Advertisement
ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ| ಶ್ರೀ ಹರೀಶ್ ಭಟ್ ಮತ್ತು ಸಂಗಡಿಗರ ನೇತೃತ್ವದಲ್ಲಿ ದೇವಸ್ಥಾನದ ಆರಾಧ್ಯ ದೇವರಾದ ಶ್ರೀ ಅಯ್ಯಪ್ಪ ಸ್ವಾಮಿಗೆ ಹಾಗೂ ಪರಿವಾರ ದೇವರಿಗೆ ಹೋಮ, ವಿಶೇಷ ಪೂಜೆ ಮತ್ತು ಪಡಿಪೂಜೆ ಮಹಾಪೂಜೆ, ಪಲ್ಲಕಿ ಉತ್ಸವ, ಬಲಿ ಉತ್ಸವ ಮೊದಲಾದ ಧಾರ್ಮಿಕ ಕಾರ್ಯ ಕ್ರಮಗಳು ಜರಗಿತು. ಡಿ. 15ರಂದು ಸಂಜೆ ಸುದರ್ಶನ ಹೋಮ ಮತ್ತು ವಾಸ್ತು ಪೂಜೆ ಜರಗಿತು.
Related Articles
Advertisement
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 2ರಿಂದ ಮಕ್ಕಳಿಂದ ನೃತ್ಯ ವೈವಿಧ್ಯ ಮತ್ತು ವಿವಿಧ ವಿನೋದಾವಳಿಗಳು, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಇವರಿಂದ ಮಂಡಲಿಯ ಕಲಾವಿದರು ಮತ್ತು ಅತಿಥಿ ಕಲಾವಿದರ ಕೂಡು ವಿಕೆಯಿಂದ ಪಾಪಣ್ಣ ವಿಜಯ ಗುಣಸುಂದರಿ ಯಕ್ಷಗಾನ ಪ್ರದರ್ಶನಗೊಂಡಿತು.ದೇವಸ್ಥಾನದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಸುಭಾಷ್ ಎ. ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಸಿ. ಶೆಟ್ಟಿ, ಗೌರವ ಕಾರ್ಯದರ್ಶಿ ರಘುರಾಮ್ ಕೆ. ರೈ, ಗೌರವ ಕೋಶಾಧಿಕಾರಿ ಜಗದೀಶ್ ಬಿ. ಶೆಟ್ಟಿ, ಜನಸಂಪರ್ಕಾಧಿಕಾರಿ ಪ್ರಶಾಂತ್ ಆರ್. ಆಳ್ವ, ಜೊತೆ ಕಾರ್ಯದರ್ಶಿ ಸಚ್ಚಿದಾನಂದ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಬಾಲಕೃಷ್ಣ ಎಸ್. ಗೌಡ, ಕಾರ್ಯಕ್ರಮ ವ್ಯವಸ್ಥಾಪಕರಾದ ಭಾಸ್ಕರ ವಿ. ಶೆಟ್ಟಿ, ಪೂಜಾ ಸಮಿತಿಯ ವ್ಯವಸ್ಥಾಪಕರಾದ ಭಾಸ್ಕರ ಎಂ. ಕೊಟ್ಟಾರಿ, ವ್ಯವಸ್ಥಾಪಕರಾದ ಜಯ ಎಸ್. ಪೂಜಾರಿ ಮತ್ತು ಪ್ರಧಾನ ಸಲಹೆಗಾರರಾದ ಶೇಖರ್ ಟಿ. ಪೂಜಾರಿ ಅವರ ಮುಂದಾಳತ್ವದಲ್ಲಿ, ಶ್ರೀ ಅಯ್ಯಪ್ಪ ಸೇವಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಎನ್. ಶೆಟ್ಟಿ ಮತ್ತು ಪದಾಧಿಕಾರಿಗಳು, ಶ್ರೀ ಅಯ್ಯಪ್ಪ ಸೇವಾ ಮಹಿಳಾ ಮಂಡಳಿಯ ಅಧ್ಯಕ್ಷೆ ವಿನೋದಾ ಎಸ್. ಶೆಟ್ಟಿ ಮತ್ತು ಪದಾಧಿಕಾರಿಗಳು, ಭಕ್ತರ ಸಹಕಾರದೊಂದಿಗೆ ಕಾರ್ಯಕ್ರಮವು ನೆರವೇರಿತು. ನೂರಾರು ಸಂಖ್ಯೆಯ ಭಕ್ತರು ಸ್ವಯಂಸೇವಕರಾಗಿ ವಾರ್ಷಿಕೋತ್ಸವದಲ್ಲಿ ಸಹಕರಿಸಿದರು. ಚಿತ್ರ-ವರದಿ :ಹರೀಶ್ ಮೂಡಬಿದ್ರಿ ಪುಣೆ