Advertisement
ಬೆಂಗಳೂರಿನಿಂದ ಶುಕ್ರವಾರ ರಾತ್ರಿ 11.45 ಗಂಟೆಗೆ ಹೊರ ಐರಾವತ ಬಸ್ ಶನಿವಾರ ಮುಂಜಾನೆ 3.30 ರ ವೇಳೆ ಶಾಂತಿಗ್ರಾಮ ಸಮೀಪದ ಕಾಲೇಜು ಮುಂಭಾಗ ಕೃಷಿ ಕಾಲೇಜು ರಸ್ತೆ ಬದಿಯ ಸೇತುವೆಯಿಂದ ಕೆಳಕ್ಕೆ ಉರುಳಿ ಬಿದ್ದಿದೆ. ಬಸ್‌ನಲ್ಲಿ ಒಟ್ಟು 43 ಜನರು ಪ್ರಯಾಣಿಸುತ್ತಿದ್ದು, ಬಸ್ ಚಾಲಕ, ನಿರ್ವಾಹಕ ಸೇರಿ 7 ಜನರು ಮೃತಪಟ್ಟಿದ್ದಾರೆ. ಗಾಯಾಳುಗಳ ಪೈಕಿ 30 ಜನರು ಹಾಸನದ ಎನ್‌ಡಿಆರ್‌ಕೆ ಖಾಸಗಿ ಆಸ್ಪ$ತ್ರೆಯಲ್ಲಿ 6 ಜನರು ಹಾಸನದ ವೈದ್ಯಕೀಯ ಕಾಲೇಜು ಆಸ್ಪ$ತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದು, ತೀವ್ರವಾಗಿ ಗಾಯಗೊಂಡವರನ್ನು ಬೆಂಗಳೂರು ಮತ್ತು ಮಂಗಳೂರಿನ ಆಸ್ಪ$ತ್ರೆಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಾಗಿಸಲಾಗಿದೆ.
Related Articles
Advertisement
ಪ್ರಯಾಣಿಕ ಕಿಶೋರ್ ಜಾಣ್ಮೆ : ಬಸ್ ಅಪಘಾತಕ್ಕೀಡಾಗುವ ಸಂದರ್ಭದಲ್ಲಿ ಪ್ರಯಾಣಿಕರು ನಿದ್ರೆಯಲ್ಲಿದ್ದರು. ಬಸ್ ಅಗಾಘಕ್ಕೀಡಾದ ನಂತರವೇ ಬಹುತೇಕ ಪ್ರಯಾಣಿಕರು ಎಚ್ಚರಗೊಂಡಿದ್ದಾರೆ. ಬಸ್ ಉರುಳಿ ಬಿದ್ದಿದ್ದರಿಂದ ಪ್ರಯಾಣಿಕರು ಕತ್ತಲೆಯಲ್ಲಿ ಹೊರ ಬರಲೂ ತಕ್ಷಣಕ್ಕೆ ಸಾಧ್ಯವಾಗಿಲ್ಲ. ಆದರೆ ಕಿಶೋರ್ ಎಂಬ ಪ್ರಯಾಣಿಕರು ತನ್ನ ಪಕ್ಕದಲ್ಲಿದ್ದ ಗ್ಲಾಸ್ ಒಡೆಯಲು ಸಾಧ್ಯವಾಗದಿದ್ದಾಗ ಚಾಲನ ಸೀಟಿನ ಬಳಿಗೆ ಸಾಗಿ ಅಲ್ಲಿಂದ ಹೊರಗೆ ಬಂದು ರಸ್ತೆಗೆ ಬಂದು ಕೂಗಿಕೊಂಡಿದ್ದಾರೆ. ಆಗ ವಾಹನಗಳಲ್ಲಿ ಬರುತ್ತಿದ್ದವರು ಆಕ್ಕ ಪಕ್ಕದವರು ಸ್ಥಳಕ್ಕೆ ಬಂದು ನೆರವು ನೀಡಿದ್ದಾರೆ. ಅಪಘಾತ ಸಂಭವಿಸಿದ ಸುಮಾರು ಅರ್ಧಗಂಟೆಯೊಳಗೆ ಹಾಸನದಿಂದ ಆ್ಯಂಬ್ಯುಲೆನ್ಸ್‌ಗಳು ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪ$ತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿವೆ. ಎಸ್ಪಿ$ ರಾಹುಲ್ ಕುಮಾರ್ ಅವರೂ ಸಿಬ್ಬಂದಿಯೊಂದಿಗೆ ಅರ್ಧಗಂಟೆಯೊಳಗೆ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಗಳಲ್ಲಿ ನಿರತರಾದರು ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷ ದರ್ಶಿಗಳು ತಿಳಿಸಿದರು.
ಸ್ಥಳೀಯರಿಗೆ ಗೊತ್ತಾಗಲೇ ಇಲ್ಲ ! : ಬಸ್ ಉರುಳಿ ಬಿದ್ದ ಭಾರೀ ಶಬ್ದವು ಕೃಷಿ ಕಾಲೇಜು ಸುತ್ತಮುತ್ತಲಿನ ಜನರಿಗೆ ಕೇಳಿಸಿತೆಂದು, ಆದರೆ ರಸ್ತೆಯಲ್ಲಿ ನೋಡಿದಾಗ ವಾಹನಗಳು ಸಂಚರಿಸುತ್ತಿದ್ದರಿಂದ ಬೇರೇನೋ ಶಬ್ದವಿರಬಹುದೆಂದು ಸ್ಥಳಕ್ಕೆ ಹೋಗಿಲ್ಲವೆನ್ನಲಾಗಿದೆ. ಆದರೆ ಕೆಲ ಸಮಯದ ನಂತರ ಆ್ಯಂಬುಲೆನ್ಸ್‌ಗಳ ಓಡಾಟ ಆರಂಭವಾದಾಗ ಅಪಘಾತ ಸಂಭಿವಿದ್ದು ತಿಳಿದು ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯಕ್ಕೆ ಸಹಕರಿಸಿದರು ಎಂದು ತಿಳಿದು ಬಂದಿದೆ.
ಉತ್ತಮ ರಸ್ತೆಯಿದ್ದರೂ ಅಪಘಾತ !: ಬೆಂಗಳೂರು – ಹಾಸನ ನಡುವೆ ಚತುಷ್ಪ$ಥ ರಸ್ತೆಯಿದ್ದು, ಬಸ್ ಅಪಘಾತಕ್ಕೀಡಾದ ಸ್ಥಳ ಅಪಘಾತ ವಲಯವಲ್ಲ. ಬಸ್‌ನ ವೇಗ 59 ಕಿ.ಮೀ.ದಲ್ಲಿದ್ದರೂ ಬಸ್ ಉರುಳಿ ಬಿದ್ದಿರುವುದನ್ನು ಗಮನಿಸಿದರೆ ಚಾಲಕ ನಿದ್ರೆಯ ಮಂಪರಿನಲ್ಲಿದ್ದು ಅಜಾಗರೂಕತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಬಸ್ ರಸ್ತೆ ಬದಿಗೆ ಬಂದು ಕೆಲ ದೂರ ಸಾಗಿ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಉರುಳಿ ಬಿದ್ದಿದೆ.
ಎದುರಿನಿಂದ ಬಂದ ವಾಹನಗಳು ಡಿಕ್ಕಿ ಹೊಡೆದ ಪ್ರಕರಣಗಳನ್ನು ಹೊರತುಪಡಿಸಿದರೆ ಐರಾವತ ಬಸ್‌ಗಳು ಅಪಘಾತಕ್ಕೀಡಾಗುವದು ವಿರಳ. ಆದರೂ ಬಸ್ ಅಪಘಾತಕ್ಕೀಡಾಗಿರುವುದು ಅಚ್ಚರಿ ಮೂಡಿಸಿದೆ. ಬಸ್ ಸುವ್ಯವಸ್ಥಿತಿ ಸ್ಥಿತಿಯಲ್ಲಿದ್ದು ,ಅದರ ಅರ್ಹತಾ ಅವಧಿ ಮುಂದಿನ ಏಪ್ರಿಲ್ ಅಂತ್ಯದವರೆಗೂ ಇದೆ. ಬಸ್ ನ್ಯೂ ಇಂಡಿಯಾ ಇನ್ಸೂರೆನ್ಸ್‌ನಿಂದ ವಿಮೆ ಪಡೆದಿದೆ.