Advertisement

Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು

03:13 PM Dec 28, 2024 | Team Udayavani |

ಬೆಳ್ತಂಗಡಿ: ಸರಕಾರಿ ಶಾಲೆಯ ಮಕ್ಕಳು ಶ್ರಮಿಸಿ, ಬೆಳೆಸಿದ ಹೂ ಗಿಡಗಳ ಕುಂಡಗಳನ್ನು ಪುಡಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

Advertisement

ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಪೆರೊಡಿತ್ತಾಯಕಟ್ಟೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ನಿನ್ನೆ (ಡಿ. 27ರ ಶುಕ್ರವಾರ) ಮಾಜಿ ಪ್ರಧಾನಿ ನಿಧನರಾದ ಬಗ್ಗೆ ಸರಕಾರಿ ರಜೆಯಿದ್ದ ಕಾರಣ, ಇಂದು (ಡಿ.28ರ ಶನಿವಾರ) ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.

ಶಾಲಾ ಮಕ್ಕಳು ನೆಟ್ಟು ಬೆಳಿಸಿದ ಹೂ ತೋಟವನ್ನು ಕಿಡಿಗೇಡಿಗಳು ಹಾಳು ಮಾಡಿದ್ದಾರೆ.

Advertisement

ಗುರುವಾಯನಕೆರೆ -ಕಾರ್ಕಳ ಹೆದ್ದಾರಿ ರಸ್ತೆ ಪಕ್ಕದಲ್ಲೇ ಇರುವ ಈ ಸುಂದರ   ಶಾಲೆಗೆ ಶಿಕ್ಷಕರು, ಮಕ್ಕಳು, ಅಭಿವೃದ್ಧಿ ಸಮಿತಿಯವರು, ಹಳೇ ವಿದ್ಯಾರ್ಥಿಗಳ ಸಂಘದವರು, ಊರ ವಿದ್ಯಾಭಿಮಾನಿಗಳು, ಈ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಿರುತ್ತಾರೆ.

ಸರಕಾರಿ ಶಾಲೆಗೆ ತೊಂದರೆ:

ಸರಕಾರಿ ಶಾಲೆಗೆ ಇಂತಹ ನೀಚ ಕೆಲಸ ಮಾಡುವುದರಿಂದ ಕಿಡಿಗೇಡಿಗಳಿಗೆ ಏನು ಲಾಭ. ಇಲ್ಲಿ ಮಕ್ಕಳು ತರಕಾರಿ ಗಿಡ, ಹಣ್ಣಿನ ಗಿಡಗಳನ್ನು ಕೂಡ ಬೆಳೆಸಿದ್ದಾರೆ. ಅದರ ಮೇಲೂ ಕಿಡಿಗೇಡಿಗಳ ಕಣ್ಣು ಬೀಳುವ ಸಾಧ್ಯತೆ ಇದೆ ಎಂಬ ಭಯದಿಂದ ಶಾಲಾ ಶಿಕ್ಷಕ ವೃಂದ ನಮಗೆ ರಕ್ಷಣೆ ಬೇಕು ಎಂದಿದ್ದಾರೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆ ಗೆ ದೂರು ನೀಡಲಾಗಿದ್ದು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next