Advertisement

ಆಂಧ್ರ ಪ್ರದೇಶದಲ್ಲಿ ಝಗಮಗಿಸಿದ ಜಗನ್‌

02:16 PM May 24, 2019 | Team Udayavani |

25 ಸಂಸತ್‌ ಬಲದ ಆಂಧ್ರಪ್ರದೇಶದಲ್ಲಿ ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್‌ ಕಾಂಗ್ರೆಸ್‌ ಪಾರ್ಟಿ ಕ್ಲೀನ್‌ ಸ್ವೀಪ್‌ ಮಾಡಿದೆ. ಈ ಮೂಲಕ ಲೋಕಸಭೆ ಯಲ್ಲಿ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಎನ್‌ಡಿಎಗೆ ಸೆಡ್ಡು ಹೊಡೆದು ಪ್ರಾದೇಶಿಕ ಪಕ್ಷಗಳನ್ನು ಒಂದುಗೂಡಿಸಿ ಕೇಂದ್ರದಲ್ಲಿ ಅಧಿಕಾರ ನಡೆಸಲು ತಂತ್ರಗಾರಿಕೆ ನಡೆಸುತ್ತಿದ್ದ ಟಿಡಿಪಿ ನೇತಾರ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ರಾಜ್ಯದಲ್ಲೇ ಸೊನ್ನೆ ಸುತ್ತಿದ್ದಾರೆ.

Advertisement

ತವರು ರಾಜ್ಯದಲ್ಲೇ ಖಾತೆ ತೆರೆಯುವಲ್ಲಿ ವಿಫ‌ಲರಾಗಿರುವ ನಾಯ್ಡುಗೆ ರಾಷ್ಟಮಟ್ಟದಲ್ಲಿ ಭಾರೀ ಮುಖಭಂಗವಾಗಿದೆ. ಜಗನ್‌ ವಿರುದ್ಧ ಸಂಪೂರ್ಣವಾಗಿ ಮಂಡಿಯೂರಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂದ್ದ ಟಿಡಿಪಿ ಯಶ ಕಂಡಿತ್ತು. ರಾಜ್ಯದಲ್ಲಿ ಅಧಿಕಾರ ಹಿಡಿಯುವುದರ ಜೊತೆಗೆ ಎನ್‌ಡಿಎಸ್‌ ಸರ್ಕಾರದಲ್ಲೂ ಸಚಿವ ಸ್ಥಾನಗಿಟ್ಟಿಸಿಕೊಂಡಿತ್ತು.

ಜೊತೆಗೆ ಖ್ಯಾತ ನಟ ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಪಾರ್ಟಿ ಕೂಡ ಹೀನಾಯ ಸೋಲನ್ನಪ್ಪಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಸಹ ಖಾತೆ ತೆರೆದಿಲ್ಲ. ಆಂಧ್ರ ವಿಭಜನೆ ನಂತರ ಮೊದಲ ಬಾರಿ ಅಧಿಕಾರಕ್ಕೇರಿದ್ದ ಚಂದ್ರಬಾಬು ನಾಯ್ಡು ಅವರ ವೈಫ‌ಲ್ಯಗಳು ಹಾಗೂ ಆಡಳಿತವಿರೋಧಿ ಅಲೆ ಯನ್ನು ಮುಂದಿಟ್ಟುಕೊಂಡು ಕಳೆದ ಎರಡೂ¾ರು ವರ್ಷ ಗಳಿಂದ ಸಂಘಟಿತ ಹೋರಾಟ ನಡೆಸಿದ್ದ ಜಗನ್‌, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಅಭೂತಪೂರ್ವ ಜಯ ದಾಖಲಿಸಿದ್ದಾರೆ. ರಾಜ್ಯದಲ್ಲಿ 3,648 ಕಿ.ಮೀ. ಪಾದಯಾತ್ರೆ ನಡೆಸಿದ್ದ ಜಗನ್‌, ಪ್ರತಿ ಹಳ್ಳಿಗಳನ್ನೂ ಸುತ್ತಿ ಜನರಿಗೆ ಹತ್ತಿರವಾಗಿ, ಅನುಕಂಪದ ಲಾಭ ಪಡೆಯುವಲ್ಲಿ ಸಫ‌ಲರಾಗಿದ್ದಾರೆ. ಈ ಹಿಂದೆ ಅವರ ತಂದೆ ವೈ.ಎಸ್‌.ರಾಜಶೇಖರ ರೆಡ್ಡಿ ಕೂಡ ಬೃಹತ್‌ ಪಾದಯಾತ್ರೆ ನಡೆಸಿ ಕಾಂಗ್ರೆಸ್‌ ಅಧಿಕಾರಕ್ಕೆ ತರವಲ್ಲಿ ಯಶಸ್ವಿಯಾಗಿದ್ದರು.

ಗೆದ್ದ ಪ್ರಮುಖರು
ಬಾಲನ್‌ ಚಂದ್ರಶೇಖರ್‌,
(ವೈಎಸ್‌ಆರ್‌)- ವಿಜಯನಗರಂ
ಬಲ್ಲಿ ದುರ್ಗ ಪ್ರಸಾದ್‌ ರಾವ್‌
(ವೈಎಸ್‌ಆರ್‌)-ತಿರುಪತಿ
ಆಯುಷ್ಮಾನ್‌ ಡಾಕ್ಟರ್‌ ಸಂಜೀವ್‌ಕುಮಾರ್‌, (ವೈಎಸ್‌ಆರ್‌)- ಕರ್ನೂಲು

ಸೋತ ಪ್ರಮುಖರು
ಪುಸಪತಿ ಅಶೋಕ್‌ ಗಣಪತಿ ರಾಜು, (ಟಿಡಿಪಿ)-ವಿಜಯನಗರಂ
ಕಿಶೋರ್‌ ಚಂದ್ರ ಡಿಯೊ, (ಟಿಡಿಪಿ)-ಅರಕು
ಕೆಸಿನೇನಿ ಶ್ರೀನಿವಾಸ್‌, (ಟಿಡಿಪಿ)-ವಿಜಯವಾಡ
ಜನರು ನೀಡಿದ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ ಮತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಜಗನ್‌ರೆಡ್ಡಿಯವರಿಗೆ ಶುಭವಾಗಲಿ.
ಚಂದ್ರಬಾಬು ನಾಯ್ಡು, ಆಂಧ್ರ ಸಿಎಂ

Advertisement

ವೈಎಸ್‌ಆರ್‌ ಕಾಂಗ್ರೆಸ್‌ಗೆ ಮತ ನೀಡಿದ ಆಶೀರ್ವದಿಸಿದ್ದಕ್ಕೆ ಧನ್ಯವಾದ ಅರ್ಪಿಸು ತ್ತೇನೆ. ಈ ಫ‌ಲಿತಾಂಶ ವಿಶ್ವಾಸಾರ್ಹತೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುತ್ತೇನೆ.
ಜಗನ್‌ಮೋಹನ್‌ ರೆಡ್ಡಿ ,  ವೈಆರ್‌ಎಸ್‌ ಕಾಂಗ್ರೆಸ್‌ ನೇತಾರ

Advertisement

Udayavani is now on Telegram. Click here to join our channel and stay updated with the latest news.

Next