Advertisement

ಶಬರಿ ಮಲೆ ಪ್ರವೇಶಿಸಿದ್ದ ಕನಕದುರ್ಗ ಮೇಲೆ ಅತ್ತೆಯ ದಾಳಿ; ಆಸ್ಪತ್ರೆಗೆ!

08:33 AM Jan 15, 2019 | |

ತಿರುವನಂತಪುರಂ: ಶಬರಿ ಮಲೆ ದೇಗುಲ ಪ್ರವೇಶಿಸಿ ಭಾರಿ ಸುದ್ದಿಯಾಗಿದ್ದ  ಇಬ್ಬರು ಮಹಿಳೆಯರ ಪೈಕಿ ಕನಕದುರ್ಗ ಎನ್ನುವಾಕೆಯ ಮೇಲೆ ಆಕೆಯ ಅತ್ತೆ  ಗಂಭೀರ ಹಲ್ಲೆ ನಡೆಸಿದ್ದು ,  ಮಲಪ್ಪುರಂ ಜಿಲ್ಲೆಯ ಪೆರಿಂಥಲ್ಮಣ್ಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Advertisement

39 ರ ಹರೆಯದ ಸರ್ಕಾರಿ ಉದ್ಯೋಗಿಯಾಗಿರುವ ಕನಕದುರ್ಗ ಅವರು ದೇಗುಲ ಪ್ರವೇಶದ ನಂತರ ಬೆದರಿಕೆಗಳು ಬಂದ ಹಿನ್ನಲೆಯಲ್ಲಿ ಮನೆಗೆ ತೆರಳದೆ ಅಜ್ಞಾತ ಸ್ಥಳದಲ್ಲಿದ್ದರು. 2 ವಾರಗಳ ಬಳಿಕ ಮಂಗಳವಾರ ಮನೆಗೆ ಮರಳಿದ ಆಕೆಗೆ ಅತ್ತೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅತ್ತೆಯೂ ಆಸ್ಪತ್ರೆಗೆ ದಾಖಲಾಗಿದ್ದು, ನನ್ನ ಮೇಲೆ ಸೊಸೆ ಕನಕದುರ್ಗ ಹಲ್ಲೆ ಮಾಡಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. 

ಕನಕದುರ್ಗಾರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ,ಯಾವುದೇ ಅಪಾಯ ಇಲ್ಲ ಎಂದು ತಿಳಿದು ಬಂದಿದೆ.

ಕನಕದುರ್ಗಾ ಮತ್ತು 40ರ ಹರೆಯದ ಬಿಂದು ಅವರು ನಸುಕಿನ ವೇಳೆ ಪೊಲೀಸ್‌ ಭದ್ರತೆಯಲ್ಲಿ ದೇಗುಲ ಪ್ರವೇಶಿದ್ದರು. ಆ ಬಳಿಕ ಕೇರಳದಲ್ಲಿ ಭಾರೀ ಪ್ರತಿಭಟನೆಗಳು ನಡೆದು ಹಿಂಸಾಚಾರಕ್ಕೆ ಕಾರಣವಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next