Advertisement

ರಕ್ಷಿತ್‌ ಬಗ್ಗೆ ಜಗ್ಗೇಶ್‌ ಟ್ವೀಟ್‌

12:04 PM Oct 07, 2018 | Team Udayavani |

ಜಗ್ಗೇಶ್‌ ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಗುಣವುಳ್ಳವರು. ಅದೇ ಕಾರಣದಿಂದ ಟ್ವೀಟರ್‌ನಲ್ಲಿ ತಮಗೆ ಇಷ್ಟವಾದ, ಇಷ್ಟವಾಗದ ವಿಷಯಗಳ ಬಗ್ಗೆ ಹೇಳುತ್ತಲೇ ಇರುತ್ತಾರೆ. ಈ ಬಾರಿ ಜಗ್ಗೇಶ್‌, ನಟ ರಕ್ಷಿತ್‌ ಶೆಟ್ಟಿ ಕುರಿತಾಗಿ ಟ್ವೀಟ್‌ ಮಾಡಿದ್ದಾರೆ. ರಕ್ಷಿತ್‌ ಅವರ ಸಿನಿಮಾ ಪ್ರೀತಿ ಹಾಗೂ ಚಿತ್ರರಂಗದಲ್ಲಿ ಮುಖವಾಡ ಹಾಕಿ ಬರುವವರನ್ನು ದೂರು ಇಡುವ ಕಲೆ ಕರಗತವಾಗಬೇಕೆಂದೂ ಹೇಳಿದ್ದಾರೆ.

Advertisement

ಜಗ್ಗೇಶ್‌ ಅವರ ಈ ಟ್ವೀಟ್‌ಗೆ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಕೂಡಾ ವ್ಯಕ್ತವಾಗಿದೆ. ರಕ್ಷಿತ್‌ ಹಾಗೂ ಜಗ್ಗೇಶ್‌ “ವಾಸ್ತುಪ್ರಕಾರ’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಅಷ್ಟಕ್ಕೂ ಜಗ್ಗೇಶ್‌ ಮಾಡಿರುವ ಟ್ವೀಟ್‌ ಏನೆಂದರೆ,  “ನಾನು ಕಂಡ ಅದ್ಭುತ ಸಜ್ಜನಿಕೆಯ ಕಲಾ ಬಂಧು. ಸದಾ ಸಿನಿಮಾಗಾಗಿ ತುಡಿಯುವ ಕಲಾತಪಸ್ವಿ.ಇವನಿಗೆ ದೇವರ ದಯೆಯಿಂದ ಇನ್ನು ಎತ್ತರದ ದಿನಗಳು ಕಾದಿದೆ ಎಂದು ನನ್ನ ಮನ ಹೇಳಿತು.

ನಮ್ಮ ಯಶಸ್ಸು ಕಬಳಿಸಿ ಮೇಲೆರಲು ಅನೇಕರು ಮುಖವಾಡ ಹಾಕಿ ಬರುತ್ತಾರೆ. ಇದು ಪ್ರಾಪಂಚಿಕ ವಾಮ ಮಾರ್ಗ ತಂತ್ರ! ಇಂಥವರ ನಗುತ್ತ ಪಕ್ಕ ತಳ್ಳುವ ಕಲೆ ಕರಗತವಾಗಲಿ ಮುಂದೆ!’ ಎಂದು ಟ್ವೀಟ್‌ ಮಾಡಿದ್ದಾರೆ. ಜಗ್ಗೇಶ್‌ ಅವರು ಟ್ವೀಟರ್‌ನಲ್ಲಿ ಬಳಸಿರುವ  “ನಮ್ಮ ಯಶಸ್ಸು ಕಬಳಿಸಿ ಮೇಲೆರಲು ಅನೇಕರು ಮುಖವಾಡ ಹಾಕಿ ಬರುತ್ತಾರೆ.

ಇದು ಪ್ರಾಪಂಚಿಕ ವಾಮ ಮಾರ್ಗ ತಂತ್ರ’ ಎಂಬ ಅಂಶ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಅಂಶವನ್ನು ಜಗ್ಗೇಶ್‌ ಯಾರ ಕುರಿತಾಗಿ ಹೇಳಿರಬಹುದೆಂಬ ಲೆಕ್ಕಾಚಾರಗಳೂ ಆರಂಭವಾಗಿವೆ.ಅಂದಹಾಗೆ, ಇತ್ತೀಚೆಗೆ ರಕ್ಷಿತ್‌, ರಶ್ಮಿಕಾ ಜೊತೆಗಿನ ಬ್ರೇಕಪ್‌ನಿಂದ ಹೆಚ್ಚು ಸುದ್ದಿಯಾಗಿದ್ದರು. ಸದ್ಯ ರಕ್ಷಿತ್‌ ಅವರ “ಅವನೇ ಶ್ರೀಮನ್ನಾರಾಯಣ’ ಚಿತ್ರೀಕರಣ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next