ಹುಣಸೂರು: ಹುಣಸೂರಿನ ಹಿರಿಯ ಪತ್ರಕರ್ತ ಹನಗೋಡು ನಟರಾಜ್ ಅವರ ಸಹೋದರ ಮುರಳಿ (50) ರಸ್ತೆ ಅಪಘಾತಕ್ಕೀಡಾಗಿ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ ಇಬ್ಬರು ಪುತ್ರರಿದ್ದಾರೆ.
ಘಟನೆಯ ವಿವರ:
ನ.27ರ ಬುಧವಾರ ರಾತ್ರಿ 8.30ರ ವೇಳೆಗೆ ಹನಗೋಡು ಪಕ್ಕದ ಗ್ರಾಮದ ಕಿರಂಗೂರು ಗ್ರಾಮಕ್ಜೆ ಸೇರಿದ ಎರಡು ಟ್ಯಾಕ್ಟರ್ ಗಳು ಹನಗೋಡು ಹೊರ ವಲಯದಲ್ಲಿರುವ ಶುಂಠಿ ತೊಳೆಯುವ ಯಂತ್ರಕ್ಕೆ ಶುಂಠಿ ಇಳಿಸಿ ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಎರಡು ಟ್ಯಾಕ್ಟರ್ ಗಳ ಚಾಲಕರು ಪೈಪೋಟಿಗೆ ಬಿದ್ದು ಅತೀ ವೇಗವಾಗಿ ಚಾಲನೆ ಮಾಡುತ್ತಿದ್ದ ವೇಳೆ ಟ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಹನಗೋಡು- ಹುಣಸೂರು ಮುಖ್ಯ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ನಿಂತಿದ್ದ ಮುರುಳಿ ಎಂಬವರ ಮೇಲೆ ಹತ್ತಿದೆ.
ಟ್ಯಾಕ್ಟರ್ ಹತ್ತಿದ್ದ ಪರಿಣಾಮ ಮುರಳಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.