Advertisement

Team India; ಬುಮ್ರಾ ಗಾಯದಿಂದ ಟೀಂ ಇಂಡಿಯಾಗೆ ಆತಂಕ: ಪ್ರಮುಖ ಸರಣಿಯಿಂದ ಔಟ್

04:04 PM Jan 06, 2025 | Team Udayavani |

ಮುಂಬೈ: ಬಾರ್ಡರ್‌ ಗಾವಸ್ಕರ್‌ ಟ್ರೋಫೀ ಟೆಸ್ಟ್‌ ಸರಣಿ ಮುಗಿಸಿರುವ ಟೀಂ ಇಂಡಿಯಾ ಇಂಗ್ಲೆಂಡ್‌ ವಿರುದ್ದದ ತವರಿನ ಸರಣಿಗೆ ಅಣಿಯಾಗುತ್ತಿದೆ. ಪ್ರವಾಸಿ ಇಂಗ್ಲೆಂಡ್‌ ವಿರುದ್ದ ಭಾರತ ತಂಡವು ಐದು ಪಂದ್ಯಗಳ ಏಕದಿನ ಮತ್ತು ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಅದರ ಬಳಿಕ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕೂಟ ನಡೆಯಲಿದೆ.

Advertisement

ಆಸ್ಟ್ರೇಲಿಯಾ ಟೆಸ್ಟ್‌ ಸರಣಿಯಲ್ಲಿ ಮಿಂಚಿದ ವೇಗಿ, ಸರಣಿಶ್ರೇಷ್ಠ ಪ್ರಶಸ್ತಿ ವಿಜೇತ ಜಸ್ಪ್ರೀತ್‌ ಬುಮ್ರಾ ಅವರು ಸರಣಿಯ ಕೊನೆಯಲ್ಲಿ ಗಾಯಗೊಂಡಿದ್ದರು. ಸಿಡ್ನಿ ಟೆಸ್ಟ್‌ ನ ಕೊನೆಯಲ್ಲಿ ಅವರು ಬೆನ್ನುನೋವಿನಿಂದ ಬಳಲುತ್ತಿದ್ದರು. ಹೀಗಾಗಿಯೇ ಅಂತಿಮ ಟೆಸ್ಟ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ ನಲ್ಲಿ ಅವರು ಬೌಲಿಂಗ್‌ ಮಾಡಿರಲಿಲ್ಲ. ಇದೀಗ ಜಸ್ಪ್ರೀತ್‌ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಮುಂದಾಗಿದೆ.

ಮುಂಬರುವ ಚಾಂಪಿಯನ್ಸ್‌ ಟ್ರೋಫಿ ಕೂಟವನ್ನು ಗಮನದಲ್ಲಿರಿಸಿಕೊಂಡು ಇಂಗ್ಲೆಂಡ್‌ ಸರಣಿಯ ಹೆಚ್ಚಿನ ಭಾಗಕ್ಕೆ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ಬಯಸಿದೆ ಎಂದು ವರದಿಯಾಗಿದೆ.

ಬುಮ್ರಾ ಅವರ ಬೆನ್ನು ಸೆಳೆತದ ತೀವ್ರತೆಯ ಬಗ್ಗೆ ಇನ್ನೂ ಖಚಿತಪಡಿಸಲಾಗಿಲ್ಲ. ಒಂದು ವೇಳೆ ಬುಮ್ರಾ ಅವರ ಗಾಯವು ಗ್ರೇಡ್ 1 ವರ್ಗದಲ್ಲಿದ್ದರೆ, ಕನಿಷ್ಠ ಎರಡು ಮೂರು ವಾರಗಳ ವಿಶ್ರಾಂತಿ ಬೇಕಾಗುತ್ತದೆ. ಗ್ರೇಡ್ 2 ಗಾಯದ ಸಂದರ್ಭದಲ್ಲಿ, ಚೇತರಿಕೆಯು ಆರು ವಾರಗಳವರೆಗೆ ಹೋಗಬಹುದು ಆದರೆ ಗ್ರೇಡ್ 3 ಅತ್ಯಂತ ತೀವ್ರವಾದದ್ದು, ಕನಿಷ್ಠ ಮೂರು ತಿಂಗಳ ವಿಶ್ರಾಂತಿ ಮತ್ತು ಪುನರ್ವಸತಿ ಕಾರ್ಯಕ್ರಮಗಳ ಅಗತ್ಯವಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next