ನಟ ಸಂಚಾರಿ ವಿಜಯ್ ಅಭಿನಯಿಸಿದ್ದ ಚಿತ್ರಗಳು ಅವರ ನಿಧನದ ನಂತರ ಒಂದೊಂದಾಗಿ ತೆರೆಗೆ ಬರುತ್ತಿವೆ. ಅದರಲ್ಲಿ “ಪುಕ್ಸಟ್ಟೆ ಲೈಫು’ ಕೂಡ ಒಂದು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಕಳೆದ ವರ್ಷ ಮೇನಲ್ಲಿ “ಪುಕ್ಸಟ್ಟೆ ಲೈಫು’ ರಿಲೀಸ್ ಆಗಬೇಕಿತ್ತು. ಆದರೆ ಕೋವಿಡ್ ಆತಂಕ, ಎರಡು ಬಾರಿ ಎದುರಾದ ಲಾಕ್ ಡೌನ್‌ನಿಂದ ಚಿತ್ರದ ರಿಲೀಸ್ ಮುಂದೂಡುತ್ತ ಬಂದಿದ್ದ ಚಿತ್ರತಂಡ ಅಂತಿಮವಾಗಿ ಇದೇ ಸೆ.24 ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಂಡಿದೆ.
ಅಂದಹಾಗೆ, “ಸರ್ವಸ್ವ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಪುಕ್ಸಟ್ಟೆ ಲೈಫು’ ಚಿತ್ರಕ್ಕೆ ಸ್ವತಃ ವಿಜಯ್ ಅವರೇಕಥೆ ನೀಡಿದ್ದು, ಅರವಿಂದ್ ಕುಪ್ಶಿಕರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಸಂಚಾರಿ ವಿಜಯ್ ಬೀಗ ರಿಪೇರಿ ಮಾಡುವ ಮುಸ್ಲಿಂ ಹುಡುಗನ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದ ಪಾತ್ರಕ್ಕಾಗಿ ಸಂಚಾರಿ ವಿಜಯ್ ತಮ್ಮ ತೂಕವನ್ನು ಇಳಿಸಿಕೊಂಡಿದ್ದರಂತೆ. “ಯಾವುದೇ ಪಾತ್ರವಿರಲಿ ಅದಕ್ಕೆ ವಿಜಯ್ ತನ್ನದೇ ಆದ ಪರಿಶ್ರಮ ಹಾಕುತ್ತಿದ್ದರು.
ಚಿತ್ರೀಕರಣ ಮತ್ತಿತರ ಚಿತ್ರದಕೆಲಸಕ್ಕೆಕೂಡ ಸೈಕಲ್‌ನಲ್ಲೇ ಓಡಾಡುತ್ತಿದ್ದರು. ಈ ಚಿತ್ರದಲ್ಲೂಕೂಡ ಪಾತ್ರಕ್ಕೆ ಬೇಕಾದಷ್ಟು ತೂಕ ಇಳಿಸಿಕೊಂಡು, ಸಣ್ಣಗಾಗಿದ್ದರು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮುಸ್ಲಿಂ ಪಾತ್ರಗಳು ಉರ್ದು, ಹಿಂದಿ ಮಿಶ್ರಿತ ಅರೆಬರೆಕನ್ನಡದಲ್ಲಿ ಮಾತನಾಡುತ್ತವೆ. ಆದ್ರೆ ತುಂಬಾ ಚೆನ್ನಾಗಿ ಕನ್ನಡ ಮಾತನಾಡುವ ಮುಸ್ಲಿಮರೂ ಇ¨ªಾರೆ. ಹಾಗೆ ಅಪ್ಪಟ ಕನ್ನಡದಲ್ಲೇ ಮಾತನಾಡುವ ಮುಸ್ಲಿಂ ಯುವಕನ ಪಾತ್ರ ವಿಜಯ್ ಅವರದ್ದು’ ಎನ್ನುತ್ತದೆ ಚಿತ್ರತಂಡ.
ಇತ್ತೀಚೆಗೆ “ಪುಕ್ಸಟ್ಟೆ ಲೈಫು’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ನೋಡುಗರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ವಿಜಯ್ ಅವರ ಪಾತ್ರ ನಿರ್ವಹಣೆ ಬಗ್ಗೆ ಚಿತ್ರರಂಗದಿಂದಲೂ ಪ್ರಶಂಸೆಯ ಮಾತುಗಳು ವ್ಯಕ್ತವಾಗುತ್ತಿವೆ. ಇನ್ನು ವಿಜಯ್ ಬದುಕಿದ್ದಾಗಲೇ, “ಪುಕ್ಸಟ್ಟೆ ಲೈಫು’ ಚಿತ್ರವನ್ನು ವೀಕ್ಷಿಸಿದ್ದ ನಟ ಕಿಚ್ಚ ಸುದೀಪ್, “ಬೀಗ ರಿಪೇರಿ ಮಾಡುವ ಹುಡುಗನ ಪಾತ್ರದಲ್ಲಿ ವಿಜಯ್ ಅದ್ಭುತವಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ, ಇಂಥದ್ದೇ ವಿಭಿನ್ನ ಪಾತ್ರಗಳಲ್ಲಿ ನಟಿಸುವಂತೆ ಹೇಳಿದ್ದರು’ ಎನ್ನುತ್ತದೆ ಚಿತ್ರತಂಡ.
“ಪುಕ್ಸಟ್ಟೆ ಲೈಫು’ ಚಿತ್ರದಲ್ಲಿ ಸಂಚಾರಿ ವಿಜಯ್ ಅವರಿಗೆ ಮಾತಂಗಿ ಪ್ರಸನ್ನ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ಅಚ್ಯುತ ಕುಮಾರ್ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ತನ್ನ ಟೈಟಲ್ ಮತ್ತು ಸಬ್ಜೆಕ್ಟ್ ಮೂಲಕ ಸಿನಿಮಂದಿಯ ಗಮನ ಸೆಳೆದಿರುವ “ಪುಕ್ಸಟ್ಟೆ ಲೈಫು’ ನೋಡುಗರಿಗೆ ಎಷ್ಟರ ಇಷ್ಟವಾಗಲಿದೆ ಅನ್ನೋದು ಮುಂದಿನವಾರ ಗೊತ್ತಾಗಲಿದೆ.