Advertisement

‘ಮಕ್ಕಳ ಸಮಗ್ರ ಅಭಿವೃದ್ಧಿಗೆ ಸರ್ವರ ಸಹಕಾರ ಅತ್ಯಗತ್ಯ’

06:56 AM Jan 19, 2019 | Team Udayavani |

ಕೇಪು: ದ.ಕ. ಜಿ.ಪಂ., ಮಾಧ್ಯ ಮಿಕ ಶಿಕ್ಷಣ ಅಭಿಯಾನ, ಬಂಟ್ವಾಳ ತಾ| ಶಿಕ್ಷಣಾಧಿಕಾರಿಯವರ ಕಚೇರಿ ಆಶ್ರಯ ದಲ್ಲಿ ಕೇಪು ಗ್ರಾಮದ ಕಲ್ಲಂಗಳ ಸರಕಾರಿ ಪ್ರೌಢಶಾಲೆಯಲ್ಲಿ ಸರಕಾರದಿಂದ ಮಂಜೂ ರಾದ 13 ಲಕ್ಷ ರೂ. ಅನುದಾನದಲ್ಲಿ ನಿರ್ಮಿ ಸಿದ ಎರಡು ನೂತನ ಕೊಠಡಿಗಳ ಉದ್ಘಾಟನ ಸಮಾರಂಭ ನಡೆಯಿತು.

Advertisement

ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸರಕಾರದೊಂದಿಗೆ ಜನ ಪ್ರತಿನಿಧಿಗಳು, ಹೆತ್ತವರು, ಶಿಕ್ಷಕರೆಲ್ಲರ ಸಹಕಾರ ಅತ್ಯಗತ್ಯ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅನೇಕ ಯೋಜನೆಗಳನ್ನು ಸರಕಾರ ಜಾರಿಗೆ ತಂದಿದೆ. ಇದು ಯಶಸ್ವಿ ಯಾಗಬೇಕಾದರೆ ಹೆತ್ತವರ, ಶಿಕ್ಷಕರ ಹಾಗೂ ಊರವರ ಪ್ರಯತ್ನಗಳು ಬೇಕು. ಮಕ್ಕಳಲ್ಲಿ ಒಳ್ಳೆಯ ಸಂಸ್ಕೃತಿಯನ್ನು ಬೆಳೆಸಬೇಕು ಮತ್ತು ವಿದ್ಯಾಭ್ಯಾಸ ಕುಂಠಿತ ವಾಗದಂತೆ ನಾವು ನೋಡಬೇಕು ಎಂದು ಹೇಳಿದರು. ಇದೇ ಸಂದರ್ಭ ಅವರು ಶಾಲಾ ಸಂಚಿಕೆ ‘ಮಾನಸ’ವನ್ನು ಬಿಡುಗಡೆಗೊಳಿಸಿದರು.

ಕೇಪು ಗ್ರಾ.ಪಂ. ಅಧ್ಯಕ್ಷ ತಾರಾನಾಥ ಆಳ್ವ ಕುಕ್ಕೆಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಜಯಶ್ರೀ ಕೋಡಂದೂರು ಕೊಠಡಿ ಉದ್ಘಾಟಿಸಿ, ಶುಭ ಹಾರೈಸಿದರು. ಬಂಟ್ವಾಳ ತಾ.ಪಂ. ಸಾಮಾಜಿಕ ನ್ಯಾಯ ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ, ತಾ.ಪಂ. ಸದಸ್ಯೆ ಕವಿತಾ ಸುಬ್ಬ ನಾಯ್ಕ, ಕೇಪು ಗ್ರಾ.ಪಂ. ಸದಸ್ಯರಾದ ನಿರಂಜನ, ರತ್ನಾ ಮತ್ತು ದಿವ್ಯಾ ಉಪಸ್ಥಿತರಿದ್ದರು.

ಶಾಲಾ ಪ್ರತಿಭಾನ್ವಿತ ಮಕ್ಕಳಿಗೆ ಬಹುಮಾನ ಗಳನ್ನು ವಿತರಿಸಲಾಯಿತು. ಗೌರವ ಶಿಕ್ಷಕರಿಗೆ ಗುರುವಂದನೆ, ಶಾಲಾಭಿವೃದ್ಧಿಯಲ್ಲಿ ಸಹಕರಿಸಿದವ ರಿಗೆ ಗೌರವ ನಮನ ಸಲ್ಲಿಸಲಾಯಿತು. ಮುಖ್ಯ ಶಿಕ್ಷಕಿ ಮಾಲತಿ ಕೆ. ವರದಿ ವಾಚಿಸಿದರು. ಎಸ್‌.ಡಿ.ಎಂ.ಸಿ. ಕಾರ್ಯಾಧ್ಯಕ್ಷ ಬಾಲಚಂದ್ರ ನಾಯಕ್‌ ಸ್ವಾಗತಿಸಿ, ಶಿಕ್ಷಕ ಲಕ್ಷ್ಮಣ ಟಿ. ನಾಯ್ಕ ವಂದಿಸಿದರು. ಶಿಕ್ಷಕ ಕೆ.ಜಿ. ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ಸಹಶಿಕ್ಷಕರಾದ ಗೌರಿದೇವಿ, ಪುಷ್ಪಾ ಪಿ., ರಮೇಶ್‌ ಡಿ., ಗೋಪಾಲಕೃಷ್ಣ ಭಟ್ ಎಂ., ಪೂರ್ಣಿಮಾ, ದೀಪ್ತಿ, ಗೀತಾ ಸಹಕರಿಸಿದರು. ಅನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ರಂಗ ಕಲಾವಿದ ಮತ್ತು ನಿರ್ದೇಶಕ ಉದಯ ಸಾರಂಗ ಅವರ ಮಾರ್ಗದರ್ಶನದಲ್ಲಿ ‘ನಾವು ಅವರಲ್ಲ’, ಮೂರ್ತಿ ದೇರಾಜೆ ವಿರಚಿತ ‘ಕಪ್ಪು ಕಾಗೆ’ ನಾಟಕಗಳನ್ನು ಪ್ರದರ್ಶಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next