Advertisement

ಮಣಿಪಾಲ ಎನರ್ಜಿ ಪ್ರೈ.ಲಿ. ಮತ್ತು ಲಯನ್ಸ್ ಸಹಯೋಗ: ರಜತ ಸಂಭ್ರಮ ಸಭಾಂಗಣ ಉದ್ಘಾಟನೆ

02:05 PM Nov 14, 2024 | Team Udayavani |

ಉಡುಪಿ: ಮಣಿಪಾಲದ ರಾಜೀವನಗರ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಮಣಿಪಾಲ ಎನರ್ಜಿ ಆ್ಯಂಡ್ ಇನ್‌ಫ್ರಾಟೆಕ್ ಪ್ರೈ.ಲಿ. ಮತ್ತು ಮಣಿಪಾಲ ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಿರ್ಮಾಣಗೊಂಡ ನವೀಕೃತ ರಜತ ಸಂಭ್ರಮ ಸಭಾಂಗಣದ ಉದ್ಘಾಟನೆ ಇತ್ತೀಚೆಗೆ ರಜತಸಂಭ್ರಮ ಸಭಾಂಗಣದಲ್ಲಿ ನಡೆಯಿತು.

Advertisement

ಮಣಿಪಾಲ ಎನರ್ಜಿ ಆ್ಯಂಡ್ ಇನ್‌ಫ್ರಾಟೆಕ್ ಲಿ., ಟೆಸ್ಟ್ ಪ್ರೆೆಪ್ ‌ಪ್ರಿಂಟ್‌ರ್ಸ್ ಪ್ರೈ.ಲಿ., ಟಿಎಂಜಿ ಸನ್ನಿ ಧಿ ಫೌಂಡೇಶನ್‌ನ ಸಿಎಸ್ ಆರ್ ಅನುದಾನ ಹಾಗೂ ದಿ. ಪ್ರೇಮಲತಾ ಮತ್ತು ದಿ. ನರಸಿಂಹ ನಾಯಕ್ ಕುಟುಂಬಸ್ಥರ ಸಹಕಾರದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.

ಲಯನ್ಸ್ ಜಿಲ್ಲೆೆ 317 ಸಿ ಇದರ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್ ಮಾತನಾಡಿ, ಸರಕಾರಿ ಶಾಲೆಗಳಿಗೆ ನೆರವು ನೀಡಿದರೆ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿಯೂ ಲಯನ್ಸ್ ವತಿಯಿಂದ ಇಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.‌

ಮಣಿಪಾಲ ಲಯನ್ಸ್ ಕ್ಲಬ್‌‌ ಮಾಜಿ ಅಧ್ಯಕ್ಷ ಡಾ ಎಚ್.ಗಣೇಶ್ ಪೈ ಮಾತನಾಡಿ, ಈ ಸರಕಾರಿ ಶಾಲೆಯನ್ನು ಮೇಲ್ದರ್ಜೆಗೇರಿಸಿ ಬಡ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

Advertisement

ಜಿ.ಪಂ.ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್ ಮಾತನಾಡಿ, ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾ ಸ ಮಾಡಿಕೊಂಡಿದ್ದಾಾರೆ. ಇಲ್ಲಿಗೆ ಆಗಮಿಸುವ ಶೇ.99 ಮಂದಿ ಹಿಂದುಳಿದ ಸಮಾಜದ ವಿದ್ಯಾರ್ಥಿಗಳಾಗಿದ್ದಾಾರೆ. ಈಗಾಗಲೇ ವಿದ್ಯಾರ್ಥಿಗಳಿಗೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದ್ದು, ಮುಂದಿನ ದಿನಗಳಲ್ಲಿಯೂ ಹಲವಾರು ರೀತಿಯ ನೆರವು ನೀಡಲಾಗುವುದು ಎಂದರು.

ಮಣಿಪಾಲ ಎನರ್ಜಿ ಆ್ಯಂಡ್ ಇನ್‌ಫ್ರಾಟೆಕ್ ಪ್ರೈ.ಲಿ.ಇದರ ಎಂಡಿ ಹಾಗೂ ಸಿಇಓ ಸಾಗರ್ ಮುಖೋಪಾಧ್ಯಾಯ, ಮಣಿಪಾಲ ಲಯನ್ಸ್ ಕ್ಲಬ್ ಅಧ್ಯಕ್ಷೆೆ ಡಾ ಶಕೀಲಾ, ಕಾರ್ಯದರ್ಶಿ ಟಿ.ಕೇಶವ ಪೈ, ಖಜಾಂಚಿ ಯು.ಸುಧಾಕರ ಕಿಣಿ, ಎಂಎಲ್‌ಸಿಎಫ್ ಸಹಾಯಹಸ್ತ ಇದರ ಎಂ.ರಮೇಶ್ ಕಿಣಿ ಉಪಸ್ಥಿತರಿದ್ದರು. ‌

ಇದೇ ಸಂದರ್ಭದಲ್ಲಿ ಸಾಗರ್ ಮುಖೋಪಾಧ್ಯಾ ಯ, ಡಾ ಗಣೇಶ್ ಪೈ ಹಾಗೂ ಟೆಸ್ಟ್ ಪ್ರಿಂಟ್ಸ್ ಪೈ.‌ ಲಿ.ನ ಶ್ರೀನಿವಾಸ ಅನಂತ ಅವರನ್ನು ಸನ್ಮಾ ನಿಸಲಾಯಿತು. ಶಾಲೆಯ ಬಾಲಕೃಷ್ಣ ಪಿ.ಸ್ವಾಗ ತಿಸಿದರು. ಕೃಷ್ಣ ನಾಯಕ್ ವಂದಿಸಿದರು. ಸಂಜೀವ ನಾಯಕ್ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next