Advertisement

Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್‌ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ

05:40 PM Dec 27, 2024 | Team Udayavani |

ಹುಬ್ಬಳ್ಳಿ: ಇಲ್ಲಿನ ಸಾಯಿನಗರ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನ ಬಳಿ ಕಟ್ಟಡದಲ್ಲಿ ಸಿಲಿಂಡರ್ ಸೋರಿಕೆಯಾಗಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿದೆ.

Advertisement

ಇಲ್ಲಿನ ವಿದ್ಯಾನಗರ ಬಿವಿಬಿ ಕಾಲೇಜ್‌ನಲ್ಲಿ ವಾಚ್‌ಮನ್ ಆಗಿದ್ದ ಸಾಯಿನಗರ ಅಚ್ಚವ್ವನ ಕಾಲೋನಿಯ ಲಿಂಗರಾಜ ಸಿದ್ದಪ್ಪ ಬಿರನೂರ (19) ಶುಕ್ರವಾರ ಸಂಜೆ 4:00 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾನೆ.

ರವಿವಾರ ರಾತ್ರಿ ಗ್ಯಾಸ್‌ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿದ ಪರಿಣಾಮ ಒಂಭತ್ತು ಮಾಲಾಧಾರಿಗಳು ಸುಟ್ಟು ಗಾಯಗೊಂಡಿದ್ದರು. ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರಲ್ಲಿ ಗುರುವಾರ ನಿಜಲಿಂಗಪ್ಪ ಬೇಪುರಿ (58 ವರ್ಷ), ಸಂಜಯ ಸವದತ್ತಿ (18) ಹಾಗೂ ಶುಕ್ರವಾರ ಬೆಳಗ್ಗೆ ರಾಜು ಮುಗೇರಿ (16) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಈಗ ಲಿಂಗರಾಜ ಬಿರನೂರ ಅಸುನೀಗಿದ್ದಾರೆ.‌ ಇವರಿಗೆ ಶೇ.‌ 85ರಷ್ಟು ಸುಟ್ಟು ಗಾಯಗಳಾಗಿದ್ದವು.

ಇದುವರೆಗೆ ಈ ಅವಘಡದಲ್ಲಿ ಸುಟ್ಟು ತೀವ್ರ ಗಾಯಗೊಂಡಿದ್ದ 9 ಮಾಲಾಧಾರಿಗಳಲ್ಲಿ ನಾಲ್ವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.‌ ಇನ್ನುಳಿದ ಐವರಲ್ಲಿ ಬಾಲಕ ಹೊರತುಪಡಿಸಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next