Advertisement

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

09:01 PM Dec 24, 2022 | Team Udayavani |

ಮೈಸೂರು: ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ 12 ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕೃತಗೊಂಡ ಕಾಶಿ ವಿಶ್ವನಾಥ ದೇವಾಲಯ, ಸ್ವದೇಶೀ ನಿರ್ಮಿತ ಒಂದೇ ಮಾತರಂ ರೈಲು ಗಾಡಿ, ಅಮರ್ ಜವಾನ್ ಸ್ಮಾರಕ, ಹೂವಿನಿಂದ ಅಲಂಕೃತಗೊಂಡ ಆನೆ ಸೇರಿದಂತೆ ಕಲಾಕೃತಿಗಳ ವೀಕ್ಷಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಶನಿವಾರ ಸಂಜೆ ಉದ್ಘಾಟಿಸಿದರು.

Advertisement

ನಂತರ ಮಾತನಾಡಿದ ಸಚಿವರು ಫಲಪುಷ್ಪ ಪದರ್ಶನಕ್ಕೆ ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುವುದೇ ನಮ್ಮ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಕೊರೊನಾ ಬಗ್ಗೆ ಯಾವುದೇ ಆತಂಕ ಪಡುವ ಪ್ರಮೇಯವಿಲ್ಲ, ವರ್ಷದ ಅಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಆರೋಗ್ಯ ಇಲಾಖೆ ನೀಡುವ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಲಾಗುವುದು ಎಂದರು.

ರಾಜ್ಯದ ರೈತರಿಗೆ ನೆರವಾಗಲೆಂದು ಸಹಕಾರ ಇಲಾಖೆಯ ಮೂಲಕ ಶೂನ್ಯ ಬಡ್ಡಿ ದರದಲ್ಲಿ 24 ಸಾವಿರ ಕೋಟಿ ರೂಪಾಯಿ ನೂತನ ಸಾಲ ನೀಡಲಾಗುವುದು, ಈ ಯೋಜನೆ ಮೂಲಕ 33 ಲಕ್ಷ ರೈತರಿಗೆ ಸಾಲ ನೀಡಲಾಗುವುದು, ಈಗಾಗಲೇ ರಾಜ್ಯದ ಡಿಸಿಸಿ ಬ್ಯಾಂಕ್ ಗಳ ಮೂಲಕ ನೂತನ ಸಾಲ ನೀಡಲಾಗುತ್ತಿದೆ, ಈ ಹಿಂದಿನ ಸಾಲ ಪಡೆದ ರೈತರು ಸಹ ಸಾಲ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಶಾಸಕ ಎಸ್ ಎ ರಾಮದಾಸ್, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಭಾಗಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next