Advertisement

ಸೂರ್ಯ ಘರ್‌ ಯೋಜನೆಯಿಂದ 30 ಗಿ.ವ್ಯಾ. ಗುರಿ: ಜೋಷಿ

12:42 AM Jan 03, 2025 | Team Udayavani |

ಮಂಗಳೂರು: ದೇಶದಲ್ಲಿ ಸೂರ್ಯ ಘರ್‌ ಯೋಜನೆ ಒಂದರಿಂದಲೇ ದೇಶದಲ್ಲಿ 30 ಗಿ.ವ್ಯಾ. ಶಕ್ತಿ ಉತ್ಪಾದನೆಯ ಗುರಿ ಹೊಂದಲಾಗಿದೆ ಎಂದು ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್‌ ವಿ. ಜೋಶಿ ಹೇಳಿದರು.

Advertisement

ಜಿಲ್ಲಾಡಳಿತ, ಜಿ.ಪಂ., ಮಂಗಳೂರು ವಿದ್ಯುತ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ಮತ್ತು ಮಹಾನಗರ ಪಾಲಿಕೆ ಸಹಯೋಗದಲ್ಲಿ ಕಾವೂರಿನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ಸಭಾಂಗಣದಲ್ಲಿ ಗುರುವಾರ ಪ್ರಧಾನಮಂತ್ರಿ ಸೂರ್ಯ ಘರ್‌ ಮುಫ್‌¤ ಬಿಜಿÉ ಯೋಜನೆ ಮಾಹಿತಿ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪ್ರಸ್ತುತ 93.5 ಗಿಗಾ ವ್ಯಾಟ್‌ ಶಕ್ತಿಯ ಉತ್ಪಾದನೆ ಆಗುತ್ತಿದ್ದು, ಈ ಪೈಕಿ 2.5 ಗಿ.ವ್ಯಾ. ಸೌರಶಕ್ತಿ, 45 ಗಿ.ವ್ಯಾ. ಗಾಳಿಯಿಂದ ಶಕ್ತಿ ಉತ್ಪಾದನೆ ಆಗುತ್ತಿದೆ ಎಂದರು.

ಸೂರ್ಯಘರ್‌ ಯೋಜನೆ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಯೋ ಜನೆ. ಶಕ್ತಿಯ ಉತ್ಪಾದನೆಯಲ್ಲಿ ದೊಡ್ಡ ಪರಿವರ್ತನೆ ಆರಂಭವಾಗಿದ್ದು, ವಿದ್ಯುತ್‌ ಕೊರತೆ ಅನುಭವಿಸುತ್ತಿದ್ದ ನಾವು ವಿದ್ಯುತ್‌ ರಫ್ತು ಮಾಡುವಷ್ಟು ಮುಂದುವರಿದಿದ್ದೇವೆ ಎಂದರು.

2024ರಲ್ಲಿ ಜಗತ್ತಿನಲ್ಲೇ ಅತೀ ಹೆಚ್ಚು ಉಷ್ಣಾಂಶ ದಾಖಲಾಗಿದೆ. 2050ರ ವರೆಗೆ ಇದೇ ಪರಿಸ್ಥಿತಿ ಮುಂದುವರಿಯುವ ಬಗ್ಗೆ ಹವಾಮಾನ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ಜಾಗತಿಕ ತಾಪಮಾನದ ಪರಿಣಾಮಗಳ ಕುರಿತು ಚರ್ಚೆ ಶುರುವಾಗಿದೆ. ಆದ್ದರಿಂದ ನವೀಕರಿಸಬಹುದಾದ ಇಂಧನ ಉತ್ಪಾದನೆಯತ್ತ ಹೆಚ್ಚಿನ ಗಮನ ಹರಿಸಬೇಕು. ಸೋಲಾರ್‌ಗೆ ಸಂಬಂಧಿಸಿ ದೇಶದಲ್ಲಿ ಬ್ಯಾಟರಿ ಶಕ್ತಿ ಸಂಗ್ರಹಣೆ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದ್ದು, ಇದು ಈ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಗೆ ಕಾರಣವಾಗಲಿದೆ ಎಂದರು.

ಭವಿಷ್ಯ ನಿರ್ಮಾಣದ ಯೋಜನೆ: ಕ್ಯಾ| ಚೌಟ
ಅಧ್ಯಕ್ಷತೆ ವಹಿಸಿದ್ದ ಸಂಸದ ಕ್ಯಾ| ಬ್ರಿಜೇಶ್‌ ಚೌಟ ಅವರು ಮಾತನಾಡಿ,ವಿದ್ಯುತ್‌ ಬಳಕೆದಾರರನ್ನು ವಿದ್ಯುತ್‌ ಉತ್ಪಾದಕರನ್ನಾಗಿ ಮಾಡಿ, ಪ್ರತಿ ಮನೆಯೂ ಸೂರ್ಯ ಘರ್‌ ಆಗಬೇಕು ಎನ್ನುವ ಭವಿಷ್ಯದ ಭಾರತವನ್ನು ನಿರ್ಮಿಸುವ ಯೋಜನೆ.ಅಧಿಕಾರಿಗಳು ಜಿಲ್ಲೆಯಲ್ಲಿ ಗುರಿ ನಿಗದಿಪಡಿಸಿಕೊಡು ಯೋಜನೆಯನ್ನು ಜಾರಿಗೊಳಿಸಬೇಕು ಎಂದರು.

Advertisement

ಸೂರ್ಯ ಘರ್‌ ಯೋಜನೆಯ ಫಲಾನುಭವಿಗಳಿಗೆ ಪ್ರಮಾಣಪತ್ರ, ಸಾಲ ಮಂಜೂರಾತಿ ಪತ್ರ ವಿತರಿಸಲಾಯಿತು. ಫಲಾನುಭವಿಗಳಾದ ವಂದನಾ ನಾಯಕ್‌, ಶಮಂತ್‌ ಮತ್ತು ಅರುಣ್‌ ಜಿ.ಶೇಟ್‌ ಅಭಿಪ್ರಾಯ ತಿಳಿಸಿದರು.

ಶಾಸಕರಾದ ಡಾ| ವೈ. ಭರತ್‌ ಶೆಟ್ಟಿ, ಡಿ.ವೇದವ್ಯಾಸ ಕಾಮತ್‌, ಉಮಾನಾಥ ಎ. ಕೋಟ್ಯಾನ್‌, ಹರೀಶ್‌ ಪೂಂಜ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್‌ ಸದಸ್ಯ ರವಿ ಕುಮಾರ್‌, ಉಪಮೇಯರ್‌ ಭಾನುಮತಿ, ಮೆಸ್ಕಾಂ ಎಂಡಿ ಜಯಕುಮಾರ್‌ ಆರ್‌., ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಕವಿತಾ ಶೆಟ್ಟಿ ಉಪಸ್ಥಿತರಿದ್ದರು. ಮೆಸ್ಕಾಂ ಅಧಿಧೀಕ್ಷಕ ಎಂಜಿನಿಯರ್‌ ಕೃಷ್ಣರಾಜ ಕೆ. ಸ್ವಾಗತಿಸಿ, ತಾಂತ್ರಿಕ ವ್ಯವಸ್ಥಾಪಕ ಮಹಾದೇವ ಪ್ರಸನ್ನ ಸ್ವಾಮಿ ವಂದಿಸಿದರು.

ಜನಪ್ರತಿನಿಧಿಗಳೇ ಮಾಹಿತಿ ನೀಡಿ
ದೇಶದಲ್ಲಿ ಒಂದು ಕೋಟಿ ಮನೆಗಳಿಗೆ ಸೋಲಾರ್‌ ಪ್ಯಾನಲ್‌ ಅಳವಡಿಸುವ ಗುರಿ ಇದ್ದು, 6 ತಿಂಗಳಲ್ಲಿ 7.5 ಲಕ್ಷ ಮನೆಗಳಲ್ಲಿ ಅಳವಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಯಲ್ಲೂ ಯೋಜನೆ ಯಶಸ್ವಿಯಾಗಿ ಅನುಷ್ಠಾನ
ಗೊಳ್ಳುತ್ತಿದ್ದು, ಜನಪ್ರತಿನಿಧಿಗಳೇ ರಾಯಭಾರಿ ಗಳಾಗಿ ಜನರಿಗೆ ಮಾಹಿತಿ ನೀಡಬೇಕು ಎಂದು ಸಚಿವ ಜೋಶಿ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next