Advertisement

BBK11: ಫಿನಾಲೆಗೆ ಹೋಗುವ ಪರಸ್ಪರ ಕಿತ್ತಾಡಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು

11:10 PM Jan 06, 2025 | Team Udayavani |

ಬೆಂಗಳೂರು: ಬಿಗ್ ಬಾಸ್ ಮನೆಗೆ ‘ಟಿಕೆಟ್ ಟು ಫಿನಾಲೆ’ ಕಾಲಿಟ್ಟಿದೆ. ದೊಡ್ಮನೆಯಲ್ಲಿರುವ ಒಬ್ಬ ಸ್ಪರ್ಧಿಗಳಲ್ಲಿ ಒಬ್ಬರು ನೇರವಾಗಿ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಅಗಲಿದ್ದಾರೆ.

Advertisement

ಮನೆಯ ಕ್ಯಾಪ್ಟನ್ ರಜತ್ ಅವರು ನೇರವಾಗಿ ಟಿಕೆಟ್ ಫಿನಾಲೆ ಟಾಸ್ಕ್ ಆಯ್ಕೆ ಆಗಿದ್ದಾರೆ. ಉಳಿದ ಮಂದಿಗೆ ಸರಣಿ ಟಾಸ್ಕ್ ಗಳು ನಡೆಯಲಿದೆ.

ಈ ವಾರ ಬಿಗ್‌ ಬಾಸ್‌ ಮನೆಗೆ ಕ್ಯಾಪ್ಟನ್‌ ಆಗಿರುವ ರಜತ್‌ ಅವರು ಖಳನಾಯಕ ಆಗಿ ಟಾಸ್ಕ್‌ ಮಾಸ್ಟರ್‌ ಆಗಿದ್ದಾರೆ. ಅವರು ಯಾರು ಫಿನಾಲೆಗೆ ಅರ್ಹತೆ ಇಲ್ಲದವರಿಗೆ ಫಲಕವನ್ನು ಹಾಕಿದ್ದಾರೆ.

ಆ ಮೂಲಕ ‘ಟಿಕೆಟ್ ಟು ಫಿನಾಲೆ’ ಟಾಸ್ಕ್ ನಿಂದ ಅವರನ್ನು ಹೊರಗಿಡಲಿದ್ದಾರೆ.

ʼಗೌತಮಿ, ಭವ್ಯ, ಮೋಕ್ಷಿತಾ, ಹನುಮಂತು ಹಾಗೂ ಚೈತ್ರಾ ಅವರಿಗೆ ʼಟಿಕೆಟ್‌ ಟು ಹೋಮ್‌ʼ ಫಲಕವನ್ನು ಹಾಕಿದ್ದಾರೆ.

Advertisement

ಮೊದಲು ಹನುಮಂತು ಅವರನ್ನು ಆಯ್ಕೆ ಮಾಡಿ. ಅವರಿಹೆ ಮಾತಿಗಿಂತ ಹಾಡಿನಲ್ಲೇ ಹೇಳೋದು ಉತ್ತಮವೆಂದು ಹೇಳಿ ಫಲಕವನ್ನು ಹಾಕಿದ್ದಾರೆ.

ಟಾಸ್ಕ್‌ ಅಲ್ಲಿ, ಮನರಂಜನೆಯಲ್ಲೂ ಜೀರೋ. ನೀವು ಒಬ್ಬರನ್ನು ಮಾತನಾಡೋಕೆನೇ ಬಿಡಲ್ಲ. ಫೈಯರ್ ಬ್ರ್ಯಾಂಡ್ ಅಂಥ ಹೇಳ್ತೀರಾ ಆದರೆ ‌ನಿಮ್ ತಲೆ ಮೇಲೆನೇ ಫೈಯರ್ ಹಾಕಿಕೊಳ್ತೀರಾ. ಮಾತು ಕಮ್ಮಿ ಮಾಡಿ ಕೆಲಸ ಜಾಸ್ತಿ ಮಾಡಿ. ನೀವು ಮಾತನಾಡಿಕೊಂಡೇ ಮನೆಗೆ ಹೋಗಿ. ಇಲ್ಲಿ ಇರುವವರು ಆದ್ರೂ ಆಡ್ಕೊಂಡು ಗೆಲ್ಲಲಿ ಎಂದು ರಜತ್‌ ಚೈತ್ರಾಗೆ ಹೇಳಿದ್ದಾರೆ.

ಇದಕ್ಕೆ ಚೈತ್ರಾ ಅವರು ಮೊದಲೇ ದಿನ ಬಂದಿದ್ರೆ 5 ದಿನಕ್ಕೆ ಲಗೇಜ್‌ ಇಟ್ಕೊಂಡು ಹೋಗ್ತಾ ಇದ್ರು. 50 ದಿನ ಕಳೆದ ಮೇಲೆ ಬಂದಿದ್ರಿ ಅದಕ್ಕೆ ಅದೃಷ್ಟ ಮಾಡಿದ್ದೀರಿ ಎಂದು ಉತ್ತರಿಸಿದ್ದಾರೆ. ಚೈತ್ರಾ ಮಾತಿಗೆ 50 ಆದ್ಮೇಲೆ ಬಂದಿರೋದು ನಿಮ್ಮ ಅದೃಷ್ಟ ಆರಂಭದಲ್ಲೇ ಬಂದಿದ್ದರೆ ನಿಮ್ಮನ್ನು ನಾಲ್ಕೇ ವಾರದಲ್ಲಿ ಕಳಿಸುತ್ತಿದ್ದೆ.‌ಬಿಗ್ ಬಾಸ್ ಅಂದ್ರೆ ಬರೀ ಮಾತಲ್ಲ. ಮಾತಲ್ಲಿ ಬಿಗ್ ಬಾಸ್ ಗೆಲ್ಲೋಕೆ ಆಗಲ್ಲ ಎಂದು ರಜತ್‌ ಹೇಳಿದ್ದಾರೆ.

ನೀವು ಹೇಳಿದಾಗೆ ಟಾಸ್ಕ್‌ ಆಡೋರು ಮಾತ್ರ ಬರಬೇಕು ಎಂದು ಚೈತ್ರಾ ಹೇಳಿದಾಗ ನಾನ್ಯಾಗ ಈ ರೀತಿ ಹೇಳಿದೆ ಎಂದು ರಜತ್‌ ಚೈತ್ರಾಗೆ ಸುಳ್ಳಿ ಸುಳ್ಳಿ.. ನಿಜ ಮಾತನಾಡು ಸುಳ್ಳಿ ಎಂದು ರಜತ್ ಹೇಳಿದ್ದಾರೆ.

ಗೌತಮಿ ಅವರಿಗೆ ‘ಟಿಕೆಟ್ ಟು ಹೋಮ್’ ಫಲಕ ನೀಡಿ ನಿಮ್ಮಲ್ಲಿ ಮನರಂಜನೆ ಎಲ್ಲೂ ಕಾಣಿಸಿಕೊಂಡಿಲ್ಲ. ಟಾಸ್ಕ್ ಅಲ್ಲಿ 100% ಕೊಟ್ಟಿದ್ದೀರಿ. ಮಂಜು ಅವರ ಫ್ಯಾಮಿಲಿ ಅವರು ಬಂದ ಮೇಲೆ ನೀವು ಝೋನ್ ಔಟ್ ಆಗಿದ್ದೀರಿ ಎನ್ನುವ ಕಾರಣವನ್ನು ನೀಡಿ‌ ಫಲಕವನ್ನು ಹಾಕಿದ್ದಾರೆ.

ಇದಕ್ಕೆ ಗೌತಮಿ ನಾನು ಎಲ್ಲೂ ಝೋನ್ ಔಟ್ ಆಗಿಲ್ಲವೆಂದಿದ್ದಾರೆ.

ಭವ್ಯ ಒಂದು ಝೋನ್ ಅಲ್ಲಿ ಮಾತ್ರ ಸೀಮಿತ ಆಗಿದ್ದೀರಿ. ಮನರಂಜನೆ ಅಲ್ಲಿ ನೀವು ಎಲ್ಲೂ ಕಾಣಿಸಿಕೊಂಡಿಲ್ಲ. ಬೇರೆಯವರ ಜತೆ ಬೆರೆತುಕೊಂಡಿಲ್ಲ ಎನ್ನುವ ಕಾರಣವನ್ನು ‌ನೀಡಿದ್ದಾರೆ.

ಇದಕ್ಕೆ ಭವ್ಯ ಅವರು ನನ್ನಿಂದ ಕೊಡುವ ಮನರಂಜನೆಯನ್ನು ‌ನೀಡಿದ್ದೇನೆ. ಬೇರೆ ಯಾವುದಕ್ಕೂ ನಾನು ಹೋಗಲ್ಲ. ನನಗೆ ತ್ರಿವಿಕ್ರಮ್ ಜತೆ ಕಂಫರ್ಟ್ ಇರುತ್ತದೆ ಎಂದಿದ್ದಾರೆ.

ಟಾಸ್ಕ್ ಅಲ್ಲಿ ‌ನೀವು ವಾವ್ ಅಂಥ ಪ್ರದರ್ಶನ ನೀಡಿಲ್ಲ. ನೀವು ಫೋಕಸ್ ಕಳೆದುಕೊಂಂಡಿದ್ದೀರಿ ಎಂದು ಮೋಕ್ಷಿತಾ ಅವರಿಗೆ ಫಲಕವನ್ನು ಹಾಕಿದ್ದಾರೆ.

ಧನರಾಜ್ ಅವರು ಫಿಸಿಕಲ್ ಫಿಟ್ ಆಗಿದ್ದಾನೆ. ಅವರೊಬ್ಬ ಟಫ್ ಕಾಂಪಿಟೇಟರ್ ಎಂದಿದ್ದಾರೆ. ಮಂಜು ಅವರು ಮನರಂಜನೆಯಲ್ಲಿ ಮುಂದೆ ಇದ್ದಾರೆ. ತ್ರಿವಿಕ್ರಮ್ ಅವರು ಎಲ್ಲದರಲ್ಲೂ ಮುಂದೆ ಇದ್ದಾರೆ. ಟಾಸ್ಕ್ ಅಲ್ಲೂ 100 % ಕೊಡ್ತಾರೆ ಎಂದು ರಜತ್ ಹೇಳಿದ್ದಾರೆ.

ಇರುವ ನಾಲ್ಕು ಜನ ಹುಡುಗಿಯರಿಗೆ ಅರ್ಹತೆ ಇಲ್ವಾ ಎಂದು ಭವ್ಯ ಅವರು ತ್ರಿವಿಕ್ರಮ್ ಅವರ ಬಳಿ ಬೇಸರ ಹೊರ ಹಾಕಿದ್ದಾರೆ.

‘ಟಿಕೆಟ್ ಟು ಹೋಮ್’ ಫಲಕವನ್ನು ‌ಪಡೆದ ಸ್ಪರ್ಧಿಗಳು ಸುರಕ್ಷಿತ ವಲಯಕ್ಕೆ ತಲುಪಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಅದರಲ್ಲಿ ಐವರು ಸದಸ್ಯರು ತೀವ್ರ ಪೈಪೋಟಿ ‌ನೀಡಿ ಹೋರಾಡಿದ್ದಾರೆ.

ಐವರಲ್ಲಿ ಮೊದಲ ಸುತ್ತಿನಲ್ಲಿ ಭವ್ಯ ಅವರು ಅತೀ ಹೆಚ್ಚು ಅಂಕಗಳಿಸಿ ಮುನ್ನಡೆ ಸಾಧಿಸಿದ್ದಾರೆ. ಆದರೆ ಸುರಕ್ಷಿತ ವಲಯದಲ್ಲಿರುವ ಮಂಜು, ತ್ರಿವಿಕ್ರಮ್, ಧನರಾಜ್ ಅವರ ಪೈಕಿ ‘ಟಿಕೆಟ್ ಟು ಹೋಮ್’ ವಲಯಕ್ಕೆ ಹೋಗಬೇಕು ಎನ್ನುವುದನ್ನು ಒಮ್ಮತದಿಂದ ನಿರ್ಧಾರಕ್ಕೆ ಬಾರದ ಕಾರಣ ಭವ್ಯ ಅವರಿಗೆ ಆಯ್ಕೆ ಮಾಡುವ ಅವಕಾಶ ಸಿಕ್ಕಿದೆ. ಭವ್ಯ ಮಂಜು ಅವರನ್ನು ‘ಟಿಕೆಟ್ ಟು ಹೋಮ್’ ಗೆ ಹೋಗಿದ್ದಾರೆ.

ಎರಡನೇ ಸುತ್ತಿನಲ್ಲೂ ಚೆಂಡುಗಳ ಸಂಗ್ರಹದಲ್ಲಿ ತೀವ್ರ ಪೈಪೋಟಿ ನಡೆದಿದೆ. ಯಾರ ಬಳಿ ಹೆಚ್ಚು ಚೆಂಡಗಳು ಇದೆವೋ ಅವರ ಜತೆ ಇತರೆ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಭವ್ಯ ಅವರು ಮತ್ತೆ ಆಚೆ ಹೋಗಿದ್ದು, ಮಂಜು ಸುರಕ್ಷಿತ ವಲಯಕ್ಕೆ ಬಂದಿದ್ದಾರೆ.

ಮೂರನೇ ಸುತ್ತಿನಲ್ಲಿ ಮೋಕ್ಷಿತಾ ಅವರು ಗೆದ್ದಿದ್ದಾರೆ. ಈ ನಡುವೆ ಮಂಜು, ತಿವಿಕ್ರಮ್ ಹಾಗೂ ತಿವಿಕ್ರಮ್ ನಡುವೆ ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ಚರ್ಚೆ ನಡೆದಿದೆ.

ನಮ್ಮ ನಡುವೆ ಯಾಕೆ ಮಾತನಾಡ್ತೀಯ ಎಂದು ಮಂಜು ಕೇಳಿದ್ದಕ್ಕೆ ರಜತ್ ನನ್ನ ಇಷ್ಟ. ನಾನು ಕೇಳೇ ಕೇಳ್ತೇನೆ. ನನಗೆ ಸ್ವಾತಂತ್ರ್ಯ ಇದೆ. ನೀನ್ಯಾರೂ ಕೇಳೋಕೆ ಎಂದು ಒಬ್ಬರಿಗೊಬ್ಬರು ಅಸಭ್ಯ ಪದವನ್ನು ಬಳಸಿ ಗರಂ ಆಗಿದ್ದಾರೆ. ಈ ಗಲಾಟೆಯಿಂದ ಬೇಸತ್ತು ಧನರಾಜ್ ನಾನೇ ಆಚೆ ಹೋಗ್ತೀನಿ ಎಂದು ‘ಟಿಕೆಟ್ ಟು ಹೋಮ್’ ವಲಯಕ್ಕೆ ಹೋಗಿದ್ದಾರೆ.

ನಾಲ್ಕನೇ ಸುತ್ತಿನಲ್ಲಿ ಹನುಮಂತು ಅವರು ಗೆದ್ದಿದ್ದಾರೆ. ಮೂವರ ನಡುವೆ ಮಾತಿನ ಚಕಮಕಿ ನಡೆದಿದೆ. ಕೊನೆಗೆ ಹನುಮಂತು ಅವರು ಮೋಕ್ಷಿತಾ ಅವರ ಹೆಸರನ್ನು ಹೇಳಿದ್ದಾರೆ.

ವ್ಯಕ್ತಿತ್ವದಲ್ಲಿ ಹನುಮಂತು ನಿನಗಿಂತ ಮೇಲೆ ಇದ್ದಾನೆ ಎಂದು ಮಂಜು ತ್ರಿವಿಕ್ರಮ್‌ ಗೆ ಹೇಳಿದ್ದಾರೆ. ವ್ಯಕ್ತಿತ್ವದ ವಿಚಾರ ಮಾತನಾಡೋದು ನೀನು ನನ್ನ ಹತ್ರ ಎಂದು ತ್ರಿವಿಕ್ರಮ್‌ ವ್ಯಂಗ್ಯವಾಗಿ ನಕ್ಕಿ ಥೂ.. ಎಂದು ಹೇಳಿದ್ದಾರೆ. ಇದಕ್ಕೆ ಮಂಜು ಥೂ ಅಂಥ ಉಗಿದ್ದೀಯಾ ಎಂದಿದ್ದಾರೆ. ನನ್ನಷ್ಟ ನಾನು ಉಗಿತ್ತೀನಿ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಇಬ್ಬರ ನಡುವೆ ನಡಿಯೋ, ಹೋಗಲೋ ಎನ್ನುವ ಮಾತಿನ ಚಕಮಕಿ ನಡೆದಿರುವುದು ತೋರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next