Advertisement
ಮಹಾಪೂಜೆಯ ಬಳಿಕ ದೇಗುಲದ ಹೊರಾಂಗಣದಲ್ಲಿ ಬಂಡಿ ಉತ್ಸವ, ಪಾಲಕಿ ಉತ್ಸವ ಹಾಗೂ ಸಂಗೀತ, ಮಂಗಳವಾದ್ಯ, ನಾಗಸ್ವರ, ಬ್ಯಾಂಡ್ ಸುತ್ತುಗಳ ಬಳಿಕ ರಥಬೀದಿಗೆ ದೇವರ ಪ್ರವೇಶವಾಯಿತು. ಬಳಿಕ ಉತ್ತರಾಧಿ ಮಠದಲ್ಲಿ ಮಯೂರ ವಾಹನ ಸುಬ್ರಹ್ಮಣ್ಯ ದೇವರಿಗೆ ಪೂಜೆ ನೆರವೇರಿತು.
Related Articles
ಚೌತಿಯ ದಿನವಾದ ಗುರುವಾರ 78 ಭಕ್ತರು ಸ್ವಯಂಪ್ರೇರಿತರಾಗಿ ಎಡೆಸ್ನಾನ ಸೇವೆ ನೆರವೇರಿಸಿದರು. ಪಂಚಮಿ ದಿನವಾರ ಶುಕ್ರವಾರ ಮತ್ತು ಷಷ್ಠಿ ದಿನವಾದ ಶನಿವಾರವೂ ಎಡೆಸ್ನಾನ ನೆರವೇರಲಿದೆ.
Advertisement
ಚಂಪಾಷಷ್ಠಿ: ಮುನ್ನೆಚ್ಚರಿಕೆ ಕ್ರಮಮಂಗಳೂರು: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಚಂಪಾಷಷ್ಠಿ ಮಹೋತ್ಸವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಂಜಾಡಿ ಬಳಿಯ ಮದ್ಯದಂಗಡಿಗಳನ್ನು ಡಿ. 6ರ ಬೆಳಗ್ಗೆ 6ರಿಂದ ಡಿ. 7ರ ಮಧ್ಯರಾತ್ರಿ 12 ಗಂಟೆ ತನಕ ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.