ಚನ್ನರಾಯಪಟ್ಟಣ: ಸಂಕ್ರಾಂತಿ ಹಬ್ಬಕ್ಕಾಗಿ ಸಿದ್ಧಪಡಿಸಿ ರುವ ಎಳ್ಳು ಬೆಲ್ಲಗಳ ಪೊಟ್ಟಣಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ಜತೆಗೆ ಎಳ್ಳು ಬೆಲ್ಲ, ಸಕ್ಕರೆ ಅಚ್ಚುಗಳನ್ನೂ ಬಿಡಿ ಬಿಡಿಯಾಗಿ ಖರೀದಿಸಲು ಜನ ಮುಂದಾಗಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೊಂಚ ದುಬಾರಿಯಾಗಿದೆ.
ವ್ಯಾಪಾರ ಜೋರು
ಮನೆಯಲ್ಲಿ ಎಳ್ಳು ಬೆಲ್ಲಕ್ಕೆ ತಯಾರು ಮಾಡಲು ಅಗತ್ಯ ವಸ್ತುಗಳನ್ನು ಮಹಿಳೆ ಯರು ಖರೀದಿ ಮಾಡುತ್ತಿದ್ದು ಮಾರುಕಟ್ಟೆಯಲ್ಲಿ ವ್ಯಾಪಾರ ಗರಿಗೆದರಿದೆ. ಇನ್ನು ಹಲವು ಮಂದಿ ಸಿದ್ಧಪಡಿಸಿರುವ ಎಳ್ಳು ಬೆಲ್ಲವನ್ನೂ ಖರೀದಿ ಮಾಡುವ ಮೂಲಕ ತಮ್ಮ ಕೆಲಸ ಸಲೀಸು ಮಾಡಿಕೊಳ್ಳುತ್ತಿದ್ದಾರೆ. ಹೇಳಿ ಕೇಳಿ ತಾಲೂಕು ಕಲ್ಪತರು ನಾಡಾಗಿದ್ದು ಅಷ್ಟಾಗಿ ಕೊಬ್ಬರಿ ಖರೀದಿ ಮಾಡುವವರ ಸಂಖ್ಯೆ ಕಡಿಮೆ ಇದೆ. ಆದರೂ ಪ್ರತಿ ಕೆ.ಜಿ.ಗೆ ಉಂಡೆ ಕೊಬ್ಬರಿ 180 ರಿಂದ 200 ರೂ. ಇದೆ. ತುಂಡು ಮಾಡಿರುವ ಕೊಬ್ಬರಿ ಕೆ.ಜಿ.ಗೆ 300 ರೂ.ಇದೆ.
ಸುಗ್ಗಿ ಸಂಭ್ರಮವಿಲ್ಲ
ಸಂಕ್ರಾಂತಿಯನ್ನು ಗ್ರಾಮೀಣ ಭಾಗದಲ್ಲಿ ಸುಗ್ಗಿ ಸಂಭ್ರಮದ ಮೂಲಕ ಆಚರಣೆ ಮಾಡುತ್ತಾರೆ. ಆದರೆ ಪ್ರಸಕ್ತ ವರ್ಷ ಕೊರೊನಾ ನಿಯಮ ಇರುವುದರಿಂದ ಸಂಭ್ರಮವಿಲ್ಲದಂತಾಗಿದೆ. ಇನ್ನು ನಗರ ಪ್ರದೇಶದಲ್ಲಿ ಈಗಾಗಲೇ ಪುರಸಭೆ ಹಾಗೂ ಆರೋಗ್ಯ ಇಲಾಖೆ ಆಟೋ ಮೂಲಕ ಪ್ರಚಾರ ಮಾಡುತ್ತಿದ್ದು ಹೆಚ್ಚು ಮಂದಿ ಒಟ್ಟಿಗೆ ಸೇರ ಬಾರದು ಎಂದು ಹೇಳುತ್ತಿದೆ. ಹಾಗಾಗಿ ನಗರ ದಲ್ಲಿಯೂ ಸಂಭ್ರಮವಿಲ್ಲ ದಂತಾಗಲಿದೆ.
ಗ್ರಾಮೀಣರಿಂದಲೂ ಖರೀದಿ
ಎಳ್ಳು ಬೆಲ್ಲ ತಯಾರು ಮಾಡಲು ಅಗತ್ಯ ವಸ್ತುಗಳನ್ನು ಗ್ರಾಮೀ ಣರು ಖರೀದಿ ಮಾಡಿ ಮನೆಯಲ್ಲಿ ಎಳ್ಳು ಬೆಲ್ಲ ತಯಾರು ಮಾಡುತ್ತಿದ್ದರು. ಆದರೆ ಇತ್ತೀಚಿನ ವರ್ಷ ಗಳಲ್ಲಿ ಗ್ರಾಮೀಣ ಭಾಗದವರೂ ಮಿಶ್ರಣದೊಂದಿಗೆ ಸಿದ್ಧಗೊಂಡಿರುವ ಎಳ್ಳು ಬೆಲ್ಲ ಖರೀದಿಗೆ ಮುಂದಾ ಗುತ್ತಿದ್ದಾರೆ. ಕೃಷಿ ಕೆಲಸ ಹೈನುಗಾರಿಕೆ ನಡುವೆ ಹಬ್ಬಕ್ಕೆ ಎಳ್ಳು ಬೆಲ್ಲ ತಯಾರು ಮಾಡಲು ಸಮಯದ ಅಭಾವ ವಿರುವುದರಿಂದ ಮಿಶ್ರಣಕ್ಕೆ ಮೊರೆ ಹೋಗುತ್ತಿದ್ದಾರೆ.
ಬಣ್ಣದ ಅಚ್ಚು ಮಾರಾಟ
ಆರೋಗ್ಯಕ್ಕೆ ಹಾನಿಕರವಾಗಿ ರುವ ಬಣ್ಣ ಬಳಸಿ ಜೀರಿಗೆ ಹಾಗೂ ಸಕ್ಕರೆ ಅಚ್ಚುನ್ನು ತಯಾರು ಮಾಡಿ ಬಗೆ ಬಗೆಯ ಆಕಾರದೊಂದಿಗೆ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ತಿನಿಸು ತಡೆಯ ಬೇಕಾ ಗಿರುವ ಪುರಸಭೆ ಆರೋಗ್ಯಾಧಿಕಾರಿ ಆಗಲಿ, ಆರೋಗ್ಯ ಇಲಾಖೆ ಆಹಾರ ನಿರೀಕ್ಷಕರಾಗಲಿ ಇತ್ತ ಗಮನ ಹರಿಸುತ್ತಿಲ್ಲ