Advertisement

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

01:00 AM Jan 07, 2025 | Team Udayavani |

“ನಾನು ಪ್ರತ್ಯಕ್ಷ ಮಾತ್ರ ಒಪ್ಪುವುದು. ಆಗಮ, ಅನುಮಾನಗಳನ್ನು ಒಪ್ಪುವುದಿಲ್ಲ’ ಎನ್ನುವ ಚಾರ್ವಾಕ ಮತೀಯರನ್ನು ನಾಸ್ತಿಕ ಧರ್ಮವನ್ನು ಏಕೆ ಪ್ರಚಾರ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದರೆ “ಜನಸಾಮಾನ್ಯರ ನೆಮ್ಮದಿಯೇ ಉದ್ದೇಶ. ದೇವರಿದ್ದಾನೆಂದರೆ ಮಾತ್ರ ಭಕ್ತಿ, ವ್ರತ, ಪೂಜೆ ಮಾಡಿ ಎನ್ನುವುದಲ್ಲವೆ? ಇದರಿಂದಲೇ ಜನರು ಒದ್ದಾಡುತ್ತಿದ್ದಾರೆ. ದೇವರಿದ್ದಾನೆಂದೆ ಅಲ್ಲವೆ ಇಷ್ಟೆಲ್ಲ ಒದ್ದಾಟ? ನಮ್ಮ ಗುರಿ ಜನರು ಸುಖವಾಗಿ ಬಾಳುವುದಕ್ಕಾಗಿ. ದೇವರೇ ಇಲ್ಲವೆಂದಾದಲ್ಲಿ ಈ ತಾಪತ್ರಯವೇ ಇಲ್ಲವಲ್ಲ?’ ಎಂದುತ್ತರಿಸುತ್ತಾರೆ.

Advertisement

“ಪುಣ್ಯಪಾಪಗಳೇ ಇಲ್ಲವೆಂದರೆ ಎಲ್ಲರ ಎಲ್ಲ ವಸ್ತುಗಳನ್ನು ಯಾರೂ ಅಪಹಾರ ಮಾಡಬಹುದು.ಅರಾಜಕತೆ ಉಂಟಾಗುತ್ತದೆ. ನರಕಾದಿಗಳು ಪ್ರಾಪ್ತವಾಗುತ್ತದೆ’ ಎಂದು ಹೇಳಿದರೆ ನರಕಾದಿಗಳೇ ಇಲ್ಲವೆಂದರೆ ಒಳಿತಲ್ಲವೆ? ಎನ್ನುತ್ತಾರೆ. ಯಾವುದೇ ಕಾನೂನು ಇಲ್ಲವೆಂದರೆ ಯಾರೂ ಬದುಕುವ ಹಾಗಿಲ್ಲ. ಆಗಮ ಪ್ರಾಮಾಣ್ಯ ಸಿದ್ಧವಾಗುವುದು ಅನುಮಾನದಿಂದಲೇ. ಅತೀಂದ್ರಿಯ ವಸ್ತುಗಳೇ ಇಲ್ಲ ಎಂದಾದರೆ ನಿರಂಕುಶರಾಗಿ ಬದುಕಬಹುದು, ಸ್ವೇಚ್ಛಾಚಾರ ಬೆಳೆಯುತ್ತದೆ. ಯಾರಿಗೆ ಯಾರೂ ಹಿಂಸೆ ಮಾಡಬಹುದು. ಪುಣ್ಯಪಾಪ ಇದೆ ಎಂದರೆ ಹೆದರಿಕೆ ಇರುತ್ತದೆ. ಒಟ್ಟಾರೆ ಚಾರ್ವಾಕ ಮತದಿಂದ ಸರ್ವದುಃಖಗಳು ಬರುತ್ತವೆ. ಜನರಿಗೆ ಸುಖವನ್ನು ಉಂಟುಮಾಡುತ್ತೇವೆಂದು ಹೇಳುವುದಾದರೂ ಇದರಿಂದ ಅನರ್ಥವೇ ಹೆಚ್ಚಾಗುತ್ತದೆ ಎಂಬ ಪ್ರತಿಪ್ರಶ್ನೆ ಬರುತ್ತದೆ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,  ಉಡುಪಿ

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

Advertisement

Udayavani is now on Telegram. Click here to join our channel and stay updated with the latest news.

Next