Advertisement

Pro Kabaddi-2024: ಹರಿಯಾಣಕ್ಕೆ ಮೊದಲ ಕಿರೀಟ

11:25 PM Dec 29, 2024 | Team Udayavani |

ಪುಣೆ: ಹರಿಯಾಣ ಸ್ಟೀಲರ್ ಮೊದಲ ಬಾರಿಗೆ ಪ್ರೊ ಕಬಡ್ಡಿ ಕಿರೀಟ ವನ್ನು ಏರಿಸಿಕೊಂಡಿದೆ. ರವಿವಾರ ನಡೆದ 11ನೇ ಪ್ರೊ ಕಬಡ್ಡಿ ಫೈನಲ್‌ನಲ್ಲಿ ಅದು 3 ಬಾರಿಯ ಮಾಜಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡವನ್ನು 32-23 ಅಂತರದಿಂದ ಕೆಡವಿತು.

Advertisement

ಲೀಗ್‌ ಹಂತದ ಟೇಬಲ್‌ ಟಾಪರ್‌ ಆಗಿದ್ದ, ಮನ್‌ಪ್ರೀತ್‌ ಸಿಂಗ್‌ ಕೋಚ್‌ ಆಗಿರುವ ಹರಿಯಾಣಕ್ಕೆ ಇದು ಸತತ 2ನೇ ಫೈನಲ್‌ ಆಗಿತ್ತು. ಕಳೆದ ವರ್ಷದ ಪ್ರಶಸ್ತಿ ಸಮರದಲ್ಲಿ ಪುಣೇರಿ ಪಲ್ಟಾನ್‌ ಕೈಯಲ್ಲಿ 28-25 ಅಂತರದ ಸೋಲನುಭವಿಸಿ ಪ್ರಶಸ್ತಿ ವಂಚಿತವಾಗಿತ್ತು. ಈ ಬಾರಿ ಅದೃಷ್ಟ ಕೈ ಹಿಡಿಯಿತು.

ಇನ್ನೊಂದೆಡೆ ಪಾಟ್ನಾ ಪೈರೇಟ್ಸ್‌ 5ನೇ ಫೈನಲ್‌ ಆಡಲಿಳಿದಿತ್ತು. 3, 4 ಮತ್ತು 5ನೇ ಆವೃತ್ತಿಗಳಲ್ಲಿ ಚಾಂಪಿಯನ್‌ ಆಗಿ ಹ್ಯಾಟ್ರಿಕ್‌ ಸಾಧಿಸಿದ್ದ ಪಾಟ್ನಾ, 8ನೇ ಆವೃತ್ತಿಯ ಫೈನಲ್‌ನಲ್ಲಿ ಎಡವಿತ್ತು.

ಹರಿಯಾಣ ಪರ ರೈಡರ್‌ಗಳಾದ ಶಿವಂ ಪತಾರೆ ಸರ್ವಾಧಿಕ 9, ವಿನಯ್‌ 6, ಆಲ್‌ರಂಡರ್‌ ಮೊಹಮ್ಮದ್‌ರೇಝ ಶಾದೂಯಿ 7 ಅಂಕ ಗಳಿಸಿ ಮಿಂಚಿದರು. ಪಾಟ್ನಾ ಸರದಿಯಲ್ಲಿ ಆಲ್‌ರೌಂಡರ್‌ ಗುರುದೀಪ್‌ 6, ರೈಡರ್‌ ದೇವಾಂಕ್‌ 5 ಅಂಕ ಗಳಿಸಿ ಹೋರಾಟ ನೀಡಿದರು.

ದೇವಾಂಕ್‌ 300 ರೈಡ್‌ ಅಂಕ
5 ಅಂಕ ಗಳಿಸುವ ಮೂಲಕ ಪಾಟ್ನಾ ತಂಡದ ದೇವಾಂಕ್‌ ಈ ಆವೃತ್ತಿಯಲ್ಲಿ ಒಟ್ಟಾರೆ 301 ರೈಡ್‌ ಪಾಯಿಂಟ್‌ ಗಳಿಸಿ ಗಮನ ಸೆಳೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next