ಬೆಂಗಳೂರು: ಬಿಗ್ ಬಾಸ್ ಸೀಸನ್ -10 ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸ್ಪರ್ಧಿಗಳ ವಿಚಾರದ ಜತೆ ವಿವಾದದಿಂದಲೂ ಕಳೆದ ಸೀಸನ್ನಲ್ಲಿ ಸದ್ದು ಮಾಡಿತ್ತು.
ಸ್ಪರ್ಧಿಗಳ ವಿಚಾರಕ್ಕೆ ಬಂದರೆ ಕಳೆದ ಸೀಸನ್ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದ ಪವಿ ಪೂವಪ್ಪ (Pavi Poovappa) ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಬ್ರೇಕಪ್ ವಿಚಾರ.
ಕಳೆದ ಬಿಗ್ ಬಾಸ್ ಸೀಸನ್ನಲ್ಲಿ ಫ್ಯಾಷನ್ ಡಿಸೈನರ್ ಪವಿ ಪೂವಪ್ಪ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು. ನಿರೀಕ್ಷೆ ಮಾಡಿದ್ದಷ್ಟು ದಿನ ಅವರು ಬಿಗ್ ಬಾಸ್ ಮನೆಯಲ್ಲಿ ಉಳಿಲಿಲ್ಲ. ಇದ್ದಷ್ಟು ದಿನ ಒಂದಷ್ಟು ಕಾರಣದಿಂದ ಸುದ್ದಿಯಾಗಿದ್ದರು.
ಫ್ಯಾಷನ್ ಡಿಸೈನರ್ ಕಂ ಮಾಡೆಲ್ ಆಗಿರುವ ಪವಿ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಹಾಟ್ ಫೋಟೋ ಶೂಟ್ ಮಾಡಿಸಿಕೊಂಡು ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಪವಿ ಬಿಗ್ ಬಾಸ್ ಸೀಸನ್ -11 ಸ್ಪರ್ಧಿಗಳು ಹಾಗೂ ತಮ್ಮ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ಬ್ರೇಕಪ್ ಆಗಿರುವುದಕ್ಕೆ ಅವರು ಹೇಳಿರುವ ಕಾರಣ ಕೇಳಿ ನೆಟ್ಟಿಗರು ಆಶ್ಚರ್ಯಪಟ್ಟಿದ್ದಾರೆ.
ʼಪಬ್ಲಿಕ್ ನೆಕ್ಸ್ಟ್ʼ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಿನಿಮಾದ ಕಾರ್ಯಕ್ರಮಕ್ಕೆ ಬಂದ ಸಂದರ್ಭದಲ್ಲಿ ಅವರು ಮಾತನಾಡಿದ್ದಾರೆ.
ನನ್ನ ಮೆಚ್ಚಿನ ಸ್ಪರ್ಧಿ ಮೊದಲು ತ್ರಿವಿಕ್ರಮ್ ಆಗಿದ್ರು, ಈಗ ರಜತ್ ಅವರು ತುಂಬಾ ಚೆನ್ನಾಗಿ ಆಡುತ್ತಿದ್ದಾರೆ ಎಂದಿದ್ದಾರೆ.
ಬ್ರೇಕಪ್ ಬಗ್ಗೆ ಪವಿ ಮಾತು: ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ನಗುಮುಖದಲ್ಲೇ ಬ್ರೇಕಪ್ ಆಗಿರುವ ವಿಚಾರ ಹಾಗೂ ಅದರ ಹಿಂದಿನ ಕಾರಣವನ್ನು ರಿವೀಲ್ ಮಾಡಿದ್ದಾರೆ.
5 ವರ್ಷಗಳಿಂದ ಜತೆಯಲ್ಲೇ ಇದ್ದರು. ಎಲ್ಲವೂ ಅರ್ಥ ಮಾಡಿಕೊಂಡು ಚೆನ್ನಾಗಿದ್ದೀವಿ. ಹೋಗುತ್ತಾ ಹೋಗುತ್ತಾ ಅವರಿಗೆ ನನ್ನ ನಾಯಿಯಿಂದ ಪ್ರಾಬ್ಲಂ ಆಯಿತು. ಮದುವೆ ಆದ್ಮೇಲೆ ನಾಯಿಯನ್ನು ಮನೆಯಲ್ಲಿಡಲು ಬಿಡಲ್ಲ ಅಂಥ ಹೇಳಿದ್ರು. ಸಣ್ಣ ಸಣ್ಣ ವಿಚಾರಕ್ಕೆ ಕಾರಣವನ್ನು ಕೊಡೋಕೆ ಶುರು ಮಾಡಿದ್ರು. ಆ ಕಾರಣದಿಂದ ನಾನೇ ಬೇಡ ಅಂಥ ಹಿಂದೇಟು ಹಾಕಿದೆ ಎಂದರು.
ನನ್ನ ಮನೆಯಲ್ಲಿ 7 ನಾಯಿಗಳಿವೆ. ನಮ್ಮದು ಎನ್ ಜಿಒ ಕೂಡ ಇದೆ. ನಾವು ನಾಯಿಗಳನ್ನು ರಕ್ಷಣೆ ಮಾಡಿ ಆರೈಕೆ ಮಾಡುತ್ತೇವೆ. ಚಿಕ್ಕ ಪ್ರಾಯದಿಂದಲೇ ನನಗೆ ನಾಯಿ, ಬೆಕ್ಕುಗಳಂದ್ರೆ ತುಂಬಾ ಪ್ರೀತಿ ಎಂದರು.
ಪವಿ ಡಿಜೆ ಮ್ಯಾಡ್ ಎನ್ನುವವರ ಜತೆ ಪ್ರೀತಿ ಬಂಧದಲ್ಲಿದ್ದರು.