಚ್ಚ ನ್ಯಾಯಾಲಯದ ಆದೇಶದಂತೆ ಕಾನೂನು ಸೇವೆಗಳ ಪ್ರಾಧಿಕಾರ ನ. 2ರಿಂದ 17ರವರೆಗೆ ಕಾನೂನು ಅರಿವು ಕಾರ್ಯಾಗಾರಗಳನ್ನು ಗ್ರಾಮಾಂತರ ಮಟ್ಟದಲ್ಲಿಯೂ ನಡೆಸಲಾಗುತ್ತಿದೆ ಎಂದರು.
ನೋಂದಣಿ ಪತ್ರ ವಿತರಣೆ: ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕರಿಗೆ ಮೇಸ್ತ್ರಿ ಕಿಟ್, ಸುಕ್ಷತಾ ಕಿಟ್, ನೋಂದಣಿ ಪತ್ರ ವಿತರಿಸಲಾಯಿತು. ಉಪವಿಭಾಗಾಧಿಕಾರಿ ಅರುಳ್ ಕುಮಾರ್, ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಅರವಿಂದ ಸಾಯಿಬಣ್ಣ ಹಾಗರಗಿ, ಹಿರಿಯ ನ್ಯಾಯಾಧೀಶರಾದ ಜ್ಯೋತಿ ಎಸ್. ಕಾಳೆ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೆ.ಆರ್.ದೀಪ, ಅಪರ ಸಿವಿಲ್ ನ್ಯಾಯಾಧೀಶೆ ಮಮತಾ ಶಿವಪೂಜೆ, ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎಂ ಬೈರೇಗೌಡ, ಕಾರ್ಯದರ್ಶಿ ಕೃಷ್ಣಮೂರ್ತಿ, ತಹಶೀಲ್ದಾರ್ ಟಿ. ಎಸ್. ಶಿವರಾಜ್, ಡಿವೈಎಸ್‌ಪಿ ನಾಗರಾಜು, ಬಿಇಒ ಆರ್.ವಿ. ಶುಭಮಂಗಳ, ಟಿಎಚ್‌ಒ ಡಾ.ಪರ ಮೇಶ್ವರ, ಸಿಡಿಪಿಒ ಅನಿತಾಲಕ್ಷ್ಮೀ, ಜಿಲ್ಲಾ ಕಾರ್ಮಿಕ ಅಧಿಕಾರಿ ಎಚ್.ಆರ್.ನಾಗೇಂದ್ರ, ತಾಲೂಕು ಕಾರ್ಮಿಕ ನಿರೀಕ್ಷಕ ಎಂ. ಪ್ರದೀಪ್ ಇದ್ದರು.
ಕಾನೂನು ಜ್ಞಾನದಿಂದ ಉತ್ತಮ ಸಮಾಜ ನಿರ್ಮಾಣ ಕಾನೂನು ಸೇವಾ ಸಮಿತಿ ಜನರಿಗೆ ಕಾನೂನಿನ ಬಗ್ಗೆ ಅರಿವು, ಆರ್ಥಿಕ, ಸಾಮಾಜಿಕವಾಗಿ ದುರ್ಬಲರಾದವರಿಗೆ ಕಾನೂನು ನೆರವು ಹಾಗೂ ಲೋಕ ಅದಾಲತ್‌ಗಳನ್ನು ನಡೆಸುವ ಮೂಲಕ ಪ್ರಕರಣ ಶೀಘ್ರ ಇತ್ಯರ್ಥ ಪಡಿಸುವ ಕಾರ್ಯಗಳನ್ನು ಮಾಡುತ್ತಿದೆ.
ಮುಖ್ಯವಾಗಿ ರಾಜಿ ಸಂಧಾನಗಳಿಂದ ಹಲವಾರು ಪ್ರಕರಣ ಇತ್ಯರ್ಥವಾಗಿವೆ. ಗಾಂಧೀಜಿ ವಕೀಲರಾಗಿದ್ದಾಗ ನಡೆಸಿದ ರಾಜಿ ಸಂಧಾನದ ನಿದರ್ಶನ ನೀಡಿದರು. ಆದರೆ, ಈ ಸೇವೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವಿಲ್ಲದ ಕಾರಣ ವೃಥಾ ತೊಂದರೆಗೆ ಸಿಲುಕುತ್ತಾರೆ. ಕಾನೂನಿನ ಸಾಮಾನ್ಯ ಜ್ಞಾನ ಎಲ್ಲರಲ್ಲಿಯೂ ಮೂಡಿದರೆ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ತ್ಯಾಗರಾಜ್ ಎನ್.ಇನವಳ್ಳಿ ಹೇಳಿದರು.