Advertisement

ಅಭಿವೃದ್ಧಿಗೆ ಎಂಜಿನಿಯರಿಂಗ್ ‌ಕಾಲೇಜುಗಳು ನೆರವಾಗಲಿ: ಡಿವಿಎಸ್‌

12:23 PM Sep 26, 2020 | Team Udayavani |

ಬೆಂಗಳೂರು: ಹಲವು ಸಂಶೋಧನೆಗಳ ಮೂಲಕ ದೇಶದ ಕೈಗಾರಿಕೆಗಳ ಬೆಳವಣಿ ಗೆಗೆ ಎಂಜಿನಿಯರಿಂಗ್‌ ಕಾಲೇಜುಗಳು ನೆರವಾಗಬೇಕಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಅಭಿಪ್ರಾಯ ಪಟ್ಟರು.

Advertisement

ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾ ವಿದ್ಯಾಲಯ ಹಮ್ಮಿಕೊಂಡಿದ್ದ “ಗಣಕ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಹಾಗೂ ಸಂವಹನ ಕ್ಷೇತ್ರಗಳಲ್ಲಿ ನಡೆಯುತ್ತಿರುವ ನವೀನ ಆವಿಷ್ಕಾರಗಳ ಪರಾಮರ್ಶೆ -2020′ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದ 6ನೇ ಆವೃತ್ತಿ ಉದ್ಘಾಟಿಸಿ ಮಾತನಾಡಿದರು. ಬೃಹದಾಕಾರದವಸ್ತುವಿನಷ್ಟೇ, ಗಣಕೀಕೃತ ತಂತ್ರಜ್ಞಾನದ ಕಿರಿದಾದ ವಸ್ತು ದೊಡ್ಡ ಕ್ರಾಂತಿಯನ್ನೇ ಉಂಟುಮಾಡುವ ವಿಶೇಷ ಕಾಲಘಟ್ಟದಲ್ಲಿ ನಾವಿದ್ದೇವೆ. ಆ ಹಿನ್ನೆಲೆಯಲ್ಲಿ ಕಂಪ್ಯೂಟರ್‌ ತಂತ್ರಜ್ಞಾನ ಬಳಕೆ ಮಾಡಿಕೊಂಡು ಎಂಜಿನಿಯರಿಂಗ್‌ ಕಾಲೇಜುಗಳು ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟುಕೊಡುಗೆ ನೀಡಬೇಕೆಂದರು.

ಕೇಂದ್ರದ ಹೊಸ ಶಿಕ್ಷಣ ನೀತಿಯೂ ನವ್ಯ ಆವಿಷ್ಕಾರಕ್ಕೆ ಒತ್ತು ನೀಡುತ್ತದೆ. ಬಾಯಿ ಪಾಠ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಪದ್ಧತಿ ಸಂಪೂರ್ಣ ಮಾಯವಾಗಿ ವಿಶ್ಲೇಷಣೆ ಮಾಡುವ ವಾತಾವರಣ ಮೂಡಿ ಬರಲಿದೆ.ಅನ್ವಯಿಕ ವಿಜ್ಞಾನ ಮತ್ತು ಆ ನಿಟ್ಟಿನಲ್ಲಿ ನಡೆದ ಸಂಶೋಧನೆ ನಮ್ಮ ಬದುಕನ್ನು ಹಸನುಗೊಳಿಸಬಲ್ಲವು ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎನ್‌.ಆರ್‌.ಶೆಟ್ಟಿ, ದೇಶದ ಆರ್ಥಿಕ ಅಭಿವೃದ್ಧಿಗೆ ಯುವ ಸಮುದಾಯ ಕೊಡುಗೆ ನೀಡ ಬೇಕು ಎಂದರು. ಆರು ನೂರಕ್ಕೂ ಅಧಿಕ ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಇದ್ದರು. ಭಾರತೀಯ ವಿಜ್ಞಾನ ಸಂಸ್ಥೆ ನ್ಯಾನೋ ವಿಜ್ಞಾನ ಹಾಗೂ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ನವಕಾಂತ್‌ ಭಟ್‌, ಡಾ.ಕಾಳಿದಾಸಶೆಟ್ಟಿ , ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್‌.ಸಿ.ನಾಗರಾಜ್‌, ಡೀನ್‌ ಡಾ.ವಿ.ಶ್ರೀಧರ್‌ ಮತ್ತಿತರರು ಇದ್ದರು. ಇದೇ ವೇಳೆ ಕೇಂದ್ರ ಸಚಿವ ಸದಾನಂದ ಗೌಡ ಯಲಹಂಕದ ಹಾರೋಹಳ್ಳಿಯಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ನೌಕರರ ಸಂಘ ಆರಂಭಿಸಿರುವ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಮಳಿಗೆ ಲೋಕಾರ್ಪಣೆಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next