Advertisement

KSRTCಯಿಂದ ಅಪಘಾತ ವಾಸ್ತವತೆ ಪತ್ತೆಗೆ ಕ್ರಮ ; ಬಸ್‌ಗಳ ಮುಂಭಾಗದಲ್ಲಿ ಕೆಮರಾ ಅಳವಡಿಕೆ

03:16 AM Jul 20, 2020 | Hari Prasad |

ಮಂಗಳೂರು: ಪ್ರಯಾಣಿಕರು ಹಾಗೂ ಸಿಬಂದಿಯ ಸುರಕ್ಷತೆಯನ್ನು ಮುಂದಿಟ್ಟುಕೊಂಡು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಬಸ್‌ನ ಮುಂಭಾಗದಲ್ಲಿ ಕೆಮರಾಗಳನ್ನು ಅಳವಡಿಸಲು ನಿರ್ಧರಿಸಿದೆ.

Advertisement

ಅಪಘಾತದ ಸಮಯದಲ್ಲಿ ವಾಸ್ತವತೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಈ ಕೆಮರಾ ಸಹಕಾರಿಯಾಗಲಿದೆ.

ಕೆಲವೊಮ್ಮೆ ಬಸ್‌ ಚಾಲಕನ ತಪ್ಪಿಲ್ಲದಿದ್ದರೂ ಅವರೇ ಹೊಣೆಗಾರರಾಗುವ ಸಾಧ್ಯತೆಯಿದೆ. ಇದನ್ನು ತಪ್ಪಿಸಲು ನೈಜ ಘಟನೆ ತಿಳಿಯುವ ನಿಟ್ಟಿನಲ್ಲಿ ಕೆಮರಾ ಸಹಕಾರಿಯಾಗಲಿದೆ.

ಈ ಸಂಬಂಧ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಚರ್ಚೆ ನಡೆಸಲಾಗಿದೆ.

ಹಂತ ಹಂತದಲ್ಲಿ ಅಳವಡಿಕೆ
ಮೊದಲ ಹಂತದಲ್ಲಿ ಪ್ರಧಾನ ಕಚೇರಿಯ ಕೆಲವು ಬಸ್‌ಗಳಿಗೆ ಅಳವಡಿಸಲಾಗುತ್ತದೆ. ಬಳಿಕ ವಿಭಾಗ ಮಟ್ಟದಲ್ಲಿ ಅಳವಡಿಸಲಾಗುವುದು. ಚಾಲಕನ ಸೀಟಿನ ಬಳಿಯಲ್ಲಿ ಇರುವ ಸಣ್ಣ ಕನ್ನಡಿಯೂ ಅಪಘಾತಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಆ ಕನ್ನಡಿ ಯನ್ನು ಬದಲಾಯಿಸಲಾಗಿದೆ.

Advertisement

ತರಬೇತಿ
ಅಪಘಾತ ರಹಿತ ಬಸ್‌ ಚಾಲನೆಗಾಗಿ ಚಾಲಕರಿಗೆ ಮೂರು ಆಯಾಮದಲ್ಲಿ ಸಿಮ್ಯುಲೇಟರ್‌ ತರಬೇತಿ ನೀಡಲಾಗುತ್ತಿದೆ. ರಕ್ಷಣಾತ್ಮಕ ಚಾಲನಾ ಕೌಶಲದ ಬಗ್ಗೆ ಇದೀಗ ಹಾಸನ, ಬೆಂಗಳೂರು ಮತ್ತು ಮೈಸೂರಿನಲ್ಲಿ ತರಬೇತಿ ನೀಡಲಾಗುತ್ತಿದೆ.

ಕೆಮರಾ ಹೇಗಿರಲಿದೆ?
ಬಸ್‌ಗೆ ಅಳವಡಿಸಲಾಗುವ ಕೆಮರಾವು ಹಗಲು ಮಾತ್ರವಲ್ಲದೆ ರಾತ್ರಿಯಲ್ಲಿಯೂ ಚಿತ್ರೀಕರಣ ನಡೆಸುವ ಸಾಮರ್ಥ್ಯ ಹೊಂದಿದೆ. ಸುಮಾರು 100 ಮೀಟರ್‌ ವರೆಗಿನ ಚಿತ್ರಣ ಸ್ಪಷ್ಟವಾಗಿ ಗೋಚರಿಸಲಿದೆ. 150 ಡಿಗ್ರಿ ಸುತ್ತುವ ವೈಶಿಷ್ಟ್ಯ ಹೊಂದಿದೆ. ಕೆಮರಾದಲ್ಲಿ ಸೆರೆಯಾಗುವ ದೃಶ್ಯ ಚಾಲಕನಿಗೂ ತಿಳಿಯಲಿದ್ದು, ರಸ್ತೆಯಲ್ಲಿ ಅಪಘಾತ ತಡೆಯಲು ಇದು ಸಹಕಾರಿ.

ಅಪಘಾತ ವಾಸ್ತವತೆ ಸಹಿತ ಚಾಲಕರ, ಪ್ರಯಾಣಿಕರ ಸುರಕ್ಷೆ ಹಿನ್ನೆಲೆಯಲ್ಲಿ ಬಸ್‌ನಲ್ಲಿ ಸಿಸಿ ಕೆಮರಾ ಅಳವಡಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಚರ್ಚೆ ನಡೆದಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಬಸ್‌ಗಳಿಗೆ ಕೆಮರಾ ಅಳವಡಿಸುತ್ತೇವೆ.
– ಶಿವಯೋಗಿ ಎಸ್‌. ಕಳಸದ್‌, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next