Advertisement

Arsikere; ಆಕಾಶದಲ್ಲಿ ಶೀಘ್ರ ದೊಡ್ಡ ಸುದ್ದಿ ಘಟಿಸಲಿದೆ: ಕೋಡಿ ಶ್ರೀ ಸ್ಫೋಟಕ ಭವಿಷ್ಯ

07:36 PM Sep 09, 2024 | Team Udayavani |

ಹಾಸನ: ರಾಜಕೀಯದಲ್ಲಿ ಅದಲು ಬದಲು, ಸೋಲು-ಗೆಲುವು, ಕೇಂದ್ರ ಹಾಗೂ ರಾಜ್ಯದಲ್ಲೂ ಆಗಲಿದೆ ಎಂದು ಶ್ರೀಕ್ಷೇತ್ರ ಹಾರನಹಳ್ಳಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

Advertisement

ಶ್ರೀ ಮಠದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರ ಬದಲಾವಣೆ ಆಗಬಹುದು. ಆಕಾಶದಲ್ಲಿ ಘಟಿಸುವ ದೊಡ್ಡ ಸುದ್ದಿ ಇದೆ ಎಂದು ಹೇಳುವ ಮೂಲಕ ಕುತೂಹಲ ಜತೆಗೆ ಆತಂಕ ಹೆಚ್ಚುವಂತಹ ಭವಿಷ್ಯ ನುಡಿದರು.

ಅಭಿಮನ್ಯುವಿನ ಬಿಲ್ಲನ್ನು ಮೋಸದಿಂದ ಕರ್ಣನ ಕೈಯಲ್ಲಿ ದಾರ ಕಟ್‌ ಮಾಡಿಸುತ್ತಾರೆ. ಮಹಾಭಾರತದಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮ ಗೆದ್ದ. ಇದೀಗ ಕೃಷ್ಣ ಇಲ್ಲದೆ ದುರ್ಯೋಧನ ಗೆಲ್ತಾನೆ ಎಂದು ಹೇಳಿದ್ದೇನೆ. ಅದರ ಅರ್ಥ ಆಮೇಲೆ ಹೇಳುವೆ ಎನ್ನುವ ಮೂಲಕ ರಾಜಕೀಯವಾಗಿ ನಾಯಕರಿಗೆ ಏಳು-ಬೀಳು, ಹಿನ್ನಡೆ-ಮುನ್ನಡೆಯ ಭವಿಷ್ಯವನ್ನು ಮಹಾ ಭಾರತದ ಪ್ರಸಂಗ ಉದ್ಧರಿಸಿ ಹೇಳಿದರು.

ಮಳೆಯಿಂದ ಹೆಚ್ಚು ತೊಂದರೆ ಇದೆ. ಒಂದು ಆಕಾಶ ತತ್ವದ ಪ್ರಕಾರ ತೊಂದರೆ ಆಗಬಹುದು. ಅದು ರಾಜನ ಮೇಲೆ ಭಂಗ ಬೀರಲಿದೆ. ಪ್ರಾಕೃತಿಕ ದೋಷ ಇದೆ, ಐದು ಕಡೆಯೂ ಅಂದರೆ ಭೂಮಿ, ಅಗ್ನಿ, ವಾಯು, ಆಕಾಶ ಎಲ್ಲ ಕಡೆಯಿಂದಲೂ ತೊಂದರೆ ಆಗುತ್ತದೆ ಎಂದರು.

ನಮ್ಮದೇ ಮೂಲಗೌರಿ: ಇದೇ ವೇಳೆ ತಾಲೂಕಿನ ಮಾಡಾಳು ಸ್ವರ್ಣಗೌರಿ ವಿಷಯದಲ್ಲಿ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

Advertisement

ಶ್ರೀ ಮಠದ ಮೂಲ ಸ್ವಾಮೀಜಿ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರು 2 ಕೋಟಿ ತಪಸ್ಸು ಮಾಡಿ ಪವಾಡ ಶಕ್ತಿಯುಳ್ಳ ಮೂಗುತಿಯನ್ನು ಮುದ್ದೇಗೌಡರಿಗೆ ನೀಡಿದ್ದರು. ಪದ್ಧತಿ, ರೂಢಿ, ಸಂಸ್ಕೃತಿ ಇರುವ ಹಿಂದೂ ಪಂಚಾಂಗದ ಪ್ರಕಾರವೇ ನಾವು ಹಿಂದಿನಿಂದಲೂ ಸ್ವರ್ಣಗೌರಿ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ಹಿರಿಯ ಸ್ವಾಮೀಜಿ ಅವರು ನೀಡಿರುವ ಮೂಗುತಿಯನ್ನು ಸ್ವರ್ಣಗೌರಿಗೆ ಧಾರಣೆ ಮಾಡಿದರೆ ಸಾಕ್ಷಾತ್ ದೇವರ ಸ್ವರೂಪವೇ ಮೂರ್ತಿಯಲ್ಲಿ ಮೈವೆತ್ತಲಿದೆ. ಮೂಗುತಿ ತೊಡಿಸಿದಾಗ ಮೂರ್ತಿಗೆ ಶಕ್ತಿ ಬರಲಿದೆ. ಅದೇ ಹಿನ್ನೆಲೆ, ಶಕ್ತಿ ಇರುವ ಗೌರಿಯನ್ನು ಮಾಡಾಳು ಗ್ರಾಮದ ಚನ್ನಬಸವೇಶ್ವರ ಟಾಕೀಸ್ ಹತ್ತಿರದ ಯರೇಹಳ್ಳಿ ರಸ್ತೆ ಪಕ್ಕದ ನೂತನ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ದೇವಿ ಕನಸಿನಲ್ಲಿ ಬಂದು ನನಗೊಂದು ನೆಲೆ ಕಲ್ಪಿಸು ಎಂದು ಹೇಳಿರುವ ಪ್ರಕಾರ, ಈ ವರ್ಷದಿಂದ ಹೊಸ ನೆಲೆಯಲ್ಲಿ ಸ್ವಣಗೌರಿಯನ್ನು ಪ್ರತಿಷ್ಠಾಪನೆಗೊಳಿಸಲಾಗಿದೆ ಎಂದು ಸ್ವಾಮೀಜಿ ಹೇಳಿದರು.

ಅದೇ ಗ್ರಾಮದಲ್ಲಿ ಮತ್ತೊಂದು ಕಡೆ ಗೌರಮ್ಮನನ್ನು ಪ್ರತಿಷ್ಠಾಪನೆ ಮಾಡಿ ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ಬೇಸರ ಹೊರ ಹಾಕಿದರು.

ಆ ಬಗ್ಗೆ ಏನನ್ನೂ ಮಾತನಾಡಲ್ಲ. ಮೂಲ ಗೌರಮ್ಮನಿಗೆ ಜಿಲ್ಲೆ, ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳನ್ನೂ ಭಕ್ತರಿದ್ದಾರೆ. ಗೊಂದಲದಿಂದ ಕರೆ ಕೇಳುತ್ತಿದ್ದಾರೆ. ಇದರ ನಿವಾರಣೆಗಾಗಿ ಬೋರ್ಡ್ ಹಾಕಲು ಬಿಟ್ಟಿಲ್ಲ, ಭಕ್ತರು ಯಾವುದೇ ಗೊಂದಲಕ್ಕೆ ಒಳಗಾಗದೆ ಮೂಲ ಗೌರಿಯ ದರ್ಶನ ಪಡೆದು ಪುನೀತರಾಗುವಂತೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next