Advertisement
ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್ 4 ವಿಕೆಟಿಗೆ ಕೇವಲ 142 ರನ್ ಗಳಿಸಿದರೆ, ಕೆಕೆಆರ್ 18 ಓವರ್‌ಗಳಲ್ಲಿ 3 ವಿಕೆಟಿಗೆ 145 ರನ್ ಬಾರಿಸಿತು. ವಾರ್ನರ್ ಪಡೆ ಸತತ ಎರಡೂ ಪಂದ್ಯಗಳಲ್ಲಿ ಮುಗ್ಗರಿಸಿತು.
ಡೇವಿಡ್ ವಾರ್ನರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವ ನಿರ್ಧಾರಕ್ಕೆ ಬಂದರು. ಆದರೆ ಜಾನಿ ಬೇರ್‌ಸ್ಟೊ ಐದೇ ರನ್ನಿಗೆ ನಿರ್ಗಮಿಸಿದ್ದು ತಂಡಕ್ಕೆ ದೊಡ್ಡ ಆಘಾತವಿಕ್ಕಿತು. ಅವರನ್ನು ಬೌಲ್ಡ್ ಮಾಡುವ ಮೂಲಕ ಪ್ಯಾಟ್ ಕಮಿನ್ಸ್ ಕಳೆದ ಪಂದ್ಯದ ವೈಫಲ್ಯವನ್ನು ಬದಿಗೊತ್ತಿದರು. ಅವರು ಮೊದಲ ಸ್ಪೆಲ್‌ನ 3 ಓವರ್‌ಗಳಲ್ಲಿ ನೀಡಿದ್ದು ಬರೀ 11 ರನ್.
Related Articles
Advertisement
ನಿಧಾನ ಗತಿಯ ಟ್ರ್ಯಾಕ್ ಆದ ಕಾರಣ ಮುನ್ನುಗ್ಗಿ ಬಾರಿಸುವುದು ಭಾರೀ ಸವಾಲಾಗಿತ್ತು. ಕಮಲೇಶ್ ನಾಗರಕೋಟಿ ಅವರಂತೂ 140 ಕಿ.ಮೀ.ಗೆ ಕಡಿಮೆ ಇಲ್ಲದಂತೆ ಎಸೆತಗಳನ್ನಿಕ್ಕುತ್ತಿದ್ದರು. ಹಾಗೆಯೇ 6 ಮಂದಿ ಸ್ಪೆಷಲಿಸ್ಟ್ ಬೌಲರ್‌ಗಳ ದಾಳಿಯನ್ನು ನಿಭಾಯಿಸಿ ನಿಲ್ಲುವುದು ಸುಲಭವಾಗಿರಲಿಲ್ಲ. ಬರೀ ಒಂಟಿ-ಅವಳಿ ರನ್ನುಗಳೇ ಬರುತ್ತಿದ್ದವು.
ಪಾಂಡೆ ಅರ್ಧ ಶತಕವನ್ಡೌನ್ನಲ್ಲಿ ಬಂದ ಮನೀಷ್ 35 ಎಸೆತಗಳಿಂದ ಅರ್ಧ ಶತಕ ಪೂರ್ತಿಗೊಳಿಸಿದರು. ರಸೆಲ್‌ಗೆ ರಿಟರ್ನ್ ಕ್ಯಾಚ್ ನೀಡಿದ ಪಾಂಡೆ 38 ಎಸೆತಗಳಿಂದ 51 ರನ್ ಮಾಡಿ ತಂಡದ ಟಾಪ್ ಸ್ಕೋರರ್ ಎನಿಸಿದರು. ಇದರಲ್ಲಿ 3 ಫೋರ್, 2 ಸಿಕ್ಸರ್ ಸೇರಿತ್ತು.
ಇನ್ನೊಂದು ತುದಿಯಲ್ಲಿದ್ದ ವೃದ್ಧಿಮಾನ್ ಸಾಹಾ ಮಾತ್ರ ಚಡಪಡಿಸುತ್ತಲೇ ಉಳಿದರು. ಅವರು 30 ರನ್ನಿಗೆ 31 ಎಸೆತ ತೆಗೆದುಕೊಂಡರು (1 ಬೌಂಡರಿ, 1 ಸಿಕ್ಸರ್). ಪಾಂಡೆ-ಸಾಹಾ ಜೋಡಿಯಿಂದ 3ನೇ ವಿಕೆಟಿಗೆ 51 ಎಸೆತಗಳಿಂದ 62 ರನ್ ಒಟ್ಟುಗೂಡಿತು.