ಹೊಸದಿಲ್ಲಿ: ದೆಹಲಿ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ ಮತ್ತು ಬಿಜೆಪಿ ನಡುವೆ ಸಮರ ತಾರಕಕ್ಕೇರಿದೆ.ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಬುಧವಾರ(ಜ1)ಪಟ್ಟಿ ಬಿಡುಗಡೆ ಮಾಡಿದೆ.
ಹತ್ತು ಬದ್ಧತೆಗಳನ್ನು ಬಿಜೆಪಿ ಎತ್ತಿ ತೋರಿಸಿ, ಪಕ್ಷವು ಅಧಿಕಾರದಲ್ಲಿ ದಶಕ ಕಳೆದರೂ ಯಾವುದನ್ನೂ ಈಡೇರಿಸಿಲ್ಲ ಎಂದು ಆರೋಪಿಸಿದೆ.
ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ” ವಿದ್ಯುತ್ ದರಗಳನ್ನು ಇಳಿಸುವುದು, ಶುದ್ಧ ಕುಡಿಯುವ ನೀರು ಒದಗಿಸುವುದು, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವುದು, ಆರೋಗ್ಯ ಸೇವೆಯನ್ನು ಹೆಚ್ಚಿಸುವುದು, ಸ್ವಚ್ಛ ಪರಿಸರವನ್ನು ಖಾತ್ರಿಪಡಿಸುವುದು, ಹೂಳನ್ನು ತೆಗೆದುಹಾಕುವುದು, ಮಹಿಳಾ ಸುರಕ್ಷತೆಗೆ ಆದ್ಯತೆ ನೀಡುವುದು, ಕೊಳೆಗೇರಿ ನಿವಾಸಿಗಳಿಗೆ ವಸತಿ ಒದಗಿಸುವುದು ಮತ್ತು ಯಮುನಾ ನದಿಯನ್ನು ಸ್ವಚ್ಛಗೊಳಿಸುಸುವುದು ಸೇರಿ ಅನೇಕ ಭರವಸೆಗಳನ್ನು ಈಡೇರಿಸಿಲ್ಲ” ಎಂದು ಆರೋಪ ಮಾಡಿದ್ದಾರೆ.
ಅಸುರಕ್ಷಿತ ವಿದ್ಯುತ್ ತಂತಿಗಳಿಂದ ಪರಿಹಾರ ಘೋಷಿಸಿದ್ದರು, ಅವರ ಅಧಿಕಾರಾವಧಿಯ 10 ವರ್ಷಗಳ ನಂತರ, 2024, ಜುಲೈ 23 ರಂದು ವೈರ್ಗಳಿಂದ 26 ವರ್ಷದ ಯುವಕ ಸಾವನ್ನಪ್ಪಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಆಮ್ ಆದ್ಮಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣ ಉಲ್ಲೇಖಿಸಿ “ಕೇಜ್ರಿವಾಲ್ ನಗರದಲ್ಲಿ ಮಹಿಳೆಯರ ಸುರಕ್ಷತೆಯ ಭರವಸೆ ನೀಡಿದ್ದರು ಮತ್ತು ಮುಖ್ಯಮಂತ್ರಿ ನಿವಾಸದೊಳಗೇ ಸಂಸದೆಯೊಬ್ಬರ ಮೇಲೆ ಹಲ್ಲೆ ನಡೆಸಲಾಯಿತು” ಎಂದರು.
ಭ್ರಷ್ಟಾಚಾರ ವಿರೋಧಿ ಪಕ್ಷವಾಗಿ ಹೊರಹೊಮ್ಮಿದ್ದ ಆಮ್ ಆದ್ಮಿ ಪಕ್ಷ ಈಗ ಭ್ರಷ್ಟಾಚಾರದಲ್ಲಿ ತೊಡಗಿದೆ. ಪಕ್ಷದ ಪ್ರತಿಯೊಬ್ಬ ಹಿರಿಯ ನಾಯಕನನ್ನು ಭ್ರಷ್ಟಾಚಾರಕ್ಕಾಗಿ ಜೈಲಿಗೆ ಹಾಕಲಾಗಿದೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಂಸತ್ತಿನ ಪಕ್ಷದ ನಾಯಕ. ಮೂವರೂ ಜೈಲಿಗೆ ಹೋಗಿದ್ದಾರೆ. ನೀವು ಈ ರೀತಿಯ ಭ್ರಷ್ಟಾಚಾರದಲ್ಲಿ ವೈವಿಧ್ಯಮಯತೆಯನ್ನು ಹಿಂದೆ ನೋಡಿರಲಿಕ್ಕಿಲ್ಲ” ಎಂದರು.