Advertisement

ಗೆಲುವಿನ ಮಾರ್ಗ ತೋರಿಸುವರೇ ರೂಟ್‌?

03:23 PM Jul 16, 2020 | mahesh |

ಮ್ಯಾಂಚೆಸ್ಟರ್‌: ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರಿನ ಸೌತಾಂಪ್ಟನ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡಿನ ನಿರೀಕ್ಷೆಯೆಲ್ಲ ತಲೆಕೆಳಗಾಗಿತ್ತು. 4 ವಿಕೆಟ್‌ಗಳ ಸೋಲು ಆತಿಥೇಯರನ್ನು ಸಂಕಟಕ್ಕೆ ತಳ್ಳಿದೆ. ಇದರಿಂದ ಹೊರಬರಲು ಅದು ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಮಾರ್ಗ ಹುಡುಕುತ್ತಿದೆ. ಈ ಬಹು ನಿರೀಕ್ಷೆಯ ಮುಖಾಮುಖಿ ಗುರುವಾರದಿಂದ ಇಲ್ಲಿನ ಓಲ್ಡ್‌ ಟ್ರಾಫ‌ರ್ಡ್‌ ಅಂಗಳದಲ್ಲಿ ಆರಂಭವಾಗಲಿದೆ. ಇನ್ನೊಂದೆಡೆ ವೆಸ್ಟ್‌ ಇಂಡೀಸ್‌ ತುಂಬು ಆತ್ಮವಿಶ್ವಾಸದಲ್ಲಿದೆ. ಅದೆಷ್ಟೋ ಕಾಲದ ಬಳಿಕ ಅದು ವಿದೇಶಿ ಸರಣಿಯ ಮೊದಲ ಟೆಸ್ಟ್‌ ಪಂದ್ಯವನ್ನು ಗೆದ್ದು ಮುನ್ನಡೆ ಸಾಧಿಸಿದ ಖುಷಿಯಲ್ಲಿದೆ. ಈ ಮುನ್ನಡೆಯನ್ನು ಕಾಯ್ದುಕೊಳ್ಳಲು ಕೆರಿಬಿಯನ್ನರಿಂದ ಸಾಧ್ಯವೇ ಎಂಬುದು ಕೂಡ ಈ ಪಂದ್ಯದ ಕುತೂಹಲಗಳಲ್ಲೊಂದು.

Advertisement

ಜೋ ರೂಟ್‌ ಆಗಮನ
ಸೌತಾಂಪ್ಟನ್‌ ಟೆಸ್ಟ್‌ ವೇಳೆ ಇಂಗ್ಲೆಂಡ್‌ ಸಣ್ಣದೊಂದು ಗ್ಯಾಂಬ್ಲಿಂಗ್‌ ನಡೆಸಿ ಇದಕ್ಕೆ ದೊಡ್ಡ ಬೆಲೆಯನ್ನೇ ತೆತ್ತಿತ್ತು. ನಾಯಕ ಜೋ ರೂಟ್‌ ಹೊರಗುಳಿದ ವೇಳೆ ಅನುಭವಿ ಬೌಲರ್‌ ಸ್ಟುವರ್ಟ್‌ ಬ್ರಾಡ್‌ ಅವರನ್ನು ಕೈಬಿಟ್ಟು ಎಡವಟ್ಟು ಮಾಡಿಕೊಂಡಿತ್ತು. ಈಗ ಇವರಿಬ್ಬರೂ ತಂಡಕ್ಕೆ ಮರಳಿದ್ದಾರೆ. ಹೀಗಾಗಿ ಇಂಗ್ಲೆಂಡ್‌ ಸಾಮರ್ಥ್ಯ ಸಹಜವಾಗಿಯೇ ಹೆಚ್ಚಿದೆ. ರೂಟ್‌ ತಮ್ಮ ತಂಡಕ್ಕೆ ಗೆಲುವಿನ ಮಾರ್ಗ ತೋರಿಸುವರೇ ಎಂಬುದು ಎಲ್ಲರ ನಿರೀಕ್ಷೆ.

ವೇಗಿಗಳೇ ಆಧಾರ
ಜಾಸನ್‌ ಹೋಲ್ಡರ್‌ ಬಳಗ ಗೆಲುವಿನ ಖುಷಿಯಲ್ಲಿದ್ದರೂ ಮುನ್ನಡೆ ಕಾಯ್ದುಕೊಂಡು “ವಿಸ್ಡನ್‌ ಟ್ರೋಫಿ’ಯನ್ನು ಉಳಿಸಿಕೊಳ್ಳಬೇಕಾದ ಒತ್ತಡವಿದೆ. ಮೊದಲ ಪಂದ್ಯದಲ್ಲಿ ಗೆಲುವನ್ನು ತಂದಿತ್ತ ವೇಗಿಗಳನ್ನೇ ಹೆಚ್ಚು ನಂಬಿಕೊಳ್ಳಬೇಕಿದೆ.

ಸಂಭಾವ್ಯ ತಂಡಗಳು
ಇಂಗ್ಲೆಂಡ್‌: ರೋರಿ ಬರ್ನ್ಸ್, ಡೊಮಿನಿಕ್‌ ಸಿಬ್ಲಿ, ಜೋ ರೂಟ್‌ (ನಾಯಕ), ಜಾಕ್‌ ಕ್ರಾಲಿ, ಬೆನ್‌ ಸ್ಟೋಕ್ಸ್‌, ಓಲಿ ಪೋಪ್‌, ಜಾಸ್‌ ಬಟ್ಲರ್‌ (ವಿ.ಕೀ.), ಡೊಮಿನಿಕ್‌ ಬೆಸ್‌, ಜೋಫ್ರ ಆರ್ಚರ್‌, ಸ್ಟುವರ್ಟ್‌ ಬ್ರಾಡ್‌,  ಜೇಮ್ಸ್‌ ಆ್ಯಂಡರ್ಸನ್‌.

ವೆಸ್ಟ್‌ ಇಂಡೀಸ್‌: ಜಾನ್‌ ಕ್ಯಾಂಬೆಲ್‌, ಕ್ರೆಗ್‌ ಬ್ರಾತ್‌ವೇಟ್‌, ಶೈ ಹೋಪ್‌, ಶಮರ್‌ ಬ್ರೂಕ್ಸ್‌, ಜರ್ಮೈನ್‌ ಬ್ಲ್ಯಾಕ್‌ವುಡ್‌, ರೋಸ್ಟನ್‌ ಚೇಸ್‌, ಶೇನ್‌ ಡೌರಿಚ್‌ (ವಿ.ಕೀ). ಜಾಸನ್‌ ಹೋಲ್ಡರ್‌ (ನಾಯಕ), ಅಲ್ಜಾರಿ ಜೋಸೆಫ್, ಕೆಮರ್‌ ರೋಚ್‌, ಶಾನನ್‌ ಗ್ಯಾಬ್ರಿಯಲ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next