Advertisement
ರಾಜ್ಯದ ವಿವಿಧೆಡೆ ಖಾಲಿಯಿರುವ 1,130 ಹುದ್ದೆಗಳ ಭರ್ತಿಗೆ 2015ರಲ್ಲಿ ಅಧಿಸೂಚನೆ ಹೊರಡಿಸಿದ್ದ ಪ್ರಾ ಧಿಕಾರ,4 ವರ್ಷಗಳಿಂದ ಹಲವು ಬಾರಿ ಪ್ರಕ್ರಿಯೆ ಪ್ರಾರಂಭಿಸಿ, ನಿಲ್ಲಿಸುವ ಮೂಲಕ ಚಲ್ಲಾಟವಾಡಿತ್ತು. ಕೊನೆಗೆ 2018ರ ನ.29ರಿಂದ ಡಿ.8ರವರೆಗೆ ಪರೀಕ್ಷೆಗಳನ್ನು ನಡೆಸಿತ್ತು.
Related Articles
Advertisement
ಅಪ್‌ಲೋಡ್‌ನಲ್ಲಿ ಯಡವಟ್ಟು: ಈಗ ಪರೀಕ್ಷೆಗಳನ್ನು ಎ, ಬಿ, ಸಿ, ಡಿ ಮಾದರಿಯ ಪ್ರಶ್ನೆಪತ್ರಿಕೆಗಳಲ್ಲಿ ನೀಡು ವುದರಿಂದ ಕೀ ಉತ್ತರಗಳು ಕೂಡ ಅದೇ ಮಾದರಿ ಯಲ್ಲಿರುತ್ತವೆ. ಆನ್‌ಲೈನ್‌ನಲ್ಲಿ ಒಂದು ವಿಷಯಕ್ಕೆ ಮತ್ತೂಂದು ವಿಷಯದ ಉತ್ತರ ಅಳವಡಿಸಿದರೂ ಈ ಸಮಸ್ಯೆ ಎದುರಾಗಬಹುದು. ಆದರೆ, ಹಾಗೆ ಮಾಡುವುದರಿಂದ ಅಭ್ಯರ್ಥಿಗಳ ಜಂಘಾಬಲವೇ ಉಡುಗಿ ಹೋಗಲಿದೆ ಎಂಬುದನ್ನು ಪ್ರಾಧಿಕಾರ ತಿಳಿಯಬೇಕು. ಸತತ ಪ್ರಯತ್ನ ಮಾಡಿ ಹೇಗಾದರೂ ಕೆಲಸ ಪಡೆಯಬೇಕೆಂಬ ಮಹದಾಸೆ ಹೊಂದಿರುವವರಿಗೆ ಇದರಿಂದ ತುಂಬಾ ನಿರಾಸೆಯಾಗುತ್ತದೆ. ಇನ್ನಾದರೂ ಸೂಕ್ತ ಉತ್ತರಗಳನ್ನು ಪ್ರಕಟಿಸುವ ಮೂಲಕ ಆಗಿರುವ ಗೊಂದಲಗಳನ್ನು ನಿವಾರಿಸಲಿ ಎಂಬುದು ಉದ್ಯೋಗಾ ಕಾಂಕ್ಷಿಗಳ ಹಕ್ಕೊತ್ತಾಯ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಮ್ಮ ಜತೆ ಚೆಲ್ಲಾಟ ಆಡುತ್ತಿದೆ. ನಾಲ್ಕು ವರ್ಷಗಳಿಂದ ಸತಾಯಿಸಿ ಈಗ ಪರೀಕ್ಷೆ ನಡೆಸಿದೆ. ಈಗ ನೀಡಿರುವ ಕೀ ಉತ್ತರಗಳು ತಾಳೆ ಆಗುತ್ತಿಲ್ಲ. ಸಾಕಷ್ಟು ಉತ್ತರಗಳು ಸರಿ ಹೊಂದುತ್ತಿಲ್ಲ. ಇದರಿಂದ ಪರೀಕ್ಷಾರ್ಥಿಗಳಿಗೆ ನಿರಾಸೆಯಾಗಲಿದೆ. ಪ್ರಾಧಿಕಾರ ಕಾಟಾಚಾರಕ್ಕೆ ಏಕೆ ಪರೀಕ್ಷೆ ನಡೆಸಬೇಕು. ಕೂಡಲೇ ಸರಿ ಉತ್ತರಗಳನ್ನು ಪ್ರಕಟಿಸಲಿ.● ನೊಂದ ವಿದ್ಯಾರ್ಥಿಗಳು ಆಕ್ಷೇಪಣೆ ಸುಲಭವಲ್ಲ
ಪ್ರತಿ ಅಂಕವೂ ಕೆಲಸ ಗಿಟ್ಟಿಸಿಕೊಳ್ಳಲು ಬಹಳ ಮುಖ್ಯ. ಹೀಗಾಗಿ ಒಂದೆರಡು ಪ್ರಶ್ನೆಗಳು ತಪ್ಪಾದಲ್ಲಿ ಆಕ್ಷೇಪಣೆ ಸಲ್ಲಿಸುತ್ತಾರೆ. ಅಲ್ಲದೇ, ಆಕ್ಷೇಪಣೆ ಸಲ್ಲಿಸಬೇಕಾದರೆ ಆ ಉತ್ತರದ ನಿಖರತೆ ಪ್ರಸ್ತುತಪಡಿಸಬೇಕು. ಸರ್ಕಾರದ ಮಾನ್ಯತೆ ಹೊಂದಿದ ಕಡತಗಳಲ್ಲಿ ಅದರ ಉಲ್ಲೇಖದ
ವಿವರಣೆ ನೀಡಿದಾಗ ಆ ಆಕ್ಷೇಪಣೆ ಅಂಗೀಕೃತವಾಗುತ್ತದೆ. ಆದರೆ, ಈಗಾಗಿರುವ ಅಷ್ಟು ತಪ್ಪುಗಳಿಗೆ ಉತ್ತರಗಳನ್ನು ದಾಖಲೆ ಸಮೇತ ಹುಡುಕಿ ಆಕ್ಷೇಪಣೆ ಸಲ್ಲಿಸುವುದು ಕಷ್ಟದ ಕೆಲಸ ಎನ್ನುವುದು ಆಕಾಂಕ್ಷಿಗಳ ಅಳಲು ಇದೆಲ್ಲ ವದಂತಿ
ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇ ಶಕರು, ಉತ್ತರಗಳನ್ನು ಪರಿಶೀಲಿಸುವಾಗ ತಮ್ಮ ಪ್ರಶ್ನೆ ಪತ್ರಿಕೆ ವರ್ಷನ್ ಕೋಡ್ ಅನುಸಾರ ನೋಡಬೇಕು. ಕೆಲವರು ಉತ್ತರಗಳು ತಪ್ಪಿವೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆಕ್ಷೇಪಣೆ ಇದ್ದಲ್ಲಿ ಆನ್‌ಲೈನ್‌ನಲ್ಲಿ ನಿಗದಿತ ದಿನಾಂಕದೊಳಗೆ ಸಲ್ಲಿಸುವಂತೆ ತಿಳಿಸಿದ್ದಾರೆ. ಸಿದ್ಧಯ್ಯಸ್ವಾಮಿ ಕುಕನೂರು