Advertisement

ಪೌರತ್ವ ಮಸೂದೆ ಪ್ರತಿಭಟಿಸಲು ಜೆಡಿಯು, ಈಶಾನ್ಯದ 11 ಪಕ್ಷಗಳ ನಿರ್ಧಾರ

09:56 AM Jan 29, 2019 | Team Udayavani |

ಶಿಲ್ಲಾಂಗ್‌ : 2016ರ ಪೌರತ್ವ ತಿದ್ದುಪಡಿ ಮಸೂದೆಯನ್ನು ಸರ್ವಾನುಮತದಿಂದ ವಿರೋಧಿಸಲು ಜೆಡಿಯು ಜತೆಗೆ ಈಶಾನ್ಯದ ಹತ್ತು ರಾಜಕೀಯ ಪಕ್ಷಗಳು ಕೈಜೋಡಿಸಲು ನಿರ್ಧರಿಸಿವೆ. 

Advertisement

ಬಿಜೆಪಿಯ ಮಿತ್ರ ಪಕ್ಷವಾಗಿರುವ ಜೆಡಿಯು ಮತ್ತು ಈಶಾನ್ಯದ ಹತ್ತು ರಾಜಕೀಯ ಪಕ್ಷಗಳು ಸರ್ವಾನುಮತದಿಂದ ಪೌರತ್ವ ಮಸೂದೆಯನ್ನು ವಿರೋಧಿಸಲು ನಿರ್ಧರಿಸಿವೆ ಎಂದು ಮೇಘಾಲಯ ಸಿಎಂ ಕೊನ್ರಾಡ್‌ ಸಂಗ್ಮಾ ಮಾಧ್ಯಮಕ್ಕೆ ತಿಳಿಸಿದ್ದಾರೆ. 

ವಿವಾದಿತ ಮಸೂದೆಯನ್ನು ರದ್ದು ಮಾಡುವಂತೆ ಕೇಂದ್ರ ಸರಕಾರವನ್ನು ಕೋರಲು 11 ಪಕ್ಷಗಳು ನಿರ್ಧರಿಸಿರುವುದಾಗಿ ಸಂಗ್ಮಾ ಹೇಳಿದರು. 

ಪ್ರಸ್ತಾವಿತ ಪೌರತ್ವ ಮಸೂದೆಯಿಂದ ಸ್ಥಳೀಯರ ಬದುಕು ಮತ್ತು ಅಸ್ಮಿತೆಗೆ ಅಪಾಯ ಒದಗಲಿರುವುದರಿಂದ ಅದನ್ನು ರದ್ದುಪಡಿಸುವಂತೆ ಮನನ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರನ್ನು ಭೇಟಿಯಾಗಲು ನಿಯೋಗವೊಂದನ್ನು ಕಳುಹಿಸಲು 11 ಪಕ್ಷಗಳು ನಿರ್ಧರಿಸಿವೆ ಎಂದು ಸಂಗ್ಮಾ ಹೇಳಿದರು. 

ಬಾಂಗ್ಲಾದೇಶ, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದಿಂದ ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗಿ  ಭಾರತಕ್ಕೆ 
ವಲಸೆ ಬಂದಿರುವ ಆರು ಮುಸ್ಲಿಮೇತರ ಅಲ್ಪಸಂಖ್ಯಾಕ ಸಮೂಹಗಳಿಗೆ ಭಾರತೀಯ ಪೌರತ್ವವನ್ನು ಪ್ರಸ್ತಾವಿತ ವಿವಾದಿತ ಮಸೂದೆಯು ನೀಡಲಿದ್ದು ಇದನ್ನು ಕಳೆದ ಜನವರಿ 8ರಂದು ಲೋಕಸಭೆಯಲ್ಲಿ ಪಾಸು ಮಾಡಲಾಗಿದೆ. 

Advertisement

ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್‌  ಮತ್ತು ತ್ರಿಪುರ ದ ರಾಜಕೀಯ ಪಕ್ಷಗಳು ಎರಡು ದಿನಗಳ ಸಮಾವೇಶದಲ್ಲಿ ಪಾಲ್ಗೊಂಡು ವಿವಾದಿತ ಪೌರತ್ವ ಮಸೂದೆಯನ್ನು ವಿರೋಧಿಸಲು ಸರ್ವಾನುಮತದಿಂದ ನಿರ್ಧರಿಸಿದವು. 

Advertisement

Udayavani is now on Telegram. Click here to join our channel and stay updated with the latest news.

Next