ಮುಂಬೈ: ಟೀಂ ಇಂಡಿಯಾ ಸ್ಪಿನ್ನರ್ ಯುಜುವೇಂದ್ರ ಚಾಹಲ್ (Yuzvendra Chahal) ಅವರು ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಚಾಹಲ್ ಮತ್ತು ಪತ್ನಿ ಧನಶ್ರೀ ವರ್ಮಾ (Dhanashree Verma) ಅವರು ಈಗ ದೂರವಾಗಿದ್ದಾರೆ ಎಂಬ ಸುದ್ದಿ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಚಾಹಲ್ ಅಥವಾ ಧನಶ್ರೀ ತಮ್ಮ ಕಡೆಯಿಂದ ಯಾವುದೇ ಸ್ಪಷ್ಟನೆ ನೀಡಿಲ್ಲ. ಅಭಿಮಾನಿಗಳು ತಮ್ಮ ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತಿದ್ದಾರೆ.
ಇದರ ನಡುವೆ ಯುಜಿ ಚಾಹಲ್ ಅವರು ಮುಂಬೈನ ಹೋಟೆಲೊಂದರಲ್ಲಿ ಬೇರೆ ಹುಡುಗಿಯ ಜತೆ ಕಾಣಿಸಿಕೊಂಡಿದ್ದಾರೆ. ಮುಂಬೈನ ಜೆಡಬ್ಲ್ಯೂ ಮ್ಯಾರಿಯೇಟ್ ಹೋಟೆಲ್ ನಲ್ಲಿ ಅಪರಿಚಿತ ಯುವತಿಯ ಜತೆ ಚಾಹಲ್ ಕಾಣಿಸಿಕೊಂಡಿದ್ದಾರೆ. ಬ್ಯಾಗಿ ಜೀನ್ಸ್ ಮತ್ತು ಬಿಳಿ ಓವರ್ ಸೈಜ್ಡ್ ಶರ್ಟ್ ಧರಿಸಿದ್ದ ಚಾಹಲ್ ಇದೀಗ ಹೊಸ ಚರ್ಚೆಗೆ ಆಹಾರವಾಗಿದ್ದಾರೆ.
ಚಾಹಲ್ ಅವರು ಮೀಡಿಯಾ ಕ್ಯಾಮರಾಗಳನ್ನು ಕಂಡು ಮುಖ ಮುಚ್ಚಿಕೊಂಡಿದ್ದಾರೆ. ಯುವತಿ ಕೂಡಾ ಮುಖಕ್ಕೆ ಕೈ ಅಡ್ಡ ಹಿಡಿದು ಸಾಗಿದರು. ಚಾಹಲ್ ಅವರ ಈ ನಡವಳಿಕೆ ಊಹಾಪೋಹಗಳನ್ನು ತೀವ್ರಗೊಳಿಸಿದೆ. ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈಗ ನಿಗೂಢ ಯುವತಿ ಮತ್ತು ಕ್ರಿಕೆಟಿಗನೊಂದಿಗೆ ಆಕೆಯ ಸಂಪರ್ಕದ ಬಗ್ಗೆ ಪ್ರಶ್ನೆಗಳು ಆರಂಭವಾಗಿದೆ.
2020ರ ಡಿಸೆಂಬರ್ 22ರಂದು ಯೂಟ್ಯೂಬರ್, ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿದ್ದ ಧನಶ್ರೀ ವರ್ಮಾ ಅವರೊಂದಿಗೆ ಯುಜಿ ಚಾಹಲ್ ಅವರು ವಿವಾಹವಾಗಿದ್ದರು. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಪರಸ್ಪರ ಪರಿಚಯವಾಗಿದ್ದರು.
ಜನಪ್ರಿಯ ಗೇಮರ್ ಮತ್ತು ಯೂಟ್ಯೂಬರ್ ನಮನ್ ಮಾಥುರ್ ಅವರ ವಿವಾಹದಲ್ಲಿ ಪಾಲ್ಗೊಳ್ಳಲು ಚಾಹಲ್ ಮುಂಬೈನಲ್ಲಿದ್ದರು ಎಂದು ವರದಿಗಳು ಸೂಚಿಸುತ್ತವೆ.