Advertisement
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೈಕಮಾಂಡ್ಗೆ ಸರಿಯಾದ ಮಾಹಿತಿ ನೀಡುವ ಉಸ್ತುವಾರಿಗಳನ್ನು ಕಳುಹಿಸಬೇಕು. ವಿಜಯೇಂದ್ರಗೆ ಸ್ವಾಭಿಮಾನ ಇದ್ದರೆ ರಾಜೀನಾಮೆ ನೀಡಲಿ. ಕೇವಲ ವಿಜಯೇಂದ್ರ- ಯಡಿಯೂರಪ್ಪರಿಗೆ ಅಪಾಯಿಂಟ್ ಮೆಂಟ್ ಕೊಟ್ಟರೇ ಹೀಗೆ ಆಗೋದು. ಹೈಕಮಾಂಡ್ ಬಳಿ ವಿಜಯೇಂದ್ರ ವಿರುದ್ಧ ನಿಯೋಗ ತೆರಳಿ ಅಪ್ಪ-ಮಕ್ಕಳ ಬಗ್ಗೆ ಹೇಳುತ್ತೇವೆ ಎಂದರು.
ಭರತ್ ಬೊಮ್ಮಾಯಿ ಸೋಲಿನ ವಿಚಾರ ನಿಜಕ್ಕೂ ಆಘಾತವಾಗಿದೆ. ಜನರ ತೀರ್ಪು ಬಿಜೆಪಿ ನಾಯಕತ್ವ ಬದಲಾವಣೆ ಆಗಬೇಕು ಎನ್ನುವುದಾಗಿದೆ. ರಾಜ್ಯ ಬಿಜೆಪಿಗೆ ಹೊಸ ನಾಯಕತ್ವ ಬೇಕಿದೆ. ಕಾಂಗ್ರೆಸ್ ಪಕ್ಷಕ್ಕೆ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಪಾಠ ಕಲಿಸುತ್ತಾರೆ. ನಿಖಿಲ್ ಕುಮಾರಸ್ವಾಮಿ ಸೋಲು ದುರ್ದೈವ. ಯೋಗೇಶ್ವರ ಅವರಿಗೆ ಟಿಕೆಟ್ ಕೊಡುವಂತೆ ನಾನು ಹೇಳಿದ್ದೆ. ಕೊನೆಯವರೆಗೂ ಯೋಗೇಶ್ವರ ಬಿಜೆಪಿ ಪರ ಒಲವು ತೋರಿದ್ದರು. ಜನರು ಯೋಗೇಶ್ವರ ಕೆಲಸ ಮಾಡಿದ್ದು ನೋಡಿ ಗೆಲ್ಲಿಸಿದ್ದಾರೆ. ಕುಮಾರಸ್ವಾಮಿಯವರು ಮುಂದೆ ಯೋಚನೆ ಮಾಡಿ ಪಕ್ಷ ಸಂಘಟಿಸಬೇಕಿದೆ ಎಂದು ಹೇಳಿದರು. ವಕ್ಫ್ ಬಗ್ಗೆ ಜಾಗೃತಿ:
ವಕ್ಫ್ ಬಗ್ಗೆ ಪ್ರತಿಯೊಂದು ಜಿಲ್ಲೆಯಲ್ಲಿ ಜಾಗೃತಿ ಮಾಡುತ್ತೇವೆ. ಕಾಂಗ್ರೆಸ್ ಗೆದ್ದರೆ ಮುಂದೆ ರೈತರ ಜಮೀನು ಕೂಡ ಹೋಗುತ್ತವೆ ಎಂದು ಯತ್ನಾಳ ಕಿಡಿಕಾರಿದರು.