ಬರ್ಮಿಂಗ್‌ಹ್ಯಾಮ್,: ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಲಭ್ಯರಿರುವುದಿಲ್ಲ.
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾಗೂ ಗಾಯದ ಭೀತಿಯಿಂದಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಟಾಮ್ ಲ್ಯಾಥಂ ಕಿವೀಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಕಳೆದ ಕೆಲವು ಸಮಯದಿಂದ ವಿಲಿಯಮ್ಸನ್ ಎಡಗೈ ಮಣಿಗಂಟಿನ ನೋವಿನಿಂದಾಗಿ ಸಮಸ್ಯೆಗೆ ಸಿಲುಕಿದ್ದರು. ಇದು ಉಲ್ಬಣಿಸುವ ಅಪಾಯವಿರುವುದರಿಂದ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ ಎಂದು ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ. ವಿಲಿಯಮ್ಸನ್ ಸ್ಥಾನವನ್ನು ವಿಲ್ ಯಂಗ್ ತುಂಬಲಿದ್ದಾರೆ.
ಇದನ್ನೂ ಓದಿ:ತೆರಿಗೆ ಪಾವತಿಸದ ಸಿರಿವಂತರು; ಪಟ್ಟಿಯಲ್ಲಿದ್ದಾರೆ ಬೆಜೋಸ್, ಮಸ್ಕ್; ದುಡ್ಡಿಲ್ಲ ಎಂದ ಕಂಗನಾ
ಲಾರ್ಡ್ಸ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾನದಲ್ಲಿ ಅಂತ್ಯವಾಗಿತ್ತು. ನಾಯಕ ವಿಲಿಯಮ್ಸನ್ ಎರಡೂ ಇನ್ನಿಂಗ್ಸ್ ಗಳಲ್ಲಿ ವಿಫಲರಾಗಿದ್ದರು. ದ್ವಿತೀಯ ಟೆಸ್ಟ್ ಗುರುವಾರ ಎಜ್‌ಬಾಸ್ಟನ್ ಅಂಗಳದಲ್ಲಿ ಆರಂಭವಾಗಲಿದೆ.
ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯ ಜೂ.18ರಂದು ಆರಂಭವಾಗಲಿದೆ. ಸೌಥಂಪ್ಟನ್ ನಲ್ಲಿ ನಡೆಯುವ ಈ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿದೆ.