Advertisement

Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ

04:04 AM Nov 17, 2024 | Team Udayavani |

ನವದೆಹಲಿ: ಗ್ರಾಮ ಪಂಚಾಯಿತಿಗಳಿಗೆ ತನ್ನದೇ ಮೂಲಗಳಿಂದ ಸೃಷ್ಟಿಯಾಗುವ ಆದಾಯದ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದೆ. ಸರ್ಕಾರ ನೀಡಿರುವ ದತ್ತಾಂಶಗಳ ಪ್ರಕಾರ ಪ್ರತಿ ಗ್ರಾಮಪಂಚಾಯಿತಿಯ ಸರಾಸರಿ ಆದಾಯ ಕೇವಲ 59 ರೂ. ಆಗಿದೆ.

Advertisement

2017ರಿಂದ 2022ರವರೆಗೆ 5 ವರ್ಷಗಳಲ್ಲಿ ಗ್ರಾಮ ಪಂಚಾಯತ್‌ಗಳು ಗಳಿಸಿರುವ ಆದಾಯವನ್ನು ಆಧರಿಸಿ ಈ ವರದಿ ತಯಾರಿಸಲಾಗಿದ್ದು, 627.56 ಕೋಟಿ ರೂ. ಆದಾಯ ಗಳಿಸಿರುವ ಕರ್ನಾಟಕ 4ನೇ ಸ್ಥಾನದಲ್ಲಿದೆ. 829.75 ಕೋಟಿ ರೂ. ಆದಾಯ ಗಳಿಸಿರುವ ಗುಜರಾತ್‌ ಮೊದಲ ಸ್ಥಾನದಲ್ಲಿದ್ದು, ಕೇರಳ (802.72 ಕೋಟಿ), ಆಂಧ್ರಪ್ರದೇಶ (791.93 ಕೋಟಿ) ನಂತರದ 2 ಸ್ಥಾನದಲ್ಲಿವೆ.

ದೇಶದಲ್ಲಿರುವ 2.25 ಲಕ್ಷ ಗ್ರಾಮ ಪಂಚಾಯತ್‌ಗಳು ಈ 5 ವರ್ಷಗಳಲ್ಲಿ ತಲಾ 2.27 ಲಕ್ಷ ರೂ. ಗಳಿಕೆ ಮಾಡಿದ್ದು, ಇವುಗಳ ಒಟ್ಟಾರೆ ಜನಸಂಖ್ಯೆ 86.95 ಕೋಟಿಯಷ್ಟಿದೆ. ಪಂಚಾಯತ್‌ಗಳು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ತೆರಿಗೆಗಳು, ಸುಂಕಗಳು, ಟೋಲ್‌ಗ‌ಳು ಮತ್ತು ಶುಲ್ಕಗಳನ್ನು ವಿಧಿಸಲು ಅಧಿಕಾರ ನೀಡಬೇಕು. ಇದು ಸ್ಥಳೀಯ ಸರ್ಕಾರವನ್ನು ಬಲಪಡಿಸಲು ನೆರವಾಗುತ್ತದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next