ತುಮಕೂರು: ಅಟಲ್ ಭೂಜಲ್ ಯೋಜನೆಯಡಿ ಪ್ರಾಯೋಗಿಕವಾಗಿ ಜಲಭದ್ರತಾ ಯೋಜನೆಯನ್ನು ಅನುಷ್ಠಾನ ಮಾಡಲು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಜೆ.ಸಿ.ಪುರ ಗ್ರಾಪಂ ಅನ್ನು ಆಯ್ಕೆ ಮಾಡಲಾಗಿದೆ ಎಂದು ಜಿಪಂ ಸಿಇಒ ಶುಭಾ ಕಲ್ಯಾಣ್ ತಿಳಿಸಿದರು.
ನಗರದ ಜಿಪಂ ಸಭಾಂಗಣ ದಲ್ಲಿ ಗುರುವಾರ ನಡೆದ ಅಟಲ್ ಭೂ ಜಲ್ ಯೋಜನೆಯ ಪ್ರಗತಿ ಪರಿಶೀಲನೆ ಮತ್ತು ಸಮಾಲೋಚನಾ ಸಭೆಯಲ್ಲಿ ಮಾತ ನಾಡಿ, ಮೊದಲ ಹಂತದಲ್ಲಿ ಯೋಜನೆಯನ್ನು ಜೆ.ಸಿ.ಪುರ ಗ್ರಾಪಂನಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ತರಲಾಗುತ್ತಿದ್ದು, ನಂತರದಲ್ಲಿ ಮಧುಗಿರಿ ತಾಲೂಕು ದಬ್ಬೇಘಟ್ಟ ಗ್ರಾಪಂ ನಲ್ಲಿ ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಈ ಸಭೆಯಲ್ಲಿ ಯೋಜನೆಯ ಪ್ರಾಯೋ ಗಿಕಾ ನುಷ್ಠನಕ್ಕಾಗಿ ಜೆ.ಸಿ.ಪುರ ಗ್ರಾಮಪಂಚಾಯಿತಿ ಆಯ್ಕೆಗೆ ಸಂಬಂಧಿಸಿದಂತೆ ಗ್ರಾಪಂನಲ್ಲಿ ಈಗಾಗಲೇ ಸಮುದಾಯ ಸಹಭಾಗಿತ್ವದಿಂದ ಕಾರ್ಯಕ್ರಮ ಪಟ್ಟಿ ಯನ್ನು ತಯಾರಿಸಿ ಗ್ರಾಮಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಯೋಜನಾ ವರದಿಯನ್ನು ತಯಾರಿಸಿ ಕೇಂದ್ರೀಯ ಅಂತರ್ಜಲ ಮಂಡಳಿಗೆ ಸಲ್ಲಿಸಿರುವ ಮಾಹಿತಿ ಯನ್ನು ನವದೆಹಲಿಯಿಂದ ಆಗಮಿಸಿದ್ದ ಅಟಲ್ ಭೂ ಜಲ್ ಯೋಜನೆಯ ಯೋಜನಾ ನಿರ್ದೇಶಕ ಡಾ. ನಂದಕುಮಾರನ್, ಗ್ರೂಪ್ ಲೀಡರ್ ಸಿನ್ಹ, ರಾಷ್ಟ್ರೀಯ ಕಾರ್ಯಕ್ರಮ ನಿರ್ವಹಣಾ ಘಟಕದ ಸಾಮಾಜಿಕ ಅಭಿವೃದ್ಧಿ ಪರಿಣಿತ ಡಾ. ಕೆ.ಕೆ. ಗೌಲ್ ಅವರ ತಂಡಕ್ಕೆ ಒದಗಿಸಲಾಯಿತು.
ಇದನ್ನೂ ಓದಿ:ಕುರಿಗಾಹಿ ಮಹಿಳೆಗೆ ಒಲಿದ ಅಧ್ಯಕ್ಷೆ ಸ್ಥಾನ
ನಂತರ ತಂಡವು ಜಲ ಭದ್ರತಾ ಯೋಜನೆಯನ್ನು ರೂಪಿಸಿರುವ ಬಗ್ಗೆ ತೋಟಗಾರಿಕೆ, ಕೃಷಿ ಮತ್ತು ಸಣ್ಣ ನೀರಾವರಿ ಇಲಾಖೆ ಹಾಗೂ ಗ್ರಾಪಂ ಮಟ್ಟದ ಅಧಿಕಾರಿಗಳು ತಯಾರಿಸಿರುವ ಯೋಜನಾ ವರದಿಯ ಅನುಸಾರ ಚರ್ಚಿಸಿ ಮಾಹಿತಿ ಪಡೆಯಿತು. ಸಭೆಯಲ್ಲಿ ಸಪ್ಲೆçಡ್ ಸೈಡ್ ಇಂಟರ್ ವೆಂಕ್ಷನ್ ಡಿಮ್ಯಾಂಡ್ ಸೈಡ್ ಮ್ಯಾನೇಜ್ ಮೆಂಟ್ ಪದ್ಧತಿ ಅನುಸಾರ ಸಮರ್ಪಕ ಹಾಗೂ ಕಡಿಮೆ ಪ್ರಮಾಣದಲ್ಲಿ ನೀರಿನ ಬಳಕೆಗಾಗಿ ಜೆ.ಸಿ.ಪುರ ಗ್ರಾಪಂನಲ್ಲಿ ಆದ್ಯತೆ ಅನುಸಾರ ಅನುಷ್ಠಾನ ಮಾಡುತ್ತಿರುವ ಕೃಷಿ ಹೊಂಡ, ಚೆಕ್ ಡ್ಯಾಂ, ಬದು ನಿರ್ಮಾಣ, ಅರಣ್ಯೀಕರಣ ಕಾಮಗಾರಿಗಳ ಬಗ್ಗೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆಗಳು ಮಾಹಿತಿ ನೀಡಿದವು.
ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿ ಇಲಾಖಾವಾರು ಜಲಭದ್ರತಾ ಯೋಜನೆ ಅನುಷ್ಠಾನದ ಸಲುವಾಗಿ ತಮ್ಮ ಇಲಾಖೆಯಿಂದ ರೂಪಿಸಿರುವ ಕಾರ್ಯಕ್ರಮ ಪಟ್ಟಿಯ ಬಗ್ಗೆ ಮಾಹಿತಿ ನೀಡಿದರು. ಸಭೆಯ ಬಳಿಕ ಅಧಿಕಾರಿಗಳ ತಂಡವು ಚಿ.ನಾ.ಹಳ್ಳಿ ತಾಲೂಕಿನ ಜೆ.ಸಿ.ಪುರ ಗ್ರಾಪಂಗೆ ಭೇಟಿ ನೀಡಿ, ಸದರಿ ಪಂಚಾಯಿತಿಯಲ್ಲಿ ರೂಪಿಸಿರುವ ಕಾರ್ಯಕ್ರಮ ಪಟ್ಟಿಯಂತೆ ಸ್ಥಳ ಪರಿಶೀಲನೆ ನಡೆಸಿತು.