Advertisement

ಜಮ್ಮು ಕಾಶ್ಮೀರ : ಮೂವರು ಉಗ್ರರ ಹತ್ಯೆ, ಇನ್ನೂ ಇಬ್ಬರು ಉಗ್ರರಿಗಾಗಿ ಶೋಧ

09:09 AM Mar 29, 2019 | Team Udayavani |

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಶೋಪಿಯಾನ್‌ ನಲ್ಲಿ ಇಂದು ಗುರುವಾರ ನಸುಕಿನ ವೇಳೆ ಭದ್ರತಾ ಪಡೆಗಳು ನಡೆಸಿರುವ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರ ಹತರಾಗಿದ್ದಾರೆ.

Advertisement

ಜಮ್ಮು ಕಾಶ್ಮೀರದ ಶೋಪಿಯಾನ್‌ ನ ಕೆಲ್ಲಾರ್‌ ಪ್ರದೇಶದಲ್ಲಿ ಇಂದು ಗುರುವಾರ ನಸುಕಿನ ವೇಳೆ ಸಿಆರ್‌ಪಿಎಫ್, ಸೇನೆ ಮತ್ತು ಜಮ್ಮು ಪೊಲೀಸ್‌ ದಳ ಜಂಟಿಯಾಗಿ ಎನ್‌ಕೌಂಟರ್‌ ನಡೆಸಿ, ಮೂವರು ಉಗ್ರರನ್ನು ಹೊಡೆದುರಳಿಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು.

ಇನ್ನೂ ಇಬ್ಬರು ಉಗ್ರರು ಅಡಗಿಕೊಂಡಿರುವುದನ್ನು ಶಂಕಿಸಲಾಗಿದ್ದು ಇಡಿಯ ತಾಣವನ್ನು ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ವರದಿಗಳು ತಿಳಿಸಿವೆ.

ಈ ನಡುವೆ ಶೋಪಿಯಾನ್‌ನಲ್ಲಿ ಇಂಟರ್‌ನೆಟ್‌ ಸೇವೆಯನ್ನು ತತ್ಕಾಲಕ್ಕೆ ಅಮಾನತುಗೊಳಿಸಲಾಗಿರುವುದಾಗಿ ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next