Advertisement

ಕುಂದಾಪುರ: ನಾಗಾಸಾಧುಗಳ ವೈಭವದ ಪುರ ಮೆರವಣಿಗೆ

07:00 AM Mar 27, 2018 | |

ಕುಂದಾಪುರ: ಅಷ್ಟ ದಿಕ್ಕುಗಳಲ್ಲಿಯೂ ಉತ್ಸಾಹ, ಜೈಕಾರ, ಉದ್ಘೋಷ ದೊಂದಿಗೆ ಸಾಗಿ ಬಂದ ಜನಸಾಗರ, ಕೇಸರಿ ಧ್ವಜಧಾರಿಗಳು, ಸೀರೆ, ಶಾಲುಗಳನ್ನು ಧರಿಸಿ ಕಲಶವನ್ನಿಡಿದ ಮಹಿಳೆಯರು, ಚೆಂಡೆ, ತಾಸೆ, ಡೊಳ್ಳು ಕುಣಿತ, ಜಾಗಟೆ, ಡಿಜೆ ಸದ್ದಿಗೆ ಕುಣಿಯುತ್ತಿರುವ ಯುವಕರು, ಯುವತಿಯರು, ಕೀಲುಗುದುರೆ, ಹುಲಿವೇಷದಾರಿಗಳು, ವಿವಿಧ ಸ್ತಬ್ಧಚಿತ್ರಗಳ ಮಧ್ಯೆ ದೂರದ ಉತ್ತರ ಭಾರತದಿಂದ ಆಗಮಿಸಿರುವ ನಾಗಾಸಾಧುಗಳು ತಮ್ಮ ವಿವಿಧ ಕರಾಮತ್ತುಗಳನ್ನು ಪ್ರದರ್ಶಿಸಿದರು. 

Advertisement

ಇದೆಲ್ಲವೂ ಕಂಡು ಬಂದದ್ದು ಚಿಕ್ಕಮ್ಮನ ಸಾಲು ರಸ್ತೆಯಲ್ಲಿರುವ ನೂತನ ಶಿಲಾಮಯಗೊಂಡ ಶ್ರೀ ಚಿಕ್ಕಮ್ಮ ದೇವಿ, ಸಪರಿವಾರ ದೇವಸ್ಥಾನದ ಲೋಕಾರ್ಪಣೆ, ಸಹಸ್ರ ಕಲಶ ಸಹಿತ ಬ್ರಹ್ಮಕಲಶ, ಚಂಡಿಕಾ ಯಾಗ, ವಾರ್ಷಿಕ ಕೆಂಡ ಸೇವೆ ಪ್ರಯುಕ್ತ ಸೋಮವಾರ ನಡೆದ ವೈಭವದ ಪುರ ಮೆರವಣಿಗೆಯಲ್ಲಿ. 


ಕುಂದಾಪುರದ ನೆಹರೂ ಮೈದಾನ ದಿಂದ ಆರಂಭಗೊಂಡ ಬೃಹತ್‌ ಶೋಭಾ ಯಾತ್ರೆಯು ಶಾಸಿŒ ಸರ್ಕಲ್‌ ಮಾರ್ಗವಾಗಿ, ಪಾರಿಜಾತ ಸರ್ಕಲ್‌ ಆಗಿ ಕುಂದಾಪುರದ ಪೇಟೆಯುದ್ದಕ್ಕೂ ಸಂಚರಿಸಿ ಚಿಕ್ಕಮ್ಮನ ಸಾಲ್‌ ರಸ್ತೆಯ ಮೂಲಕ ಚಿಕ್ಕಮ್ಮ ದೇವಿ ದೇವಸ್ಥಾನಕ್ಕೆ ನಾಗಾಸಾಧುಗಳನ್ನು ಮೆರವಣಿಗೆಯಲ್ಲಿ  ಕರೆತರಲಾಯಿತು. 

ಕುಂದಾಪುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಭಾಷ್‌ ಪೂಜಾರಿ ಸಂಗಮ್‌, ಆಡಳಿತ ಮಂಡಳಿಯ ಅಧ್ಯಕ್ಷ ಭಾಸ್ಕರ ಎಸ್‌. ಪುತ್ರನ್‌, ಶಿವರಾಮ ಪುತ್ರನ್‌, ಬಿಜೆಪಿ ಕ್ಷೇತ್ರಾಧ್ಯಕ್ಷ ಕಾಡೂರು ಸುರೇಶ ಶೆಟ್ಟಿ, ಬಿಜೆಪಿ ಮುಖಂಡ ಕಿಶೋರ್‌ ಕುಮಾರ್‌, ಪುರಸಭಾ ಉಪಾಧ್ಯಕ್ಷ ರಾಜೇಶ್‌ ಕಾವೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ವಿಠಲ್‌ ಕುಂದರ್‌, ಸದಸ್ಯರು, ಜೆಡಿಯು ಜಿಲ್ಲಾಧ್ಯಕ್ಷ ರಾಜೀವ್‌ ಕೋಟ್ಯಾನ್‌, ಸಹಿತ ಅನೇಕ ಗಣ್ಯರು ಸೇರಿದಂತೆ ಸಹಸ್ರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.


ನೀರು, ಮಜ್ಜಿಗೆ ವಿತರಣೆ
ಮೆರವಣಿಗೆಯಲ್ಲಿ ಸಾಗಿ ಬಂದ ಭಕ್ತರ ಬಾಯಾರಿಕೆ ತಣಿಸಲು ಮೈಲಾರೇಶ್ವರ ಯುವಕ ಮಂಡಲ ಹಾಗೂ ಹಲವರು ಅಲ್ಲಲ್ಲಿ ನೀರು ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. 

45 ನಾಗಾಸಾಧುಗಳು ಭಾಗಿ
ಅಯೋಧ್ಯೆಯ ಮಹಾತಪಸ್ವಿ ಯೋಗಿರಾಜ್‌ ಮಹಂತ್‌ ಕೇಶವ್‌ ದಾಸಜಿ ಮಹಾರಾಜ್‌, ಮಹಾತ್ಯಾಗಿ ಶ್ರೀ ಪಂಚ್‌ ತೇರಾಭಾಯಿ 
ಅಖಾಡ ಅಯೋಧ್ಯಾ ಸೇರಿದಂತೆ ಸುಮಾರು 45 ಮಂದಿ ಸಾಧು ಸಂತರು ಪುರ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

– ಸಂತೋಷ್‌ ಕುಂದೇಶ್ವರ

Advertisement
Advertisement

Udayavani is now on Telegram. Click here to join our channel and stay updated with the latest news.

Next